ಪ್ರತಿ ಬಾರಿ ಅಜ್ಜಿ ಹತ್ರ ಹಣ್ಣು ತೆಗೆದುಕೊಂಡು ಬಯ್ಯುತ್ತಿದ್ದ ವ್ಯಕ್ತಿ, ಒಂದು ದಿನ ಕಾರಣ ತಿಳಿದ ಬಳಿಕ ಗ್ರೇಟ್ ಎನಿಸುತ್ತದೆ. ಯಾಕೆ ಗೊತ್ತೇ??

Inspiring

ನಮಸ್ಕಾರ ಸ್ನೇಹಿತರೇ ಈ ಕಲಿಯುಗದಲ್ಲಿ ಬೇರೆಯವರ ಒಳಿತು ಕೆಡುಕುಗಳ ಬಗ್ಗೆ ಯೋಚಿಸಲು ಯಾರಿಗೆ ಟೈಮ್ ಇದೆ ಹೇಳಿ . ತಾವಾಯಿತು ತಮ್ಮ ಕೆಲಸವಾಯಿತು ಬೇರೆಯವರ ಜೀವನ ಹಾಳಾದರಾಗಲೀ ಎಂಬ ಮನಸ್ಥಿತಿ ಹೊಂದಿರುವ ಈ ಲೋಕದಲ್ಲಿ ಬೇರೆಯವರ ಬಗ್ಗೆ ಕೂಡ ನಿಸ್ವಾರ್ಥ ಭಾವದಿಂದ ಯೋಚಿಸುವವರು ತುಂಬಾ ಕಡಿಮೆ, ವಿರಳ. ಯಾಕೆಂದರೆ ಈಗಿರುವ ಫಾಸ್ಟ್ ಜಗತ್ತಿನಲ್ಲಿ ಚೂರು ನಿಧಾನವಾದರೂ ನಮ್ಮ ಸ್ಥಾನ, ಅವಕಾಶ ಬೇರೆಯವರಿಗೆ ಹೋಗುತ್ತದೆ ಎಂಬ ಆಲೋಚನೆಯಲಿ ಬದುಕುತ್ತಿದ್ದಾರೆ.

ಹೀಗಾಗಿ ಬಡಜನರ ಕುರಿತಂತೆ ಆಲೋಚಿಸಲು ನಮ್ಮ ನಡುವೆ ಸಿಗುವ ಜನರು ಬೆರಳೆಣಿಕೆಯಷ್ಟು ಮಾತ್ರ. ನಾವು ಮಾನವೀಯತೆಯ ಬಗ್ಗೆ ಎಷ್ಟೇ ದೊಡ್ಡ ಭಾಷಣ ಬಿಗಿರಬಹುದು ಆದರೆ ಈ ಜಗತ್ತು ಸ್ವಾರ್ಥಿಯಾಗಿತ್ತು , ಈಗಲೂ ಸ್ವಾರ್ಥಿಯಾಗಿದೆ ಮುಂದೆ ಕೂಡ ಸ್ವಾರ್ಥಿಯಾಗಿಯೇ ಇರುತ್ತೆ. ಎಲ್ಲೋ 100 ರಲ್ಲಿ 10 ಮಂದಿ ಬೇರೆಯವರ ಕುರಿತಂತೆ ಒಳ್ಳೇದಾಗಿ ಯೋಚಿಸಲು ಸಮಯ ತೆಗೆದು ಕಾಳೋಳ್ಳುವವರು ಸಿಗಬಹುದಷ್ಟೇ.

ಇಂದಿನ ಮಾಹಿತಿಯಲ್ಲಿ ಒಂದು ನೈಜಘಟನೆಯನ್ನು ಹೇಳಲಿದ್ದೇವೆ. ಈ ಮೇಲಿನ ಪೀಠಿಕೆ ಯನ್ನು ನೀವು ಈ ಕಥೆಗೆ ಅಳವಡಿಸಿಕೊಳ್ಳಬಹುದು. ಯಾಕೆಂದರೆ ಅದು ಸಾಂದರ್ಭಿಕವಾಗಿ ಕನೆಕ್ಟ್ ಆಗುತ್ತೆ. ಮೋಹನ್ ಎಂಬ ವ್ಯಕ್ತಿ ಸಾವಿತ್ರಮ್ಮ ಎಂಬ ಅಜ್ಜಿಯ ಬಳಿ ದಿನಾಲೂ ಹಣ್ಣು ತೆಗೆದುಕೊಳ್ಳಲು ಬರುತ್ತಿದ್ದ . ಈ ವಯಸ್ಸಾದವರು ವ್ಯಾಪಾರ ಮಾಡುತ್ತಿದ್ದಾರೆಂದರೆ ಒಂದು ವಿಚಾರ ಮನದಲ್ಲಿ ನಗನಪಿಟ್ಟುಕೊಳ್ಳಿ ಇವರು ಹಣಮಾಡಲು ವ್ಯಾಪಾರ ಮಾಡುತ್ತಿಲ್ಲ, ಕೇವಲ ಆವತ್ತಿನ ಊಟಕ್ಕೆ ಹಣವನ್ನು ಸಂಪಾದಿಸಲು ವ್ಯಾಪಾರ ಮಾಡುತ್ತಾರೆ,

ಅದೂ ಕೂಡ ಸ್ವಾಭಿಮಾನಿಯಾಗಿ ದುಡಿಯೋದ್ರ ಮೂಲಕ. ಹಾಗಾಗಿ ಖಂಡಿತವಾಗಿಯೂ ನಿಮಗೆ ಮುಂದೆಲ್ಲಾದರೂ ವಯಸ್ಸಾದವರು ವ್ಯಾಪಾರ ಮಾಡುತ್ತಿದ್ದುದು ಕಂಡು ಬಂದರೆ , ಕೈಲಾದಷ್ಟು ವ್ಯಾಪಾರ ಮಾಡಿ. ಓಕೆ ಈಗ ಕಥೆಯನ್ನು ಮುಂದುವರೆಸೋಣ ಇತ್ತ ಮೋಹನ್ ಪ್ರತಿನಿತ್ಯ ಸಾವಿತ್ರಮ್ಮ ಎಂಬ ಅಜ್ಜಿಯ ಬಳಿ ಹಣ್ಣನ್ನು ತೆಗೆದು ಕೊಳ್ಳುತ್ತಿದ್ದ. ಪ್ರತಿ ಹಣ್ಣನ್ನು ತೆಗೆದುಕೊಂಡಾಗ ಅದರ ರುಚಿಯ ಬಗ್ಗೆ ಸರಿಯಿಲ್ಲ ನೀವೇ ತಿಂದು ನೋಡಿ ಎಂದು ಕೊಡುತ್ತಿದ್ದ.

ಅಜ್ಜಿ ಹಣ್ಣನ್ನು ತಿಂದು ನೋಡಿ ಚೆನ್ನಾಗಿದೆಯಲ್ಲ ಎಂದು ಹೇಳಿದಾಗ ಏನೂ ಮಾತನಾಡದೇ ಮನೆಗೆ ಹೋಗುತ್ತಿದ್ದ. ಪ್ರತಿ ಸಾರಿಯೂ ಹೀಗೆ ಅಜ್ಜಿಯ ಬಳಿ ಹಣ್ಣನ್ನು ಹಣ ನೀಡಿ ಖರೀದಿಸುತ್ತಿದ್ದ, ನಂತರ ಹಣ್ಣಿನ ರುಚಿಯ ಬಗ್ಗೆ ಆರೋಪಿಸುತ್ತಿದ್ದ ನಂತರ ಅಜ್ಜಿಗೆ ಹಣ್ಣನ್ನು ನೀವೆ ತಿಂದು ನೋಡಿ ಎಂದು ಕೊಟ್ಟು ಅಜ್ಜಿಯ ರುಚಿಯ ಫಲಿತಾಂಶ ಬಂದಮೇಲೆ ಸುಮ್ಮನೆ ಮನೆಗೆ ತೆರಳುತ್ತಿದ್ದ. ಒಮ್ಮೆ ಮೋಹನನ ಪತ್ನಿ ಯಾಕೆ ಸುಮ್ಮನೆ ಹಣ್ಣು ಚೆನ್ನಾಗಿಲ್ಲ ಎಂದು ನೀವು ಹೇಳುತ್ತಿರುತ್ತೀರಿ ಎಂದು ಕೇಳಿದಾಗ,

ಮೋಹನ್ ” ಆ ಅಜ್ಜಿ ಪಾಪ ಅಷ್ಟೊಂದು ಹಣ್ಣುಗಳಿದ್ದರೂ ಒಂದನ್ನು ಕೂಡ ತಿನ್ನದೇ ವ್ಯಾಪಾರಕ್ಕೆ ಇಟ್ಟುಕೊಳ್ಳುತ್ತಾರೆ , ಈ ನೆಪದಲ್ಲಾದರೂ ಅವರಿಗೆ ಆ ಹಣ್ಣು ತಿನ್ನಿಸಬಹುದಲ್ಲಾ ಎಂದು ಹೇಳಿದ. ಅತ್ತ ಅಜ್ಜಿಗೆ ಕೂಡ ಇದರ ಬಗ್ಗೆ ಅರಿವಿತ್ತು . ಅತ್ತ ಅಜ್ಜಿಗೆ ಎದೀರುಗಡೆ ತರಕಾರಿ ಗಾಡಿಯವನು ಯಾಕಜ್ಜಿ ಆತ ನಿಮಗೆ ಹಣ್ಣಿನ ರುಚಿಯ ಬಗ್ಗೆ ಏನೆಲ್ಲಾ ಹೇಳಿದರೂ ನೀವು ತೂಕದಲ್ಲಿ ಜಾಸ್ತಿ ಹಾಕಿಕೊಡುತ್ತೀರಿ ಎಂದು ಕೇಳಿದ. ಆಗ ಅಜ್ಜಿ ಆತ ನಾನು ಹಣ್ಣು ತಿನ್ನಲೆಂದು ಅಷ್ಟೆಲ್ಲಾ ಮಾಡುತ್ತಾನೆ ಅದಕ್ಕೆ ಅದರ ಪರವಾಗಿ ತೂಕದಲ್ಲಿ ಸ್ವಲ್ಪ ಜಾಸ್ತಿ ಹಣ್ಣನ್ನು ಕೊಡುತ್ತೇನೆ ಎಂದರು. ನೋಡಿದ್ರಾ ಸ್ನೇಹಿತರೇ ಒಬ್ಬರ ಬಗ್ಗೆ ನಾವು ಒಳ್ಳೆಯದನ್ನು ಬಗೆದರೆ ನಮಗೆ ಪ್ರತಿಫಲ ಒಳ್ಳೆಯದೇ ಆಗುತ್ತದೆ. ಈ ಕಥೆ ನಿಮಗೆ ಹೇಗನ್ನಿಸಿತು , ಮೋಹನ್ ಮಾಡಿದ್ದು ಸರಿನಾ ತಪ್ಪಾ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

Leave a Reply

Your email address will not be published. Required fields are marked *