ಅವಸರದಲ್ಲಿ ಇದ್ದಾಗ ಥಟ್ ಎಂದು ವಿಶೇಷ ರೀತಿಯಲ್ಲಿ ಮಾಡಿ ಅಕ್ಕಿ ರೊಟ್ಟಿ, ಎಲ್ಲರೂ ಒಂದು ರೊಟ್ಟಿ ಜಾಸ್ತಿನೇ ತಿಂತಾರೆ.

ನಮಸ್ಕಾರ ಸ್ನೇಹಿತರೇ ಕೆಲವೊಮ್ಮೆ ತಿಂಡಿ ಮಾಡಲೇಬೇಕಾದ ಅನಿವಾರ್ಯತೆ ಇರತ್ತೆ ಆದ್ರೆ ಪುರಸೊತ್ತೇ ಇರಲ್ಲ, ಅತಹ್ವಾ ಸಿಕ್ಕಾಪಟ್ಟೆ ಹಸಿವಾಗಿರತ್ತೆ, ತಿಂಡಿ ತಯಾರು ಮಾಡೋದಕ್ಕೆ ತುಂಬಾ ಸಮಯ ಹಿಡಿಯತ್ತಲ್ಲಾ ಅಂತ ಚಿಂತೆ. ಆದ್ರೆ ಇನ್ನು ಈ ಸಮಸ್ಯೆನೇ ಇಲ್ಲ ಬಿಡಿ, ಮನೆಯಲ್ಲಿ ಯಾವಾಗಲೂ ಒಂದಿಷ್ಟು ಅಕ್ಕಿ ಹಿಟ್ಟು ಇಟ್ಕೊಂಬಿಡಿ, ಅಂದ್ರಿಂದ ಐದು ನಿಮಿಷದಲ್ಲಿ ಈ ರೊಟ್ಟಿ ತಯಾರಿಸಿಕೊಳ್ಳಬಹುದು.

ಅವಸರದಲ್ಲಿ ಇದ್ದಾಗ ಥಟ್ ಎಂದು ವಿಶೇಷ ರೀತಿಯಲ್ಲಿ ಮಾಡಿ ಅಕ್ಕಿ ರೊಟ್ಟಿ, ಎಲ್ಲರೂ ಒಂದು ರೊಟ್ಟಿ ಜಾಸ್ತಿನೇ ತಿಂತಾರೆ. 2

ತಕರಾರಿ ಅಕ್ಕಿ ರೊಟ್ಟಿ ಮಾಡೊದಕ್ಕೆ ಬೇಕಾದ ಸಾಮಗ್ರಿಗಳು: ಅಕ್ಕಿ ಹಿಟ್ಟು ಒಂದು ಕಪ್, ಕ್ಯಾರೆಟ್, ಸೌತೆಕಾಯಿ, ಈರುಳ್ಳಿ, ಹಸಿಮೆಣಸು, ಶುಂಠಿ ಸ್ವಲ್ಪ, ಕೊತ್ತಂಬರಿ ಸೊಪ್ಪು, ನೀರು, ರೊಟ್ಟಿಸುಡಲು ಎಣ್ಣೆ ಅಥವಾ ತುಪ್ಪ (ಮೇಲಿನ ಎಲ್ಲಾ ತರಕಾರಿಗಳನ್ನು ನಿಮ್ಮ ಇಷ್ಟಕ್ಕೆ ಅನುಸಾರವಾಗಿ ಹಾಕಿಕೊಳ್ಳಬಹುದು, ಇಲ್ಲವಾದಲ್ಲಿ ಎಲ್ಲಾ ತರಕಾರಿಗಳನ್ನು ತುರಿದು ಅಥವಾ ಸಣ್ಣಗೆ ಹೆಚ್ಚಿ ಒಂದು ಕಪ್ ಅಕ್ಕಿ ಹಿಟ್ಟಿಗೆ, ಅರ್ಧ ಕಪ್ ನಷ್ಟು ತರಕಾರಿಗಳನ್ನು ಹಾಕಬಹುದು. ಹಸಿ ಮೆಣಸು ನಿಮ್ಮ ಖಾರಕ್ಕೆ ಅನುಗುಣವಾಗಿ ಹಾಕಿಕೊಳ್ಳಿ), ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಒಂದು ಕಪ್ ಅಕ್ಕಿಹಿಟ್ಟನ್ನು ಹಾಕಿಕೊಳ್ಳಿ. ಇದಕ್ಕೆ ಹೆಚ್ಚಿಟ್ಟುಕೊಂಡ ಎಲ್ಲಾ ತರಕಾರಿಗಳನ್ನೂ ಸೇರಿಸಿ, ಈಗ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ಇದನ್ನು ಈಗ ಸ್ವಲ್ಪ ನೀರನ್ನು ಸೇರಿಸಿ ಕಲಸಿ. ಸೌತೆಕಾಯಿ ಹಾಕಿದರೆ ನೀರು ಬಿಡುತ್ತದೆ. ಹಾಗಾಗಿ ನೀರನ್ನು ಅಗತ್ಯಕ್ಕೆ ತಕ್ಕ ಹಾಗೆ ಹಾಕಿ. ಹಿಟ್ಟನ್ನು ಚಪಾತಿ ಹಿಟ್ಟಿನಂತೆ ಮೃದುವಾಗಿ ಮಾಡಿಕೊಳ್ಳಿ.

ಈಗ ಒಂದು ತವಾವನ್ನು ಬಿಸಿಗಿಡಿ. ಹಿಟ್ಟನ್ನು ಮಧ್ಯಮ ಗತ್ರದ ಉಂಡೆಯನ್ನಾಗಿ ಮಾಡಿಕೊಂಡು ಒಂದು ಬಟರ್ ಪೇಪರ್ ಅಥವಾ ಬಾಳೆ ಎಲೆ ಇದ್ದರೆ ತುಂಬಾ ಒಳ್ಳೆಯದು, ಸ್ವಲ್ಪ ನೀರು ಹಾಗೂ ಎಣ್ಣೆಯನ್ನು ಕೈಗೆ ಮುಟ್ಟಿಸಿಕೊಂಡು ತಟ್ಟಿ. ಇದನ್ನು ಬಿಸಿಯಾದ ತವಾ ಮೇಲೆ ತುಪ್ಪ ಅಥವಾ ಎಣ್ಣೆ ಹಾಕಿ ಒಂದು ನಿಮಿಷ ಬೇಯಿಸಿದರೆ ರುಚಿಯಾದ ತರಕಾರಿ ಅಕ್ಕಿ ರೊಟ್ಟಿ ಸವಿಯಲು ಸಿದ್ದ. ಇನ್ನು ನಿಮಗೆ ವೇಗವಾಗಿ ಆಗಬೇಕೆಂದರೆ ಬೇರೆ ತರಕಾರಿ ಹಾಕದೆ, ಈರುಳ್ಳಿ ಹಸಿಮೆಣಸನ್ನು ಹಾಕಿಯೂ ಈ ಈ ರೊಟ್ಟಿಯನ್ನು ಮಾಡಿಕೊಳ್ಳಬಹುದು. ಈ ರೆಸಿಪಿಯನ್ನು ಹೇಗೆ ಮಾಡುವುದು ಎನ್ನುವುದನ್ನು ತಿಳಿಯಲು ಕೆಳಗಿನ ಈ ವಿಡಿಯೋವನ್ನು ನೋಡಬಹುದು.