ಯಪ್ಪಾ ಈ ಆಧುನಿಕ ಜಾಗದಲ್ಲಿಯೂ ಕೂಡ ಇಲ್ಲಿ ಜೀನ್ಸ್ ಹಾಕೊಂಡ್ರೆ ಏನು ಮಾಡ್ತಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶ ಸಂಸ್ಕೃತಿ ಗಳಿಂದ ಕೂಡಿದ ದೇಶ. ಇಲ್ಲಿ ಹಲವಾರು ಆಚರಣೆ ವಿವಿಧ ಸಂಸ್ಕಾರಗಳು ಹಾಗೂ ಸಂಸ್ಕೃತಿಗಳು ಅಡಕವಾಗಿವೆ. ಅದಕ್ಕಾಗಿ ನಮ್ಮ ದೇಶವನ್ನು ಸಂಸ್ಕೃತಿಗಳ ದೇಶವೆಂದು ಕರೆಯುತ್ತಾರೆ. ಇಲ್ಲಿನ ಆಚರಣೆ ಹಲವಾರು ವಿದೇಶಿಗರನ್ನು ಸೆಳೆದಿದೆ. ಕೆಲ ವಿದೇಶಿಗರು ನಮ್ಮ ಆಚರಣೆಗಳನ್ನು ಕೂಡ ಅವರ ಜೀವನದಲ್ಲಿ ಆಚರಿಸುತ್ತಾರೆ. ನಮ್ಮ ಆಚರಣೆ ಅಷ್ಟೊಂದು ಜಾಗತಿಕವಾಗಿ ಪ್ರಭಾವ ಬೀರಿದೆ.

ಅದಕ್ಕೆಲ್ಲ ಆಚರಣೆ ಹಾಗೂ ನಂಬಿಕೆಗಳು ಮೂಢನಂಬಿಕೆಗಳಿಗೆ ಹತ್ತಿರವಾಗಿದೆ ಎಂದರೂ ತಪ್ಪಲ್ಲ. ಯಾಕೆಂದರೆ ಕೆಲ ಆಚರಣೆಗಳು ಅತೀವವಾದ ಲಾಜಿಕ್ ಇಲ್ಲದ ಆಚರಣೆಗಳಾಗಿ ಬಿಟ್ಟಿವೆ. ಇಂದಿನ ವಿಚಾರದಲ್ಲಿ ನಾವು ಅಂತದ್ದೇ ಒಂದು ಮೂಢನಂಬಿಕೆಗಳ ಆಚರಣೆ ಬಗ್ಗೆ ಹೇಳಲು ಹೊರಟಿದ್ದೇವೆ. ನಮ್ಮ ಭಾರತ ದೇಶದಲ್ಲಿ ಸಂಸ್ಕೃತಿಗಳಷ್ಟೇ ನಾವು ತೊಡುವ ಉಡುಪುಗಳು ಕೂಡ ವಿಭಿನ್ನವಾಗಿವೆ. ಹೌದು ಕೆಲ ಪ್ರದೇಶಗಳಲ್ಲಿ ಚಳಿಗಾಲದ ತೀವ್ರತೆಯಿಂದ ದಪ್ಪನಾದ ಉಡುಪುಗಳನ್ನು ತೊಟ್ಟರೆ ದಕ್ಷಿಣಕ್ಕೆ ಬರುತ್ತಿದ್ದಂತೆ ಅದಕ್ಕೆ ಜಾಸ್ತಿಯಾಗಿ ಅಲ್ಲಿ ತೆಳುವಾದ ಉಡುಪುಗಳನ್ನು ಉಡುತ್ತಾರೆ.

ಆದರೆ ಇನ್ನೊಂದು ಕಡೆ ಕೆಲವು ಉಡುಪುಗಳನ್ನು ಉಟ್ಟರೆ ಗ್ರಾಮದಿಂದಲೇ ಬಹಿಷ್ಕಾರ ಆಗುತ್ತಾರಂತೆ. ಬನ್ನಿ ಇದರ ಕುರಿತಂತೆ ನಾವು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಿಮಗೆ ತಿಳಿಸುತ್ತೇವೆ. ಹೌದು ಮುಜಾಫರ್ನಗರದ ಬಳಿ ಇರುವ ಖಪ ಎಂಬ ಗ್ರಾಮದಲ್ಲಿ ಒಂದು ವಿಚಿತ್ರ ಪದ್ಧತಿ ಇದೆಯಂತೆ. ಅದೇನೆಂದರೆ ಅಲ್ಲಿ ಹೆಣ್ಣುಮಕ್ಕಳು ಜೀನ್ಸ್ ತೊಡುವ ಹಾಗಿಲ್ಲ ಇನ್ನು ಗಂಡುಮಕ್ಕಳು ಶಾರ್ಟ್ಸ್ ತೊಡುವ ಹಾಗಿಲ್ಲ. ಇದೆಂಥ ವಿಚಿತ್ರ ರೂಲ್ಸ್ ಅಂತ ಅಂತೀರಾ. ನೀವು ನಂಬದಿದ್ದರೂ ಇದು ನಿಜವಾದ ಸಂಗತಿ.

ಇಲ್ಲಿನ ಹಿರಿಯರು ಹೆಣ್ಣು ಮಕ್ಕಳು ಜೀನ್ಸ್ ಪ್ಯಾಂಟ್ ತೊಡುವ ಹಾಗಿಲ್ಲ ಹಾಗೂ ಗಂಡು ಮಕ್ಕಳು ಚಾರ್ಟ್ ಕೊಡುವ ಹಾಗಿಲ್ಲ ಎಂಬ ಕಟ್ಟುನಿಟ್ಟಿನ ಕ್ರಮವನ್ನು ಮಾಡಿದ್ದಾರೆ. ಇದನ್ನು ಮೀರಿ ಯಾರಾದರೂ ತೊಟ್ಟರೆ ಅವರನ್ನು ಊರಿಂದ ಸಂಪೂರ್ಣವಾಗಿ ಬಹಿಷ್ಕಾರ ಹಾಕಲಾಗುವುದು. ಇದರಿಂದಾಗಿ ಅಲ್ಲಿನ ಯುವಜನತೆಗೆ ಕಷ್ಟದಾಯಕವಾಗಿದೆ. ಕಾರಣ ಏನೆಂದರೆ ಅವರು ಊರಿನಲ್ಲಿ ಇರಬೇಕಾದರೆ ಈ ಈ ಕ್ರಮಗಳನ್ನು ಪಾಲಿಸಲು ಸಾಧ್ಯವಾಗಬಹುದೇನೋ ಆದರೆ ಅವರು ಶಾಲಾ-ಕಾಲೇಜುಗಳಿಗೆ ಹೋಗಬೇಕಾದರೆ ಪ್ಯಾಂಟ್ ಗಳನ್ನು ಹಾಕದೆ ಹೇಗೆ ಹೋಗಲು ಸಾಧ್ಯ ಎಂಬುದು ಅವರ ಪ್ರಶ್ನೆ.

ಇಂಥಹ ಮೂಢನಂಬಿಕೆಗಳು ಆಚರಣೆಗಳು ಅವರು ಮಾಡಿರುವ ಕಾರಣ ಇದು ಅವರ ಸಂಪ್ರದಾಯಕ್ಕೆ ಬಹಳ ವಿರುದ್ಧವಾದದ್ದು ಹಾಗೂ ಇದು ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದಂತಹ ವಸ್ತುಗಳು ಎಂಬುದು ಅವರ ನಂಬಿಕೆ. ಹಾಗಾಗಿ ಊರಲ್ಲಿ ಇರಬೇಕಾದರೆ ಹುಡುಗಿಯರು ಸಲ್ವಾರ್ ಹಾಗೂ ಸೀರೆಗಳನ್ನು ಧರಿಸಬೇಕು ಹಾಗೂ ಪುರುಷರು ಧೋತಿ ಹಾಗೂ ಪೈಜಾಮ ಗಳನ್ನು ಧರಿಸಬೇಕೆಂಬುದು ಅವರ ನಿಯಮ. ಇಂತಹ ಮೂಢನಂಬಿಕೆ ಹಾಗೂ ಸಂಕುಚಿತ ಮನೋಭಾವ ಗಳು ಇನ್ನೂ ಕೂಡ ನಮ್ಮ ದೇಶದಲ್ಲಿ ಜೀವಂತವಾಗಿವೆ. ಈ ಸಂಕುಚಿತ ಭಾವನೆಗಳು ಹೊರಜಗತ್ತಿಗೆ ಬಾವಿಯೊಳಗಿನ ಕಪ್ಪೆಯಂತೆ ಕಾಣಿಸುತ್ತದೆ. ಇಂತಹ ಸಂಕುಚಿತ ಮನಸ್ಥಿತಿಯನ್ನು ಕಳೆದುಕೊಂಡು ನಾವು ಹೊರಬರಬೇಕಾಗಿದೆ ಅವಶ್ಯ ಕಂಡಿತ ಇದೆ. ಇಂದಿನ ಸಂಚಿಕೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೆ ನಮಗೆ ತಿಳಿಸಿ.

Comments are closed.