ಪ್ರತಿದಿನ ಮನೆ ಬಾಗಿಲಿಗೆ ಬಂದು ಊಟ ಮಾಡುತ್ತಿದ್ದ ಅಜ್ಜ ಮನೆಯ ಹೆಂಗಸಿಗೆ ಮಾಡಿದ್ದೇನು ಗೊತ್ತಾ?? ಇದಲ್ಲವೇ ಮಾನವೀಯತೆ??

ನಮಸ್ಕಾರ ಸ್ನೇಹಿತರೇ ಕೆಲವು ವಿಚಾರಗಳು ನಮ್ಮ ಕಣ್ಣೆದುರು ನಡೆದರೂ ಕೂಡ ಅದನ್ನು ನಂಬಲಾಗದಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಭವವಾಗುತ್ತದೆ. ಹೀಗಾಗಿ ಅದನ್ನು ಅರ್ಥಮಾಡಿಕೊಳ್ಳಲು ನಮಗೆ ಕೊಂಚ ಸಮಯವು ಕೂಡ ಬೇಕಾಗುತ್ತದೆ. ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ನೈಜ ಘಟನೆ ನಡೆದಿರುವುದು ತೆಲುಗು ರಾಜ್ಯ ವ್ಯಾಪ್ತಿಯಲ್ಲಿ ಬರುವ ಹೈದರಾಬಾದ್ ನಲ್ಲಿ. ಹೌದು ಸ್ನೇಹಿತರೆ ಈ ಪ್ರದೇಶದಲ್ಲಿ ಸಾವಿತ್ರಿ ಎಂಬವರು ತನ್ನ ಗಂಡನೊಂದಿಗೆ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದರು. ಇವರಿಗೆ ಒಬ್ಬ ಹೆಣ್ಣು ಹಾಗೂ ಒಬ್ಬ ಗಂಡುಮಗ. ಗಂಡುಮಗ ಡಿಗ್ರಿಯನ್ನು ಪೂರೈಸಿ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ ಮಗಳು 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಳು.

ಇನ್ನು ಸಾವಿತ್ರಿ ಉಪಕಾರ ಮಾಡುವ ಮನೋಭಾವ ಉಳ್ಳವರು. ಹೀಗಾಗಿ ಪ್ರತಿದಿನ ಊಟವಾದ ಮೇಲೆ ಉಳಿದಿರುವ ಅಂತಹ ಅನ್ನ ಆಹಾರಗಳನ್ನು ತಟ್ಟೆಯಲ್ಲಿ ಹಾಕಿ ಮನೆಯ ಮುಂದಿನ ಗೇಟ್ ಬಳಿ ಇಡುತ್ತಿದ್ದಳು. ಯಾಕೆಂದರೆ ಪಾಪ ಕೊನೆಪಕ್ಷ ಹಕ್ಕಿಗಳಾದರೂ ಇದನ್ನು ತಿನ್ನಲಿ ಎಂಬುದಾಗಿ. ಹೌದು ಸ್ನೇಹಿತರೆ ಆದರೆ ಒಮ್ಮೆ ಈ ಆಹಾರವನ್ನು ಒಬ್ಬ ಮುದುಕ ತಿಂದು ಹೋಗುತ್ತಾನೆ. ಇದು ಕೇವಲ ಒಂದು ದಿನ ಮಾತ್ರವಲ್ಲದೆ ಪ್ರತಿದಿನವೂ ಕೂಡ ಸಾವಿತ್ರಿ ಆಹಾರವನ್ನು ಗೇಟ್ ಬಳಿ ಬಂದಾಗ ಮುದುಕ ಅದನ್ನು ತಿಂದು ನಿನ್ನ ಪಾಪ ನಿನ್ನ ಬಳಿ ಇರುತ್ತದೆ ಆದರೆ ನೀನು ಮಾಡಿದ ಪುಣ್ಯದಿಂದಾಗಿ ನಿನ್ನನ್ನು ಪುಣ್ಯ ಅರಿಸಿಕೊಂಡು ಬರುತ್ತದೆ ಎಂಬುದಾಗಿ ಪುಣ್ಯ ಪಾಪದ ಮಾತುಗಳನ್ನು ಆಡಿ ಹೋಗುತ್ತಿರುತ್ತಾನೆ. ಇನ್ನು ಇದರ ಅರ್ಥವನ್ನು ಕೇಳಿದಾಗ ಆತ ಏನನ್ನೂ ಮಾತನಾಡದೆ ಹಾಗೆ ಮುಂದೆ ಹೋಗುತ್ತಿದ್ದ ಇದು ಪ್ರತಿನಿತ್ಯ ಕೂಡ ನಡೆಯುತ್ತಿತ್ತು.

ಇದರ ಕುರಿತಂತೆ ಸಾವಿತ್ರಿ ಸಾಕಷ್ಟು ಬಾರಿ ಯೋಚಿಸಿದಳು ಆದರೆ ಈ ಒಗಟಿನ ಅರ್ಥ ಆಗುತ್ತಿರಲಿಲ್ಲ. ಒಮ್ಮೆ ಸಾವಿತ್ರಿಯ ಮಗ ಮನೆಗೆ ಬಂದಿರುವುದಿಲ್ಲ ಇದರಿಂದ ಸಾವಿತ್ರಿ ದಂಪತಿಗಳಿಬ್ಬರು ದೂರನ್ನು ನೀಡಿರುತ್ತಾರೆ. ನಿನ್ನ ದೂರು ನೀಡಿ ವಾಪಸ್ಸು ಬರುತ್ತಿರಬೇಕಾದರೆ ಮನೆಯ ಗೇಟ್ ಬಳಿ ಮಗ ಹರಿದ ಅಂಗಿ ಹಾಗೂ ಹಲವಾರು ಕಲೆಗಳಿಂದ ಕಾಣಿಸಿಕೊಳ್ಳುತ್ತಿದ್ದ. ಏನಾಯ್ತು ಮಗ ಎಂದಾಗ ತಾನು ರಸ್ತೆಯಲ್ಲಿ ಬಿದ್ದಿದ್ದೆ ಆಗ ಯಾರು ನನಗೆ ಸಹಾಯ ಮಾಡಲಿಲ್ಲ ಆದರೆ ಒಬ್ಬ ಅಜ್ಜ ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬುದಾಗಿ ಹೇಳುತ್ತಾನೆ. ಆಗ ಯಾವ ಅಜ್ಜ ಎಂದು ಕೇಳಿದಾಗ ಅಲ್ಲಿಯೇ ರೋಡಿನ ಬಳಿ ಕೂತಿದ್ದ ಅನ್ನ ತಿನ್ನುವ ಅಜ್ಜನನ್ನು ತೋರಿಸುತ್ತಾನೆ. ಆಗ ಸಾವಿತ್ರಿಗೆ ಅರ್ಥವಾಗುತ್ತದೆ ನಾವು ಒಳ್ಳೆಯದು ಮಾಡಿದರೆ ನಮಗೆ ಒಳ್ಳೆಯದು ಸಿಗುತ್ತದೆ ಎಂಬುದಾಗಿ.

Comments are closed.