News from ಕನ್ನಡಿಗರು

ಚಿತ್ರೀಕರಣದ ವೇಳೆ ನಡೆದಂತಹ ಆ ಒಂದು ವಿಷಯ ನೆನೆದು ಕಣ್ಣೀರಿಟ್ಟ ಡಿ ಬಾಸ್! ವಿಡಿಯೋ ಸಖತ್ ವೈರಲ್..!!

182

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಅಂದರೆ ಅದು ಚಾಲೇಂಜಿಂಗ್ ಸ್ಟಾರ್ ದರ್ಶನ್. ಲೈಟಿಂಗ್ ಬಾಯ್ ಆಗಿ ಕೆಲಸ ಮಾಡುವ ಮೂಲಕ ಕನ್ನಡ ಸಿನಿ ಉದ್ಯಮಕ್ಕೆ ಕಾಲಿಟ್ಟ ದರ್ಶನ್ ತದ ನಂತರ ಧಾರಾವಾಹಿಯ ಮೂಲಕ ಬಣ್ಣ ಹಚ್ಚುತ್ತಾರೆ. ಈ ಮೊದಲು ಅಭಿನಯ ತರಬೇತಿಗಾಗಿ ನಟ ದರ್ಶನ್ ಅವರು ನೀನಾಸಂ ರಂಗ ಶಾಲೆಯಲ್ಲಿ ನಟನೆಯ ತರಬೇತಿ ಪಡೆದು ನಾಟಕಗಳನ್ನು ಮಾಡಿರುತ್ತಾರೆ. ತದ ನಂತರ ಧಾರಾವಾಹಿಗಳಲ್ಲಿ ಅವಕಾಶ ಪಡೆದು ಸಣ್ಣ ಪುಟ್ಟ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಾದ ಬಳಿಕ ಬಣ್ಣದ ಲೋಕದಲ್ಲಿ ಯಾರೂ ಕೂಡ ದರ್ಶನ್ ಖ್ಯಾತ ಖಳ ನಟ ತೂಗುದೀಪ ಶ್ರೀ ನಿವಾಸ್ ಅವರ ಪುತ್ರ ಎಂದು ಕರೆದು ಅವಕಾಶ ಕೊಟ್ಟಿರಲಿಲ್ಲ.

ಅಂತೆಯೇ ದರ್ಶನ್ ಅವರು ಸಹ ನಾನು ತೂಗುದೀಪ ಶ್ರೀನಿವಾಸ್ ಅವರ ಮಗ ನನಗೆ ಅವಕಾಶ ಕೊಡಿ ಎಂದು ಎಲ್ಲಿಯೂ ಹೋಗಿರಲಿಲ್ಲ. ತಮ್ಮ ಸ್ವಂತ ಪ್ರತಿಭೆಯಿಂದ ಗಾಂಧಿನಗರದಲ್ಲಿ ಗುರುತಿಸಿಕೊಳ್ಳುತ್ತಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರೆಬೆಲ್ ಸ್ಟಾರ್ ಅಂಬರೀಷ್ ಮುಖ್ಯ ಭೂಮಿಕೆಯ ದೇವರ ಮಗ ಚಿತ್ರದಲ್ಲಿ ನಟ ದರ್ಶನ್ ಖಳ ನಟನಾಗಿ ನಟಿಸುತ್ತಾರೆ. ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ ದರ್ಶನ್ ನಿರ್ದೇಶಕ ಪಿ.ಎನ್.ಸತ್ಯ ಅವರಿಗೆ ಸಿಗುತ್ತಾರೆ. 2001 ನಿರ್ದೇಶಕ ಪಿ.ಎನ್.ಸತ್ಯ ರೌಡಿಸಂ ಮತ್ತು ಪ್ರೇಮ ಕಥಾಹಂದರ ಹೊಂದಿದ್ದ ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ನಾಯಕ ನಟರಾಗಿ ಸ್ಯಾಂಡಲ್ ವುಡ್ ಗೆ ಪರಿಚಯರಾಗುತ್ತಾರೆ. ಮೆಜಿಸ್ಟಿಕ್ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗುತ್ತದೆ.

ಅಂದು ಗಾಂಧಿನಗರ ಸ್ಯಾಂಡಲ್ ವುಡ್ ಗೆ ಒಬ್ಬ ಆರಡಿ ಸ್ಪುರದ್ರೂಪಿ ನಟ ಸಿಕ್ಕ ಭವಿಷ್ಯದ ನಟನಾಗಿ ಮಿಂಚಬಹುದು ಎಂದು ಮಾತನಾಡಿಕೊಳ್ಳುತ್ತದೆ. ತದ ನಂತರ ತೆರೆಕಂಡ ಕರಿಯ ಸಿನಿಮಾ ದರ್ಶನ್ ಅವರ ಸಿನಿ ಬದುಕಿಗೆ ಹೊಸದೊಂದು ತಿರುವನ್ನು ನೀಡುತ್ತದೆ. ಪ್ರೇಮ್ ನಿರ್ದೇಶನದ ಈ ಕರಿಯ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುತ್ತದೆ. ನಟ ದರ್ಶನ್ ಈ ಚಿತ್ರದ ಮೂಲಕ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟರಾಗಿ ಬೆಳೆಯುತ್ತಾರೆ. ಇಂದು ನಟ ದರ್ಶನ್ ಚಾಲೇಂಜಿಂಗ್ ಸ್ಟಾರ್ ದರ್ಶನ್ ಆಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ದಾಸನಾಗಿ,ಯಜಮಾನಾನಾಗಿ, ಪ್ರೀತಿಯ ಡಿ ಬಾಸ್ ಆಗಿ ನೆಲೆಸಿದ್ದಾರೆ.

ದಾನ ಧರ್ಮ ಸ್ನೇಹಪರತೆಯ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್ ಅವರಿಗೆ ತನ್ನ ಅಭಿಮಾನಿಗಳೇ ವಿಐಪಿ. ಸಿನಿಮಾದ ಜೊತೆಗೆ ಅರಣ್ಯ ಪ್ರವಾಸ, ಫೋಟೋಗ್ರಫಿ, ಹೈನುಗಾರಿಕೆಯ ಬಗ್ಗೆ ಅತೀವ ಆಸಕ್ತಿ ಹೊಂದಿರುವ ದರ್ಶನ್ ಅವರಿಗೆ ಮೂಕ ಪ್ರಾಣಿಗಳೆಂದರೆ ಅಪಾರ ಪ್ರೀತಿ ಕಾಳಜಿ. ಅಂತೆಯೇ ಅವರ ಮಾತು ಒರಟಾಗಿದ್ದರು ಸಹ ಅವರ ಮನಸ್ಸು ಹೂವಿನಂತಹ ಭಾವನಾತ್ಮಕ ಜೀವಿ. ಇತ್ತೀಚೆಗೆ ದರ್ಶನ್ ಅವರ ವೀಡಿಯೋವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿದೆ.

ಆ ವೀಡಿಯೋದಲ್ಲಿ ನಟ ದರ್ಶನ್ ತಮ್ಮ ನಟನೆಯ ಚಿತ್ರವೊಂದರ ಚಿತ್ರೀಕರಣದಲ್ಲಿ ವಿರಾಮ ಇರುತ್ತದೆ. ಆ ನಡುವೆ ಲೈಟಿಂಗ್ ಬಾಯ್ ಒಬ್ಬ ಲೈಟ್ಗಳನ್ನ ಅರೆಂಜ್ ಮಾಡಲು ಟೂಲ್ ಮೇಲೆ ನಿಂತು ಕಷ್ಟಪಡುತ್ತಿರುತ್ತಾರೆ. ಈ ದೃಶ್ಯ ನಟ ದರ್ಶನ್ ಅವರ ಕಣ್ಣಿಗೆ ಬೀಳುತ್ತದೆ. ಆ ದೃಶ್ಯವನ್ನ ದರ್ಶನ್ ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಆ ಲೈಟಿಂಗ್ ಕೆಲಸ ಮಾಡುವ ಹುಡುಗನನ್ನೇ ನೋಡುತ್ತಿರುತ್ತಾರೆ. ಏಕೆಂದರೆ ತಾವು ಕೂಡ ಲೈಟಿಂಗ್ ಬಾಯ್ ಆಗಿ ಕೆಲಸ ಮಾಡಿದ್ದರಿಂದ ತಮ್ಮ ಜೀವನದ ಕಷ್ಟದ ದಿನಗಳನ್ನ ನೆನೆಯುತ್ತಾ ಭಾವುಕರಾಗಿರುತ್ತಾರೆ‌. ಈ ದೃಶ್ಯ ಸನ್ನಿವೇಶದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

Leave A Reply

Your email address will not be published.