ಮುಂದಿನ ಹತ್ತು ವರ್ಷಗಳ ನಂತರ ಅಂದರೆ 2030 ರಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಯಾರ್ಯಾರು ಇರಲಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರೆಡಿಕ್ಷನ್ ಅಥವಾ ಊಹೆ ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಭಾಷೆ. ಪ್ರತಿಯೊಬ್ಬ ಆಟಗಾರನ ಚಲನ-ವಲನ, ವಿಕೇಟ್ ಮಧ್ಯೆ ಆತ ಓಡುವ ಶೈಲಿ, ಆತನ ಬೌಲಿಂಗ್ ಲೈನ್ ಅಪ್, ಆತ ಬಾಲ್ ಬಿಡುವ ರಿಲಿಸಿಂಗ್ ಪಾಯಿಂಟ್, ಮತ್ತು ಆತನ ಫಿಟ್ ನೆಸ್ ಕಾಪಾಡಿಕೊಳ್ಳುವ ಶೈಲಿ, ಇವೆಲ್ಲವನ್ನು ಗಮನಿಸಿ ಈ ಆಟಗಾರ ಭವಿಷ್ಯದ ಭಾರತ ತಂಡದಲ್ಲಿರುತ್ತಾನೆ ಎಂದು ಹಲವು ಹಿರಿಯ ಕ್ರಿಕೇಟ್ ತಜ್ಞರು ಭವಿಷ್ಯ ನುಡಿಯುತ್ತಾರೆ.

ನಿಮಗೆ ಬಹುಷಃ ನೆನಪಿದ್ದರೇ, 2009,2010 ರಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಗಮನಿಸಿ ನುಡಿದ ಭವಿಷ್ಯವಾಗಲಿ, ಅಂಡರ್ 19 ತಂಡದಲ್ಲಿದ್ದ ಪಂತ್ ಬ್ಯಾಟಿಂಗ್ ಗಮನಿಸಿ ನುಡಿದ ಭವಿಷ್ಯವಾಗಲಿ ಇಂದಿಗೂ ಸುಳ್ಳಾಗಿಲ್ಲ. ಅದೆ ರೀತಿ ಈಗ 2030 ರ ಭಾರತೀಯ ಕ್ರಿಕೇಟ್ ತಂಡ ಹೇಗಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆಟಗಾರರ ಈಗಿನ ಫಾರ್ಮ, ಹಾಗೂ ಅವರ ದೈಹಿಕ ಸಾಮರ್ಥ್ಯ ನೋಡಿ ಈ ತಂಡ ರಚಿಸಿದ್ದಾರೆ. ತಂಡ ಈ ಕೆಳಗಿನಂತಿದೆ.

ಆರಂಭಿಕರಾಗಿ ಋತುರಾಜ್ ಗಾಯಕ್ವಾಡ್ ಹಾಗೂ ದೇವದತ್ ಪಡಿಕಲ್ ಇರಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಶಭ್ ಪಂತ್ ಇರಲಿದ್ದಾರೆ. ಆಲ್ ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ಆ ಸ್ಥಾನ ತುಂಬಲಿದ್ದಾರೆ. ಸ್ಪಿನ್ನರ್ ಗಳಾಗಿ ರವಿ ಬಿಷ್ಣೋಯಿ ಹಾಗೂ ರಾಹುಲ್ ಚಾಹರ್ ಮತ್ತು ವೇಗದ ಬೌಲಿಂಗ್ ಸಾರಥ್ಯವನ್ನು ಕಾರ್ತಿಕ್ ತ್ಯಾಗಿ, ಅರ್ಷದೀಪ್ ಸಿಂಗ್ ಮತ್ತು ಆವೇಶ್ ಖಾನ್ ನಿಭಾಯಿಸಲಿದ್ದಾರೆ. ಈ ತಂಡದ ನಾಯಕರಾಗಿ ಶ್ರೇಯಸ್ ಅಯ್ಯರ್ ಇರುತ್ತಾರೆ ಹಾಗೂ ಉಪನಾಯಕರಾಗಿ ರಿಷಭ್ ಪಂತ್ ಇರಲಿದ್ದಾರೆ ಎಂಬ ತಂಡವನ್ನ ರಚಿಸಲಾಗಿದೆ. ಈ ತಂಡದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ 2030 ರ ನಿಮ್ಮ ಆಯ್ಕೆಯ ಕ್ರಿಕೇಟ್ ತಂಡ ಹೇಗಿರಲಿದೆ ಎಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.