ಒಂದು ಕಾಲದ ಟಾಪ್ ನಟಿ ನಿಕಿತಾ ರವರ ಇದೀಗ ಎಲ್ಲಿದ್ದಾರೆ ಗೊತ್ತಾ?? ಕ್ಯಾಮೆರಾ ಕಣ್ಣಿಗೆ ಕೊನೆಗೂ ಸಿಕ್ಕಿಬಿದ್ದದು ಎಲ್ಲಿ ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರ ರಂಗದಲ್ಲಿ ಅನೇಕ ಯಶಸ್ವಿ ಜೋಡಿಗಳಿವೆ. ಅವುಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ, ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ, ಯಶ್ ಮತ್ತು ರಾಧಿಕಾ ಪಂಡಿತ್, ದರ್ಶನ್ ಮತ್ತು ರಕ್ಷಿತಾ ಹೀಗೆ ಅನೇಕ ನಟ-ನಟಿಯರು ಜೊತೆಯಾಗಿ ನಟಿಸಿದ ಸಿನಿಮಾಗಳು ಎಲ್ಲವು ಸೂಪರ್ ಹಿಟ್ ಆಗಿ ಕ್ಯುಟೆಸ್ಟ್ ಜೋಡಿಗಳು ಎಂದೆನಿಸಿಕೊಂಡಿವೆ.

ಅಂತೆಯೇ ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಖಿತಾ ತುಕ್ರಾವಾಲ್ ಕೂಡ ಸಿನಿ ಪ್ರೇಕ್ಷಕರ ಫೇವರೇಟ್ ಜೋಡಿಗಳಲ್ಲಿ ಒಂದಾಗಿದೆ.ನಟಿ ನಿಖಿತಾ ದರ್ಶನ್ ನಟನೆಯ ಯೋಧ, ಪ್ರಿನ್ಸ್, ಸಂಗೊಳ್ಳಿ ರಾಯಣ್ಣ ನಟಿಸಿರುವ ಸಿನಿಮಾಗಳೆಲ್ಲವು ಸೂಪರ್ ಹಿಟ್ ಆಗಿದೆ.ಈ ಜೋಡಿ ಮತ್ತೆ ಜೊತೆಯಾಗಿ ನಟಿಸಲಿದ್ದಾರೆ ಎನ್ನುವ ಸಮಯದಲ್ಲಿ ನಟಿ ನಿಖಿತಾ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಾರೆ.

ನಟಿ ನಿಖಿತಾ ತಮ್ಮ ಬೋಲ್ಡ್ ನಟನೆ ಮತ್ತು ಬ್ಯೂಟಿ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು. ಕನ್ನಡ ಮಾತ್ರ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿ ಪಂಚಭಾಷಾ ತಾರೆಯಾಗಿ ಮಿಂಚಿದ್ದ ನಟಿ ನಿಖಿತಾ ತಮ್ಮ ಸಿನಿಮಾ ಕ್ಷೇತ್ರದಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುವ ನಿರ್ಧಾರಕ್ಕೆ ಬರುತ್ತಾರೆ.

nikitha 1 | ಒಂದು ಕಾಲದ ಟಾಪ್ ನಟಿ ನಿಕಿತಾ ರವರ ಇದೀಗ ಎಲ್ಲಿದ್ದಾರೆ ಗೊತ್ತಾ?? ಕ್ಯಾಮೆರಾ ಕಣ್ಣಿಗೆ ಕೊನೆಗೂ ಸಿಕ್ಕಿಬಿದ್ದದು ಎಲ್ಲಿ ಗೊತ್ತೆ??
ಒಂದು ಕಾಲದ ಟಾಪ್ ನಟಿ ನಿಕಿತಾ ರವರ ಇದೀಗ ಎಲ್ಲಿದ್ದಾರೆ ಗೊತ್ತಾ?? ಕ್ಯಾಮೆರಾ ಕಣ್ಣಿಗೆ ಕೊನೆಗೂ ಸಿಕ್ಕಿಬಿದ್ದದು ಎಲ್ಲಿ ಗೊತ್ತೆ?? 2

ಇದಕ್ಕೆ ಪ್ರಮುಖ ಕಾರಣ ಅಂದರೆ ನಟ ದರ್ಶನ್ ಅವರ ದಾಂಪತ್ಯ ಜೀವನ ದಲ್ಲಿ ಬಿರುಗಾಳಿ ಎಬ್ಬಿದ್ದಾಗ ನಟಿ ನಿಖಿತಾ ಅವರ ಹೆಸರು ದರ್ಶನ್ ಅವರೊಟ್ಟಿಗೆ ತಳುಕು ಹಾಕಿಕೊಳ್ಳುತ್ತದೆ. ನಿಖಿತಾ ಮೊದಲು ನಟಿಸಿದ ಕನ್ನಡದ ಸಿನಿಮಾ ಅಂದರೆ ಅದು ಕಿಚ್ಚ ಸುದೀಪ್ ಅಭಿನಯದ ಮಹಾರಾಜ ಸಿನಿಮಾ. ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಪಡೆದ ನಿಖಿತಾ ತದ ನಂತರ ದರ್ಶನ್, ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ, ಜಗ್ಗೇಶ್ ಅಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹೀಗೆ ಸಿನಿ ಜೀವನದಲ್ಲಿ ಬೇಡಿಕೆಯ ನಟಿಯಾಗಿರುವಾಗಲೇ 2016 ರಲ್ಲಿ ಗಗನ್ ದೀಪ್ ಸಿಂಗ್ ಎಂಬುವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ.

ಇನ್ನು ಮದುವೆಯ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡು ಇತ್ತೀಚೆಗೆ ಒಂದು ಮಗುವಿಗೆ ಜನ್ಮ ನೀಡಿದ್ದು, ತಮ್ಮ ಪತಿ ಮತ್ತು ಮಗುವಿನೊಂದಿಗೆ ಸುಂದರ ಬದುಕನ್ನು ನಡೆಸುತ್ತಿದ್ದಾರೆ. ಸೋಶೀಯಲ್ ಮೀಡಿಯಾಗಳಲ್ಲಿ ಸಕ್ರೀಯರಾಗಿರುವ ನಟಿ ನಿಖಿತಾ ತಮ್ಮ ಮುದ್ದಾದ ಮಗುವಿನೊಂದಿಗೆ ಕಾಲ ಕಳೆಯುತ್ತಿರುವ ಫೋಟೋ ಮತ್ತು ವೀಡಿಯೋಗಳನ್ನು ಹಂಚಿ ಕೊಳ್ಳುತ್ತಿರುತ್ತಾರೆ.ಒಟ್ಟಾರೆಯಾಗಿ ನಟಿ ನಿಖಿತಾ ಅವರನ್ನು ಮತ್ತೆ ಬೆಳ್ಳಿ ಪರದೆಯಲ್ಲಿ ನೋಡಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಅದೂ ಕೂಡ ದರ್ಶನ್ ಅವರೊಟ್ಟಿಗೆ ನಿಖಿತಾ ಮತ್ತೆ ನಟಿಸಬೇಕು ಎಂದು ಕನ್ನಡ ಸಿನಿ ಪ್ರೇಕ್ಷಕರು ಅಪೇಕ್ಷೆ ಪಡುತ್ತಿದ್ದಾರೆ.

Comments are closed.