ಸಾಮಾನ್ಯ ಚಟ್ನಿ ಪುಡಿ ಯಾಕೆ?? ಆರೋಗ್ಯಕ್ಕೆ ಬಹಳ ಉಪಯುಕ್ತ, ರುಚಿಯಂತೂ ಅದ್ಭುತವಾಗಿರುವ ಅಗಸೆ ಬೀಜದ ಚಟ್ನಿ ಪುಡಿ ಟ್ರೈ ಮಾಡಿ. ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಊಟಕ್ಕೆ ಉಪ್ಪಿನಕಾಯಿ ಇದ್ದರೆ ಹೇಗೆ ಒಂದು ಊಟವಾಗುವುದೋ ಹಾಗೆ ಅನ್ನಕ್ಕೂ, ಚಪಾತಿಗೂ ಒಂದು ಚಟ್ನಿ ಪುಡಿ ಇದ್ದರೆ ಸಾಕು ಒಂದು ಹೊತ್ತಿನ ಊಟ ಚಿಂತೆಯಿಲ್ಲದೇ ಆಗುತ್ತದೆ. ಅದಕ್ಕಾಗಿ ನಾವಿಲ್ಲಿ ಅತ್ಯಂತ ರುಚಿಕರವೂ ಆದ, ಆರೋಗ್ಯಕರವೂ ಆದ ರೆಸಿಪಿಯೊಂದಿಗೆ ಬಂದಿದ್ದೇವೆ. ಅದುವೇ ಅಗಸೆ ಬೀಜದ ಚಟ್ನಿ ಪುಡಿ. ಬ್ಯಾಚುಲರ್ಸ್ ಗಳಿಗಂತೂ ಈ ಒಂದು ಚಟ್ನಿ ಪುಡಿ ಇದ್ದರೆ ವಾರನುಗಟ್ಟಲೇ ಅಡುಗೆ ಮಾಡುವ ಕೆಲಸವೇ ಇರುವುದಿಲ್ಲ. ತಪ್ಪದೇ ಈ ಚಟ್ನಿ ಪುಡಿಯನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಿ.

ಚಟ್ನಿ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು: ಮುಕ್ಕಾಲು ಕಪ್ ಅಗಸೆ ಬೀಜ, ಕಾಲು ಕಪ್ ಬಿಳಿ ಎಳ್ಳು, ಕಾಲು ಕಪ್ ಕೊಬ್ಬರಿ, ದೊಡ್ಡ ನೆಲ್ಲಿಕಾಯಿ ಗಾತ್ರದಷ್ಟು ಹುಣಸೇಹಣ್ಣು, ಒಂದು ಹಿಡಿ ಕರಿಬೇವು, ನಾಲ್ಕರಿಂದ ಐದು ಬ್ಯಾಡಗಿ ಮೆಣಸಿನಕಾಯಿ, ಮೂರರಿಂದ ನಾಲ್ಕು ಗುಂಟೂರು ಮೆಣಸಿನಕಾಯಿ, ಅರ್ಧ ಚಮಚ ಇಂಗು, ಒಂದು ಚಮಚ‌ ಬೆಲ್ಲ,ಎಣ್ಣೆ, ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಅಗಸೆ ಬೀಜ ಹಾಕಿ ಸಿಡಿಯುವ ತನಕ ಹುರಿದು ತೆಗೆದಿಡಬೇಕು. ನಂತರ ಬಿಳಿ ಎಳ್ಳನ್ನು ಹಾಕಿ ಹುರಿದು ತೆಗೆದಿಡಬೇಕು. ಈಗ ಕೊಬ್ಬರಿ, ಕರಿಬೇವು, ಹುಣಸೆಹಣ್ಣು ಹಾಕಿ ಗರಿಗರಿಯಾಗುವವರೆಗೆ ಹುರಿದು ತೆಗೆದಿಡಬೇಕು. ನಂತರ ಬಾಣಲೆಗೆ ಎಣ್ಣೆ ಹಾಕಿ ಗುಂಟೂರು ಮೆಣಸಿನಕಾಯಿ ಮತ್ತು ಬ್ಯಾಡಗಿ ಮೆಣಸಿನಕಾಯಿ ಸೇರಿಸಿ ಹುರಿಯಬೇಕು. ನಂತರ ಹುರಿದ ಎಲ್ಲವನ್ನೂ ಬೆಲ್ಲ, ಇಂಗು ಮತ್ತು ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ ಪುಡಿ ಮಾಡಿದರೆ ಆರೋಗ್ಯಕರವಾದ ಅಗಸೆ ಬೀಜದ ಚಟ್ನಿ ಪುಡಿ ಸಿದ್ಧ. ಈ ರೆಸಿಪಿಯ ವಿಡಿಯೋವನ್ನು ಕೆಳಗೆ ಕೊಡಲಾಗಿದೆ.

Comments are closed.