ಅಡುಗೆ ಮನೆಯಲ್ಲಿ ಈ ನಾಲ್ಕು ವಸ್ತುಗಳು ಖಾಲಿಯಾದರೇ, ನಿಮಗೆ ಹಣದ ಕೊರತೆ ಉಂಟಾಗುತ್ತದೆಯಂತೆ – ಆ ವಸ್ತುಗಳು ಯಾವುವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಡುಗೆ ಮನೆ ಅದೆಷ್ಟೋ ಕುಟುಂಬಗಳ ನೆಮ್ಮದಿಯ ತಾಣ ಜೊತೆಜೊತೆಗೆ ಸೇವಿಂಗ್ಸ್ ಅಕೌಂಟ್ ಸಹ. ಅಂತಹ ಅಡುಗೆ ಮನೆಯಲ್ಲಿ ಮೂಲಭೂತ ವಸ್ತುಗಳಾದ ಪಾತ್ರೆ, ರೇಷನ್ ಪದಾರ್ಥಗಳು,ಗ್ಯಾಸ್ ಸ್ಟೌವ್, ಸಿಲಿಂಡರ್, ಬೇಸನ್ ಹೀಗೆ ಹಲವಾರು ಇರುತ್ತವೆ. ಅಡುಗೆ ಮಾಡುವ ದಿಕ್ಕು, ಗ್ಯಾಸ್ ಸ್ಟೌವ್ ಇಡುವ ದಿಕ್ಕು ಸಹ ವಾಸ್ತುಶಾಸ್ತ್ರದಲ್ಲಿ ಪ್ರಮುಖವಾಗಿರುತ್ತದೆ.ಆದರೇ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾದರೇ ಅಂತಹ ಕುಟುಂಬಗಳಿಗೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆಯಂತೆ. ಬನ್ನಿ ಆ ನಾಲ್ಕು ವಸ್ತುಗಳು ಯಾವುವು ಎಂದು ತಿಳಿಯೋಣ.

ಅರಿಶಿಣ – ಅರಿಶಿಣ ಶುಭ ಸಮಾರಂಭದಲ್ಲಿ ಬಳಸುವಂತಹದ್ದು. ಅದಲ್ಲದೇ ಅಡುಗೆಗೂ ಸಹ ಬಳಸಲಾಗುತ್ತದೆ. ಇದರ ಜೊತೆಗೆ ಅರಿಶಿಣಕ್ಕೆ ಹೆಚ್ಚು ದೈವಿಕ ಮಹತ್ವವಿದೆ. ಹಾಗಾಗಿ ಅರಿಶಿಣ ಅಡುಗೆ ಮನೆಯಲ್ಲಿ ಖಾಲಿಯಾದರೇ ಆ ಕುಟುಂಬಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗುವ ಸಂಭವವಿರುತ್ತದೆ. ಹಾಗಾಗಿ ಮನೆಯಲ್ಲಿ ಅರಿಶಿಣ ಖಾಲಿಯಾಗುವತನಕ ಬಿಡಬಾರದು.

ಉಪ್ಪು – ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆಯೇ ಇದೆ. ಅಡುಗೆಗೆ ಉಪ್ಪೇ ಜೀವಾಳ. ಹಾಗಾಗಿ ಅಡುಗೆ ಮನೆಯಲ್ಲಿ ಉಪ್ಪು ಖಾಲಿಯಾಗುವ ತನಕ ಬಿಡಬಾರದು. ಬಿಟ್ಟರೇ ಆರ್ಥಿಕ ಮುಗ್ಗಟ್ಟು ಕಾಣಿಸುತ್ತದೆಯಂತೆ.

ಗೋಧಿ ಹಿಟ್ಟು – ಅಡುಗೆ ಮನೆಯಲ್ಲಿ ಹಿಟ್ಟು ಸದಾ ಇರಲೇಬೇಕು. ಒಂದು ವೇಳೆ ಒಂದು ಹಿಡಿ ಹಿಟ್ಟು ಇರಲಿಲ್ಲವೆಂದರೇ ಅದು ಸಹ ಹಣದ ಕೊರತೆ ಸೃಷ್ಠಿಸುತ್ತದೆಯಂತೆ. ಹಾಗಾಗಿ ಅಡುಗೆ ಮನೆಯಲ್ಲಿ ಸದಾ ಹಿಟ್ಟು ಇರಲೇಬೇಕು.‌ ಖಾಲಿಯಾಗಲು ಬಿಡಬಾರದು.

ಅಕ್ಕಿ – ಅಕ್ಕಿ ಎಲ್ಲದಕ್ಕೂ ಮೂಲಾಧಾರ. ದೇವರ ಪೂಜೆಯಿಂದ ಹಿಡಿದು ತುತ್ತು ಅನ್ನಕ್ಕೂ ಸಹ ಅಕ್ಕಿ ಬೇಕೆ ಬೇಕು. ಹಾಗಾಗಿ ಮನೆಯಲ್ಲಿ ಯಾವಾಗಲೂ ಒಂದು ಹಿಡಿಯಷ್ಟಾದರೂ ಅಕ್ಕಿ ಇರವೇಬೇಕಂತೆ. ಮನೆಯಲ್ಲಿ ಅಕ್ಕಿ ಖಾಲಿಯಾದರೇ, ನಿಮ್ಮ ಜೇಬಿನಲ್ಲಿ ಹಣ ಸಹ ಖಾಲಿಯಾದಂತೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.