ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆಗೆ ಡೇಟಿಂಗ್ ಮಾಡುವ ಕುರಿತಂತೆ ರಶ್ಮಿಕ ಮಂದಣ್ಣ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಯಶಸ್ಸನ್ನು ಸಾಧಿಸಿರುವ ನಟಿ ಯಾರೆಂದು ಕೇಳಿದರೆ ಖಂಡಿತವಾಗಿ ಕಣ್ಣುಮುಚ್ಚಿಕೊಂಡು ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಕೂಡ ರಶ್ಮಿಕಾ ಮಂದಣ್ಣ ನವರು ತಮ್ಮ ಜನಪ್ರಿಯತೆಯನ್ನು ಸಾಧಿಸಿದ್ದಾರೆ.

rashmika 22 | ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆಗೆ ಡೇಟಿಂಗ್ ಮಾಡುವ ಕುರಿತಂತೆ ರಶ್ಮಿಕ ಮಂದಣ್ಣ ಹೇಳಿದ್ದೇನು ಗೊತ್ತಾ??
ತಮಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆಗೆ ಡೇಟಿಂಗ್ ಮಾಡುವ ಕುರಿತಂತೆ ರಶ್ಮಿಕ ಮಂದಣ್ಣ ಹೇಳಿದ್ದೇನು ಗೊತ್ತಾ?? 2

ಈಗಾಗಲೇ ಕನ್ನಡ ತೆಲುಗು ತಮಿಳು ಮಾತ್ರವಲ್ಲದೆ ಬಾಲಿವುಡ್ನಲ್ಲಿ ಅಮಿತಾಬಚ್ಚನ್ ಸಿದ್ಧಾರ್ಥ್ ಮಲ್ಹೋತ್ರ ರವರಂತಹ ಸ್ಟಾರ್ ನಟರೊಂದಿಗೆ ನಟಿಸುತ್ತಿದ್ದಾರೆ. ಎಲ್ಲಾ ಸ್ಟಾರ್ ಚಿತ್ರದ ನಿರ್ಮಾಪಕರು ಕೂಡ ನಮಗೆ ನಮ್ಮ ಚಿತ್ರಗಳಿಗೆ ರಶ್ಮಿಕಾ ಮಂದಣ್ಣ ನವರೇ ನಾಯಕಿಯಾಗಿ ಬರಬೇಕೆಂಬ ಬೇಡಿಕೆಯನ್ನು ಕೂಡ ಇಡುತ್ತಿದ್ದಾರೆ. ಇಷ್ಟೊಂದು ಕಡಿಮೆ ಸಮಯದಲ್ಲಿ ಇಷ್ಟೊಂದು ಜನ ಪ್ರಿಯತೆಯನ್ನು ಪಡೆದುಕೊಂಡಿರುವುದು ರಶ್ಮಿಕ ಮಂದಣ್ಣ ನವರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ರಶ್ಮಿಕ ಮಂದಣ್ಣ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರ ಪಂಚ ಭಾಷೆಗಳಲ್ಲಿ ಇದೇ ಡಿಸೆಂಬರ್ 17ಕ್ಕೆ ಬಿಡುಗಡೆಯಾಗಲಿದೆ.

ಇತ್ತೀಚಿಗಷ್ಟೇ ಚಿತ್ರದ ಸಾಮಿ ಸಾಮಿ ಹಾಡು ಬಿಡುಗಡೆಯಾಗಿದ್ದು ಚಿತ್ರದ ಕುರಿತಂತೆ ಇನ್ನಷ್ಟು ಕುತೂಹಲವನ್ನು ಹೆಚ್ಚುವಂತೆ ಮಾಡಿದೆ. ಇನ್ನು ಕೇವಲ ಸಿನಿಮಾ ಸುದ್ದಿಗಳಿಗೆ ಮಾತ್ರವಲ್ಲದೆ ವೈಯಕ್ತಿಕ ಜೀವನದ ಸುದ್ದಿಗಳಿಗೂ ಕೂಡ ರಶ್ಮಿಕ ಮಂದಣ್ಣ ನವರು ಆಗಾಗ ಸುದ್ದಿಯಾಗುತ್ತಾರೆ. ಹೌದು ತಮಗಿಂತ ಕಡಿಮೆ ವಯಸ್ಸಿನ ಹುಡುಗನನ್ನು ಡೇಟಿಂಗ್ ಮಾಡುವ ಕುರಿತಂತೆ ರಶ್ಮಿಕ ಮಂದಣ್ಣ ನವರಿಗೆ ಪ್ರಶ್ನಿಸಲಾಗಿದೆ. ಇದಕ್ಕೆ ರಶ್ಮಿಕ ಮಂದಣ್ಣ ನವರು ವಯಸ್ಸಲ್ಲ ವ್ಯಕ್ತಿ ಮುಖ್ಯ ಎಂಬುದಾಗಿ ಜಾಣ್ಮೆಯಿಂದ ಉತ್ತರವನ್ನು ನೀಡಿದ್ದಾರೆ. ಸದ್ಯಕ್ಕೆ ರಶ್ಮಿಕ ಮಂದಣ್ಣ ನಟನೆಯ ಪ್ಯಾನ್ ಇಂಡಿಯಾ ಚಿತ್ರ ಪುಷ್ಪ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ.

Comments are closed.