1 ಸ್ಪೂನ್ ಇದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಗ್ಯಾಸ್ಟ್ರಿಕ್, ಆಸಿಡಿಟಿ ಅಥವಾ ಹುಳಿತೇಗು ಈಗ ಎಲ್ಲಾ ವರ್ಗದ ಜನರಿಗೂ ಕಂಡು ಬರುತ್ತಿರುವ ಸಾಮಾನ್ಯ ಸಮಸ್ಯೆ. ಮಾರುಕಟ್ಟೆಯಲ್ಲಿಯೂ ಹಲವಾರು ಔಷಧಗಳು ದೊರೆಯುತ್ತಿವೆ. ಇದಕ್ಕೆ ಸಂಭಂದಿಸಿದ ಜಾಹೀರಾತುಗಳನ್ನು ಸಹ ಮಾಧ್ಯಮಗಳು ಯಥೇಚ್ಛವಾಗಿ ಪ್ರಸಾರಿಸುತ್ತಿವೆ. ಆದರೇ ಈ ಸಮಸ್ಯೆಗೆ ಕಾರಣಗಳೇನು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.

ಅತಿಯಾದ ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವುದು, ಅತಿಯಾದ ಮದ್ಯಪಾನ ಮಾಡುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ರಾತ್ರಿ ಪಾಳಿಯಲ್ಲಿ ಮಾಡುವುದು. ದೇಹಕ್ಕೆ ಸೂಕ್ತ ವ್ಯಾಯಾಮ ಮಾಡದೇ, ಸ್ಥೂಲಕಾಯ ಬರಿಸಿಕೊಳ್ಳುವುದು. ಅತಿಯಾದ ಕಾಫೀ-ಟೀ ಸೇವನೆ

ಇಂತಹ ಗ್ಯಾಸ್ಟ್ರಿಕ್ ಗೆ ಮಾರುಕಟ್ಟೆಯಲ್ಲಿ ಸಿಗುವ ಔಷಧಗಳನ್ನು ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ಹಾಗಾಗಿ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸುವ ಒಂದು ಸರಳ ಹೇಳಿಕೊಡುತ್ತಿದ್ದೆವೆ. ಅದು ಈ ಕೆಳಗಿನಂತಿದೆ.

ಮನೆಮದ್ದು ತಯಾರಿಸುವ ವಿಧಾನ : ಬೇಕಾಗುವ ಸಾಮಗ್ರಿಗಳು, ಜೀರಿಗೆ, ಓಂ ಕಾಳು ಅಥವಾ ಅಜವಾನ ಮತ್ತು ಲವಂಗ. ಜೀರಿಗೆ ಗ್ಯಾಸ್ ಮತ್ತು ಆಸಿಡಿಟಿಗೆ ರಾಮ ಬಾಣ. ಹಳ್ಳಿ ಕಡೆಯಲ್ಲಿ ಬರಿ ಬಾಯಲ್ಲಿ ಜೀರಿಗೆ ತಿನ್ನುವುದನ್ನು ಗಮನಿಸಿರುತ್ತಿರಿ. ಇದು ನಮ್ಮ ಜೀರ್ಣ ಕ್ರಿಯಿಗೆ ಸಹಕರಿಸುವ ಲಾಲಾರಸವನ್ನು ಹೆಚ್ಚು ಉತ್ಪತ್ತಿ ಮಾಡುತ್ತದೆ. ಓಂ ಕಾಳು ಅಥವಾ ಅಜವಾನ ಎಂದು ಕರೆಯುತ್ತಾರೆ. ಓಂ ಕಾಳು ಅಜೀರ್ಣಕ್ಕೆ ಸಂಭಂದಿಸಿದ ಸಮಸ್ಯೆಯನ್ನು ದೂರ ಮಾಡುತ್ತದೆ. ಕೊನೆಯದಾಗಿ ಲವಂಗ. ಇದು ನಮ್ಮ ಜಠರದಲ್ಲಿ ಕಂಡುಬರುವಂತಹ ಇದು ಅಧಿಕ ಹೈಡ್ರೋಕ್ಲೋರಿಕ್ ಆಮ್ಲವನ್ನು ಸಮತೋಲನ ಮಾಡುವಲ್ಲಿ ಕಾರ್ಯನಿರ್ವಹಿಸುತ್ತದೆ.

ಮೊದಲಿಗೆ 2 ಚಮಚ ಜೀರಿಗೆ , 2 ಚಮಚ ಓಂ ಕಾಳು, ಹಾಗೂ 7 ರಿಂದ 8 ಲವಂಗಗಳನ್ನು ಒಂದು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಬೆಳಿಗ್ಗೆ ಎದ್ದ ನಂತರ ಒಂದು ಲೋಟ ಬಿಸಿ ನೀರಿಗೆ ಪುಡಿಯನ್ನು ಹಾಕಿಕೊಂಡು ಸೇವಿಸಿ. ಇದನ್ನು ಸೇವಿಸಿದ ನಂತರ ಅರ್ಧತಾಸು ಏನನ್ನೂ ಸೇವಿಸಬಾರದು. ಉತ್ತಮ ಫಲಿತಾಂಶಕ್ಕಾಗಿ ಒಂದು ತಿಂಗಳ ಕಾಲ ನಿರಂತರ ಸೇವಿಸಿ.

Comments are closed.