ಗ್ಯಾಸ್ಟ್ರಿಕ್ ಸಮಸ್ಯೆಗೆ ಯಾವುದೇ ರಾಸಾಯನಿಕ ಔಷಧಗಳು ಬೇಡ; ಮನೆ ಮದ್ದಿನಲ್ಲಿ ಹೀಗೆ ಮಾಡಿ ಸಾಕು

ನಮಸ್ಕಾರ ಸ್ನೇಹಿತರೇ, ನಮಗೆ ದಿನವೂ ಬೆಂಬಿಡದೆ ಕಾಡುವ ಹಾಗೂ ಗುಣಪಡಿಸಿಕೊಳ್ಳಲೂ ಸುಲಭವಲ್ಲದ ಒಂದು ಆರೋಗ್ಯ ಸಮಸ್ಯೆ ಎಂದ್ರೆ ಅದು ಗ್ಯಾಸ್ಟ್ರಿಕ್. ಗ್ಯಾಸ್ಟ್ರಿಕ್ ಸಮಸ್ಯೆ ಒಮ್ಮೆ ಶುರುವಾದ್ರೆ ಮತ್ತೆ ಇಡೀ ದಿನ ಹಾಳಾಗುವುದು ಗ್ಯಾರಂಟಿ. ಯಾಕಂದ್ರೆ ಆಗಾಗ ಎಡೆಯುರಿ, ಹುಳಿತೆಗು, ಹಸಿವಾಗದೆ ಇರೋದು, ಹಸಿವಾದ್ರೂ ತಿನ್ನಬೇಕು ಅನ್ನಿಸದೆ ಇರೋದು ಈ ಎಲ್ಲಾ ಸಮಸ್ಯೆಗಳೂ ಒಮ್ಮೆಲೇ ಒಕ್ಕರಿಸಿ ಬಿಡುತ್ತವೆ. ಹಾಗಾಗಿ ನಾವು ಈ ಸಮಸ್ಯೆಗೆ ತಕ್ಕ ಪರಿಹಾರವನ್ನು ಕೊಡಲೇ ಮಾಡಬೇಕು.

ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಅಥವಾ ಆಮ್ಲೀಯತೆಯನ್ನು ಸಮಸ್ಯೆ ಶುರುವಾಗುವುದೇ ನಮ್ಮ ಜೀವನ ಕ್ರಮ ಹಾಗೂ ಆಹಾರ ಪದ್ಧತಿಯಿಂದ. ಬಾಯಿಗೆ ರುಚಿ ಎನ್ನಿಸಿದ್ದನ್ನೆಲ್ಲಾ ತಿಂದು ನಂತರ ಹೊಟ್ಟೆ ಕೆಟ್ಟರೇ ಯಾರು ಹೊಣೆ!? ಹಾಗಾಗಿ ನಾವು ದಿನವೂ ತಿನ್ನುವ ಆಹಾರದಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡರೆ ಈ ಸಮಸ್ಯೆಯಿಂದ ದೂರವಿರಬಹುದು.

ಹುಳಿ ತೇಗು ಬರುವಂಥ ಆಹಾರವನ್ನು ಸೈಡಿಗಿಡಿ. ಜಂಕ್ ಫುಡ್ ಗಳಾದ ಬರ್ಗರ್, ಪಿಜ್ಜಾ ಗಳು, ಕರಿದ ಪದಾರ್ಥಗಳಾದ ಬಜ್ಜಿ ಬೋಂಡ ಮೊದಲಾದವುಗಳು, ಎಣ್ಣೆ ಹೆಚ್ಚಿರುವ ಪದಾರ್ಥಗಳು ಇಂಥವುಗಳನ್ನು ಅವಶ್ಯವಾಗಿ ಮುಟ್ಟಲೇ ಬೇಡಿ. ಹೀಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ಈ ಸಮಸ್ಯೆ ಇಲ್ಲದವರಿಗೆ ಹತ್ತಿರವೂ ಸುಳಿಯುವುದಿಲ್ಲ.

ಹಸಿ ತರಕಾರಿಗಳನ್ನು ತಪ್ಪದೇ ಸೇವಿಸಿ. ಹಸಿಯಾಗಿ ತಿನ್ನಬಹುದಾದ ತರಕಾರಿಗಳಾದ ಕ್ಯಾರೆಟ್, ಸೌತೆಕಾಯಿ, ಬಿಟ್ ರೂಟ್ ಮೊದಲಾದವುಗಳನ್ನು ಸಲಾಡ್ ಮಾಡಿಕೊಂಡು ತಿನ್ನಿ. ಇನ್ನು ಸೊಪ್ಪುಗಳನ್ನು ತಪ್ಪದೆ ಸೇವಿಸಿ. ಪಾಲಕ್, ಮೆಂತ್ಯ ಮೊದಲಾದ ಸೊಪ್ಪುಗಳಲ್ಲಿ ಜೀವಸತ್ವಗಳು ಅಧಿಕವಾಗಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಂಥ ಕ್ಷಾರೀಯ ಆಹಾರಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ.

ಇನ್ನು ಮೊಳಕೆಕಟ್ಟಿದ ಕಾಳುಗಳು, ಮೂಲಂಗಿ, ಕುಂಬಳಕಾಯಿ, ಬೀನ್ಸ್ ಮೊದಲಾದ ತರಕಾರಿಗಳನ್ನು ಆಗಾಗ ಸೇವಿಸುವುದು ಒಳ್ಳೆಯದು. ಇನ್ನು ಮೊಟ್ಟೆಯನ್ನೂ ಕೂಡ ಮಿತವಾಗಿ ಸೇವಿಸಬಹುದು. ಗರಂ ಮಸಾಲೆಯಂಥ ಮಸಾಲ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಗ್ಯಾಸ್ಟ್ರಿಕ್ ಇರುವವರು ಮಸಾಲೆ ಪದಾರ್ಥಗಳನ್ನು ತಿಂದಲ್ಲಿ ಈ ಸಮಸ್ಯೆ ಹೆಚ್ಚಾಗುವುದು ಕಟ್ಟಿಟ್ಟ ಬುತ್ತಿ! ಹಾಗೆಯೇ ರಸ್ತೆ ಬದಿಯ ಪಾನಿಪುರಿ, ಮಸಲಾಪುರಿಯಂಥ ಚಾಟ್ಸ್ ಗಳೂ ಕೂಡ ಒಳ್ಳೆಯದಲ್ಲ. ಆರೋಗ್ಯಕರವಾಗಿರಬೇಕೆಂದರೆ ಅಪೋಗ್ಯಕರ ಆಹಾರ ಸೇವನೆಯೂ ಕೂಡ ಅಷ್ಟೇ ಮುಖ್ಯ.

Comments are closed.