ಎಲ್ಲೆಂದರಲ್ಲಿ ಕಂಡು ಬರುವ, ಆಡುಸೋಗೆ ಸೊಪ್ಪಿನಲ್ಲಿ ಇರುವ ಗುಣಗಳನ್ನು ತಿಳಿದರೇ, ಎಲ್ಲಿ ಸಿಕ್ಕರೂ ನೀವು ಬಿಡುವುದಿಲ್ಲ.

ನಮಸ್ಕಾರ ಸ್ನೇಹಿತರೇ, ಹಳ್ಳಿಗಳಲ್ಲಿ ಬೆಳೆಯುವ ಎಲ್ಲಾ ಸೊಪ್ಪುಗಳೂ ಕೂಡ ಒಂದಿಲ್ಲೊಂದು ಔಷಧೀಯ ಗುಣಗಳನ್ನು ಹೊಂದಿವೆ. ಬೇಲಿಗೆಂದು ಹಾಕುವ ಗಿಡಗಳಲ್ಲಿಯೂ ಕೂಡ ರೋಗನಿರೋಧಕ ಶಕ್ತಿ ಅಡಗಿರುತ್ತವೆ ಎಂದರೆ ನಂಬುತ್ತೀರಾ? ಹೌದು, ಹಳ್ಳಿಯಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ಸಿಗುವಂಥ ಆಡುಸೋಗೆ ಸೊಪ್ಪು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ಮುಂದೆ ಓದಿ..

ಕೆಲವರಿಗೆ ದಮ್ಮು ಕಟ್ಟುವ ಖಾಯಿಲೆ ಇರುತ್ತದೆ. ಇಂಥವರಿಗೆ ಯಾವುದೇ ಕೆಲಸ ಮಾಡಿದರೂ ಕೂಡ ದೇಹ ದಣಿಯುತ್ತದೆ. ಹಾಗಿದ್ದರೆ ಇಲ್ಲಿದೆ ಒಂದು ಪರಿಹಾರ. ಸ್ವಲ್ಪ ಬೆಳ್ಳುಳ್ಳಿ, ಹಿಪ್ಪಲಿ ಚೂರು, ಮೆಣಸು (ಕಾಳು ಮೆಣಸನ್ನು ಬಳಸಬಹುದು) ಕಟುಕ ರೋಹಿಣಿ ಹಾಗೂ ಆಡುಸೋಗೆ ಸೊಪ್ಪನ್ನು ತುಸು ಉಗುರು ಬೆಚ್ಚಗಿನ ನೀರು ಹಾಕಿ ಚೆನ್ನಾಗಿ ಅರೆಯಿರಿ. ಇದನ್ನು ಅರೆಯುವ ಕಲ್ಲಿನಲ್ಲಿಯೇ ಅದೆದು ಮದ್ದು ತಯಾರಿಸಿದರೆ ಹೆಚ್ಚು ಪರಿಣಾಮಕಾರಿ. ನಂತರ ಈ ನೀರನ್ನು ಸೋಸಿ ಜೇನುತುಪ್ಪದೊಂದಿಗೆ ಬಳಸಿ. ಆಥವಾ ಆಡುಸೋಗೆ ಸೊಪ್ಪನ್ನು ಒಣಗಿಸಿ ಚೂರ್ಣ ತಯಾರಿಸಿ ಸೇದಿದರೆ ದಮ್ಮು ಕ್ರಮೇಣ ನಿವಾರಣೆಯಾಗುತ್ತದೆ.

ಕೆಮ್ಮು ನಿವಾರಣೆಗೂ ಕೂಡ ಆಡುಸೋಗೆ ಸೊಪ್ಪು ಒಳ್ಳೆಯದು. ಇದನ್ನು ಮಕ್ಕಳಿಗೂ ಕೂಡ ಕುಡಿಸಬಹುದು. ಅಮೃತ ಬಳ್ಳಿ ಹಾಗೂ ಆಡುಸೋಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ, ಜೇನುತುಪ್ಪ ಬೆರೆಸಿ ಕುಡಿಯಬಹುದು. ದಿನಕ್ಕೆ ಎರಡು ಬಾರಿ ಹೀಗೆ ಮಾಡಿರಿ. ಮಕ್ಕಳಿಗಾದರೆ ಪ್ರಮಾಣ ಕಡಿಮೆ ಮಾಡಿ ಮತ್ತು ನಾಕೈದು ಬಾರಿ ಕುಡಿಸಬಹುದು.

ಇನ್ನು ಅಸ್ತಮ ನಿವಾರಣೆಗೆ ಕೂಡ ಆಡುಸೋಗೆ ಸೊಪ್ಪು ಉತ್ತಮ ವನೌಷಧಿ. 10 ಗ್ರಾಂ ಜೇಷ್ಠಮದ್ದು, ಹಿಪ್ಪಲಿ 20 ಗ್ರಾಂ ಹಾಗೂ ಆಡುಸೋಗೆ ಸೊಪ್ಪನ್ನು ಚೆನ್ನಾಗಿ ಅರೆದು ಕುದಿಸಿ ಕಷಾಯ ಮಾಡಿ ಕುಡಿಯಬೇಕು. ಇನ್ನು ಆಡುಸೋಗೆ ಸೊಪ್ಪಿನ ರಸಕ್ಕೆ ಕಲ್ಲುಸಕ್ಕರೆ ಹಾಕಿ ಕುದಿಸಿ ಲೇಹ್ಯ ತರ ಮಾಡಿ ನೆಕ್ಕಿದರೆ ಎದೆ ಕಟ್ಟಿದಂತಾಗುವುದು (ಗೋರಲು) ಕೂಡ ಕಡಿಮೆಯಾಗುತ್ತದೆ. ಇನ್ನು ಆಡುಸೋಗೆ ಸೊಪ್ಪು ಕಹಿ ಅಂಶವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಹುಳು ತೆಗೆಯಲು (ಜಂತು ಹುಳು) ಕೂಡ ಆಡುಸೋಗೆ ಸೊಪ್ಪಿನ ರಸವನ್ನು ಸೇವಿಸಬಹುದು.

Comments are closed.