ಈ ಹೆಣ್ಣುಮಗುವನ್ನು ಹೆಲಿಕ್ಯಾಪ್ಟರ್ ಕರೆತಂದ ಕಾರಣ ತಿಳಿದರೇ ನಿಜಕ್ಕೂ ಹೆಮ್ಮೆ ಪಡುತ್ತೀರಿ.

ನಮಸ್ಕಾರ ಸ್ನೇಹಿತರೇ, ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಮಗು ಎಂದರೆ ಸಾಕು ಹೆಚ್ಚಿನ ಜವಾಬ್ದಾರಿ ಎಂದು ಕೊಳ್ಳುವ ಜನರು ಇನ್ನು ಇದ್ದಾರೆ ಎಂದರೆ ಎಲ್ಲರೂ ಒಪ್ಪಿಕೊಳ್ಳಲೇ ಬೇಕು, ಅದರಲ್ಲಿಯೂ ಭಾರತದ ಕೆಲವೊಂದು ರಾಜ್ಯಗಳಲ್ಲಿ ಗಂಡು ಹೆಣ್ಣಿನ ಮಕ್ಕಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತದೆ, ಪ್ರತಿಯೊಬ್ಬರೂ ಕೂಡ ಗಂಡು ಮಕ್ಕಳು ಎನ್ನುವವರ ಹೆಚ್ಚಾಗಿದ್ದಾರೆ, ಅದರಲ್ಲಿಯೂ ರಾಜಸ್ತಾನ ರಾಜ್ಯದಲ್ಲಿ ಈ ರೀತಿಯ ಚರ್ಚೆಗಳು ಸದಾ ನಡೆಯುತ್ತಿರುತ್ತವೆ.

ಇದಕೆಲ್ಲ ಕಾರಣ, ಶಿಕ್ಷಣ ಪದ್ಧತಿ ಹಾಗೂ ನಮ್ಮ ಹಿರಿಯರು ಅನುಸರಿಸಿಕೊಂಡಿರುವ ಪದ್ದತಿಗಳನ್ನು ಮತ್ತೊಂದು ರೀತಿ ಯಲ್ಲಿ ಅರ್ಥ ಮಾಡಿಕೊಂಡಿರುವುದು, ಯಾಕೆಂದರೆ ನಮ್ಮ ಪೂರ್ವಜರು ಹೆಣ್ಣು ಮಕ್ಕಳನ್ನು ಲಕ್ಷ್ಮಿಯ ರೂಪದಲ್ಲಿ ಕಾಣುತ್ತಾರೆ, ಗೌರವ ಎಂಬಂತೆ ಭಾವಿಸುತ್ತಾರೆ ಆದರೆ ಇದನ್ನು ಮತ್ತೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡು ಎಲ್ಲರೂ ಹೆಣ್ಣುಮಕ್ಕಳನ್ನು ಒಂದು ಜವಾಬ್ದಾರಿ ಎಂದು ಕೊಳ್ಳುತ್ತಿದ್ದಾರೆ. ಆದರೆ ಇಂತಹ ಮನಸ್ಥಿತಿಯನ್ನು ಬದಲಾಯಿಸುವ ಘಟನೆಯೊಂದು ನಡೆದಿದ್ದು, ಈ ಗ್ರಾಮದ ಜನರ ಕಾರ್ಯಕ್ಕೆ ಸ್ವತಃ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತ ಪಡಿಸಿ, ನಮ್ಮ ರಾಜ್ಯದ ಎಲ್ಲರಿಗೂ ಇದು ಮಾದರಿಯಾಗಬೇಕು ಹಾಗೂ ಇನ್ನು ಮುಂದೆ ಪ್ರತಿಯೊಬ್ಬರೂ ಹೆಣ್ಣು ಮಗು ಬೇಕು ಎನ್ನಬೇಕು ಎಂದಿದ್ದಾರೆ ಅಷ್ಟಕ್ಕೂ ನಡೆದ್ದದೇನು ಹಾಗೂ ಏನಾಯಿತು ಎಂಬುದರ ಕುರಿತು ಮಾಹಿತಿ ನೀಡುತ್ತೇವೆ ಕೇಳಿ.

ಸ್ನೇಹಿತರೇ ಮದನ್ ಲಾಲ್ ಕುಮಾರ್ ಎಂಬುವರ ಮನೆಯಲ್ಲಿ ಹಲವಾರು ವರ್ಷಗಳಿಂದ ಸಾಕಷ್ಟು ಮಕ್ಕಳು ಜನಿಸಿದ್ದಾರೆ ಆದರೆ ಆ ಕುಟುಬದಲ್ಲಿ ಕಳೆದ 35 ವರ್ಷದಿಂದ ಗಂಡು ಮಕ್ಕಳು ಮಾತ್ರ ಜನಿಸುತ್ತಿದ್ದರು, ಒಂದು ಕೂಡ ಹೆಣ್ಣು ಮಗಳು ಜನಿಸಿರಲಿಲ್ಲ ಆದರೆ ಇದೀಗ ಮದನ್ ಲಾಲ್ ಕುಮಾರ್ ರವರ ಮೊಮ್ಮಗನ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯ ತಿಳಿದು, ಮನೆಗೆ ತವರು ಮನೆಯಲ್ಲಿ 2 ತಿಂಗಳು ಇದ್ದು ಮೊದಲ ಬಾರಿ ಮದನ್ ಲಾಲ್ ಕುಮಾರ್ ರವರ ಮನೆ ಮಗು ಬರುವಾಗ ಮದನ್ ಲಾಲ್ ಕುಮಾರ್ ರವರು ಬರೋಬ್ಬರಿ ನಾಲ್ಕು ವರೆ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ, ಹೆಲಿಕ್ಯಾಪ್ಟರ್ ನಲ್ಲಿ ಕರೆತಂದಿದ್ದಾರೆ. ಇದನ್ನು ಕಂಡ ಜಿಲ್ಲಾಧಿಕಾರಿ ರವರು ಪ್ರಶಂಸೆ ವ್ಯಕ್ತ ಪಡಿಸಿ, ಹೆಣ್ಣು ಮಕ್ಕಳು ಗೌರವಿಸಿ, ಎಲ್ಲರೂ ಒಂದೇ ಎಂಬ ಸಂದೇಶ ಸಾರಿದ ಕಾರಣ ವಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

Comments are closed.