ಒಂದಲ್ಲ ಎರಡಲ್ಲ 23 ವರ್ಷ ಒಂದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಅಂಬಿ, ಯಾಕೆ ಹಾಗೂ ಅದಾದ ಮೇಲೆ ಮನೆಕಟ್ಟಿದ್ದು ಯಾಕೆ ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ, ರೆಬಲ್ ಸ್ಟಾರ್ ಅಂಬರೀಶ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಕೇವಲ ನಟನೆಯಿಂದ ಮಾತ್ರವಲ್ಲದೆ ತಮ್ಮ ವಿಶೇಷ ವ್ಯಕ್ತಿತ್ವದಿಂದಲೂ ಗುರುತಿಸಿಕೊಂಡವರು ನಮ್ಮ ಅಂಬಿಅಣ್ಣ. ನಟ ಅಂಬರೀಶ್ ಅವರು ಮಾತಿನಲ್ಲಿ ಒರಟು ಅನ್ನಿಸಿದರು, ಅವರ ಮನಸ್ಸು ಮಾತ್ರ ಹೂವಿನಂಥದ್ದು. ತಾವು ರಾಜಕೀಯಕ್ಕೆ ಬರುವುದಕ್ಕೂ ಮೊದಲು ಜನರ ಮನಸ್ಸನ್ನು ಗೆದ್ದಿದ್ದರು ಅಂಬಿ. ನಂತರ ರಾಜಕೀಯಕ್ಕೂ ಧುಮುಕಿ, ಸಂಸದರಾಗಿ ಮಂಡ್ಯದ ಉದ್ಧಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ.

ರೆಬಲ್ ಸ್ಟಾರ್ ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿಯನ್ನು ಹೇಳ್ತಿವಿ ಕೇಳಿ! ಮಂಡ್ಯದ ಗಂಡು ಅಂಬರೀಶ್ ಅವರು ಬಹಳ ಸ್ವಾಭಿಮಾನಿ. ತಮಗೆ ಆದ ಕಷ್ಟವನ್ನು ಎಲ್ಲರಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅಂಬರೀಶ್ ತಾವು ನಟನೆಯಲ್ಲಿರುವಾಗ ಸ್ವಂತ ಮನೆಯನ್ನು ಹೊಂದಿರಲಿಲ್ಲ. ಹಾಗಾಗಿ ತಾವು ಬೆಂಗಳೂರಿನ ಹೋಟೆಲ್ ಒಂದರಲ್ಲಿ ವಾಸವಾಗಿದ್ದರು. ಇದು ಗೊತ್ತಾಗಿದ್ದು ತುಂಬಾ ವರ್ಷಗಳ ನಂತರ!

ಅಂಬರೀಶ ಅಣ್ಣ ಅವರನ್ನು ಸಂಸದ ಪ್ರಕಾಶ್ ತಮ್ಮ ಮಗಳ ಮದುವೆಗೆ ಆಹ್ವಾನಿಸುತ್ತಾರೆ. ಮದುವೆಗೆ ಬಂದ ಅಂಬರೀಷ್ ಊಟ ಮಾಡದೇ ಮದುಮಕ್ಕಳನ್ನು ಹರಸಿ ಹೊರಡುತ್ತಾರೆ. ಇದನ್ನು ಗಮನಿಸಿದ ಪ್ರಕಾಶ್ ಅವರಿಗಾಗಿಯೇ ಒಮ್ಮೆ ಔತಣ ಕೂಟವನ್ನು ಏರ್ಪಡಿಸಿ ಕರೆಯುತ್ತಾರೆ. ನಂತರ ಇದಕ್ಕೆ ಬಂದ ಅಂಬಿ ತಾನು ಹೋಟೆಲ್ ನಲ್ಲಿಯೇ ಉಳಿದುಕೊಂಡಿದ್ದನ್ನು ಹೇಳುತ್ತಾರೆ. ತಕ್ಷಣ ಬೆಂಗಳೂರಿನಲ್ಲಿ ಸೈಟ್ ಒಂದನ್ನು ಕೊಡಿಸಿ, ಅಲ್ಲಿಯೇ ಮನೆ ಕಟ್ಟಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಆದರೆ ಆಗಿನ ಕಾಲದ ಸೈಟ್ ಇದ್ದ ಜಾಗದಲ್ಲಿ ಕಾಡೇ ಇದ್ದಿದ್ದಕ್ಕೆ ಅಂಬಿ ಈ ಸೈಟ್ ನ್ನು ನಿರಾಕರಿಸುತ್ತಾರೆ. ಆದರೆ ಭವಿಷ್ಯದಲ್ಲಿ ಚಿನ್ನದ ಬೆಲೆ ಬರುವ ಜಾಗ ಎಂಬ ಭರವಸೆಯನ್ನು ನೀಡಿ ಪ್ರಕಾಶ್ ಈ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅಂಬಿಗೆ ಸಲಹೆ ನೀಡುತ್ತಾರೆ. ಅವರು ಹೇಳಿದಂತೆ ಇದು ಈ ಜಾಗದ ಬೆಲೆ ಗಗನಕ್ಕೇರಿದೆ ಎನ್ನಬಹುದು. ಹೀಗೆ 23ವರ್ಷಗಳ ಕಾಲ ಹೋಟೆಲ್ ಒಂದರಲ್ಲಿಯೇ ಜೀವನ ಸಾಗಿಸಿ ಕೊನೆಗೆ ಸ್ವಂತ ಮನೆ ಮಾಡಿಕೊಂಡರು ಅಂಬರೀಶ್ ಅವರು.

Leave a Reply

Your email address will not be published. Required fields are marked *