ಬೇರೆ ವಿಧಿ ಇಲ್ಲದೇ ಲಾಕ್ ಡೌನ್ ಆಗಿದ್ದರೂ ಹೂವು ಮಾರುತ್ತಿದ್ದ ಅಜ್ಜಿಗೆ ಪೊಲೀಸರು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ವಿಶ್ವ ಹಾಗೂ ಅಥವಾ ದೇಶ ಎರಡು ವರ್ಷಗಳ ಹಿಂದೆ ಚೆನ್ನಾಗಿತ್ತು. ಎಲ್ಲವೂ ಸುಸೂತ್ರವಾಗಿ ಸಾಮಾನ್ಯ ಓಡಾಟ ಎಂದಿನಂತೆ ಇತ್ತು. ಆದರೆ 2019 ರ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಪ್ರಾರಂಭವಾದ ಈ ಮಹಾಮಾರಿ ವಿಶ್ವಾದ್ಯಂತ ಹಾಗೂ ನಮ್ಮ ದೇಶಕ್ಕೂ ಕೂಡ ತಲುಪಿ ಜನಸಾಮಾನ್ಯ ಜೀವನಕ್ರಮ ಅಸ್ತವ್ಯಸ್ತವಾಗಿ ಎಲ್ಲರ ಜೀವನ ಹಾಳಾಯಿತು. ಎಷ್ಟೋ ಜನರ ಜೀವ ಕೂಡ ಹೋಯಿತು. ಈಗಲೂ ಸಹ ಲಾಕ್ಡೌನ್ ನಿಂದ ಇದು ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿದ್ದರೂ ಸಹ ಇದರ ವಿಶ್ವರೂಪವನ್ನು ಭಾರತದ ಈಗಾಗಲೇ ನೋಡಿದ್ದಾಗಿದೆ.

ಹೌದು ಈ ಮಹಾಮಾರಿಗೆ ಈಗಾಗಲೇ ಸರಿಸುಮಾರು ಎರಡು ವರ್ಷಗಳು ತುಂಬುತ್ತ ಬಂದಿವೆ ಆದರೂ ಸಹ ಇದು ಇನ್ನೂ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಕೆಲವರು ಇದಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಇನ್ನು ಕೆಲವರು ಲಾಕ್ಡೌನ್ ನಿಂದಾಗಿ ಕೆಲಸಕಾರ್ಯ ಇಲ್ಲದೆ ಜೀವನ ಸಾಗಿಸಲು ಹಣವಿಲ್ಲದೆ ಅವರೇ ಈ ಲೋಕವನ್ನು ಬಿಟ್ಟು ಹೋಗಿದ್ದಾರೆ. ದಿನನಿತ್ಯ ದುಡಿಮೆ ನಂಬಿಕೊಂಡಿದ್ದ ಅದೆಷ್ಟೋ ಕುಟುಂಬಗಳು ಈ ಲಾಕ್ ಡೌನ್ಲೋಡ್ ನಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ.

ಈ ಕುರಿತಂತೆ ಉನ್ನತ ವಲಯಗಳು ಯಾವ ಕ್ರಮವನ್ನು ಕೂಡ ಸರಿಯಾಗಿ ತೆಗೆದುಕೊಂಡಿಲ್ಲ. ಈ ಕಾರಣಕ್ಕಾಗಿಯೇ ಎಷ್ಟು ದುಡ್ಡಿದ್ದವರು ಕೂಡ ಹಲವಾರು ಮಂದಿ ಕೋಟ್ಯಾಧಿಪತಿಯಿಂದ ಭಿಕ್ಷಾಧಿಪತಿಯಾಗಿದ್ದವರನ್ನು ಕೂಡ ಈ ಲಾಕ್ಡೌನ್ ನಲ್ಲಿ ನಾವು ನೋಡಿದ್ದೇವೆ. ಅದೆಷ್ಟು ಕೂಲಿಕಾರ್ಮಿಕರು ದಿನನಿತ್ಯದ ಕೂಲಿಯನ್ನು ನಂಬಿಕೊಂಡು ಬದುಕಿದ್ದರು. ಆದರೆ ಲಾಕ್ಡೌನ್ ಬಂದು ಅವರ ದುಡಿಮೆಯನ್ನು ನುಂಗಿಹಾಕಿತು. ಮೊದಲ ಅಲೆಯನ್ನು ಲಾಕ್ ಡೌನ್ ನ ಮೂಲಕ ಸ್ವಲ್ಪಮಟ್ಟಿಗೆ ನಿಯಂತ್ರಿಸಲಾಯಿತಾದರೂ,

ಎರಡನೇ ಅಲೆಯ ಮೂಲಕ ಅದೇ ಲಾಕ್ಡೌನ್ ಮರುಕಳಿಸಿ ಮತ್ತೊಮ್ಮೆ ಬಡವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿತು. ಇದೇ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಒಂದು ಘಟನೆ ನಡೆದಿದೆ ಇದನ್ನು ಕೇಳಿದರೆ ನಿಮ್ಮ ಮನಸ್ಸು ಕರಗೋದು ಗ್ಯಾರಂಟಿ. ಹೌದು ಮುಂಬೈನಲ್ಲಿ ಒಂದು ಅಜ್ಜಿ ಪ್ರತಿದಿನವೂ ಮಾರಲು ಹೊರಗಡೆ ಬರುತ್ತಿತ್ತು. ಆರಕ್ಷಕರು ಪ್ರತಿದಿನ ಗಸ್ತು ತಿರುಗಲು ಬಂದಾಗ ಅಜ್ಜಿಯನ್ನು ನೋಡುತ್ತಿರುತ್ತಾರೆ. ಒಮ್ಮೆ ಅಜ್ಜಿಯನ್ನು ಈಗ ಲಾಕ್ಡೌನ್ ಇದೆ ಏಕೆ ನೀವು ಹೊರಗಡೆ ಬರುತ್ತೀರಿ ಎಂದು ಕೇಳಿದಾಗ ಆ ಅಜ್ಜಿ ನಾನು ಹೂವನ್ನು ಮಾರದಿದ್ದರೆ ನಮ್ಮ ಪರಿವಾರದವರು ಉಪವಾಸದಿಂದ ಇರ ಬೇಕಾಗುತ್ತದೆ ಎಂದು ದುಃಖದಿಂದ ಹೇಳಿದರು.

ಅದಕ್ಕೆ ಆರಕ್ಷಕರು ಏನು ಮಾಡಿದ್ದಾರೆಂದು ಕೇಳಿದರೆ ನೀವು ಖಂಡಿತವಾಗಿಯೂ ಮರಗುತ್ತೀರಿ. ಹೌದು ಅಜ್ಜಿಯ ಪ್ರಶ್ನೆಗೆ ಆರಕ್ಷಕರು ಏನನ್ನು ಉತ್ತರ ಕೊಡದೆ ಡೈರೆಕ್ಟಾಗಿ ಕೈಯಲ್ಲಿದ್ದ 500 ರೂಪಾಯಿ ಅಜ್ಜಿಯ ಕೈಕೊಟ್ಟು ಇನ್ನು ಮುಂದೆ ನೀವು ಲಾಕ್ಡೌನ್ ಮುಗಿಯೋ ತನಕ ಹೊರಗಡೆ ಬರುವ ಅವಶ್ಯಕತೆ ಇಲ್ಲ ಪ್ರತಿದಿನ ನಾವು ನಿಮಗೆ ತಲಾ 500 ರೂಪಾಯಿಗಳನ್ನು ನೀಡುತ್ತೇವೆ ನೀವು ಹಾಗೂ ನಿಮ್ಮ ಕುಟುಂಬದವರು ಉಪವಾಸ ಬೀಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

ಲಂಚ ತೆಗೆದುಕೊಳ್ಳುವ ಆರಕ್ಷಕರು ಇರುವ ಈ ಕಾಲದಲ್ಲಿ ಇಂತಹ ಮಾನವೀಯ ಗುಣವುಳ್ಳ ನಿಷ್ಕಲ್ಮಶ ಮನಸ್ಸುಳ್ಳ ದಕ್ಷ ಅಧಿಕಾರಿಗಳನ್ನು ನಾವು ಗೌರವಿಸಬೇಕು. ಅಸಹಾಯಕ ಅಜ್ಜಿಯ ಆರ್ಥಿಕ ಸಂಕಷ್ಟವನ್ನು ನೀಗಿಸಿದ ಆರಕ್ಷಕರಿಗೆ ನಮ್ಮೆಲ್ಲರ ಗೌರವದ ನಮನಗಳು ಸಲ್ಲಿಸೋಣ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.