ಕೆಜಿಎಫ್ ಎಷ್ಟೆಲ್ಲಾ ಸಾಧನೆ ಮಾಡಿದರು ಕರ್ನಾಟಕದಲ್ಲಿ ಅದೊಂದು ವಿಷಯದಲ್ಲಿ ಅಪ್ಪುನೇ ಕಿಂಗ್. ಅಪ್ಪು ಗೆದ್ದದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ದೊಡ್ಡ ಮಟ್ಟದಲ್ಲಿ ಕರ್ನಾಟಕ ರಾಜ್ಯ ಸೇರಿದಂತೆ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಕೂಡ ದೊಡ್ಡಮಟ್ಟದ ಕಲೆಕ್ಷನನ್ನು ದಾಖಲಿಸಿದೆ. ಹೌದು ಗೆಳೆಯರೇ ಈಗಾಗಲೇ ಜಾಗತಿಕವಾಗಿ 1200 ಕೋಟಿ ಗಿಂತಲೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಕೆಜಿಎಫ್ ಚಾಪ್ಟರ್ 2 ಚಿತ್ರ ಮಾಡಿದೆ ಎಂಬುದಾಗಿ ತಿಳಿದುಬಂದಿದ್ದು ಇದು ಹಿಂದಿಯಲ್ಲಿ ಕೂಡ ಎರಡನೇ ಅತ್ಯಧಿಕ ಗಳಿಕೆಯನ್ನು ಕಂಡಿರುವಂತಹ ಸಿನಿಮಾವಾಗಿ ಮೂಡಿಬಂದಿದೆ.

ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತೀಯ ಚಿತ್ರರಂಗದಲ್ಲಿ ಇರುವಂತಹ ಬಹುತೇಕ ಎಲ್ಲಾ ದಾಖಲೆಗಳನ್ನು ಒಂದೊಂದಾಗಿಯೇ ರಾಕಿ ಬಾಯ್ ಅಳಿಸಿಹಾಕಿ ಪುನರ್ ನಿರ್ಮಾಣ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಕನ್ನಡ ಚಿತ್ರರಂಗ ಜಾಗತಿಕವಾಗಿ ಮಿಂಚಿ ಮೆರೆಯಬೇಕು ಎನ್ನುವ ರಾಕಿಂಗ್ ಸ್ಟಾರ್ ಯಶ್ ರವರ ಕನಸು ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ನನಸಾಗಿದೆ ಎಂದು ಹೇಳಬಹುದಾಗಿದೆ. ಪರಭಾಷೆಗಳಲ್ಲಿ ಮಿಂಚಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಕನ್ನಡದಲ್ಲಿ ಕೂಡ ಹಲವಾರು ದಾಖಲೆಗಳನ್ನು ಮಾಡಿದೆ. ಹೌದು ಗಳೇ ಇದುವರೆಗೂ ಕೆಜಿಎಫ್ ಚಾಪ್ಟರ್ 2 ಚಿತ್ರ 75ಲಕ್ಷ ಟಿಕೆಟ್ ಸೇಲ್ ನ್ನು ಕರ್ನಾಟಕದಲ್ಲಿ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಈ ಮೂಲಕ ಒಂದು ದೊಡ್ಡ ದಾಖಲೆ ನಿರ್ಮಿಸಿದೆ ಎಂದರು ತಪ್ಪಾಗಲಾರದು.

ಆದರೆ ಟಿಕೆಟ್ ಸೇಲ್ ವಿಚಾರಕ್ಕೆ ಬರುವುದಾದರೆ ಅಪ್ಪು ಅವರ ಸಿನಿಮಾನೇ ಟಾಪ್ ನಲ್ಲಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಇದಕ್ಕೂ ಮುನ್ನ 75 ಲಕ್ಷಕ್ಕೂ ಅಧಿಕ ಟಿಕೆಟ್ ಸೇಲಾದ ಕನ್ನಡ ಚಿತ್ರರಂಗದ ಚಿತ್ರ ಎನ್ನುವ ಖ್ಯಾತಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರ ಭಾಗಿಯಾಗಿತ್ತು. ಇದಕ್ಕಿಂತ ಹೆಚ್ಚಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ರಾಜಕುಮಾರ ಚಿತ್ರ ಒಂದು ಕೋಟಿಗೂ ಅಧಿಕ ಟಿಕೆಟ್ ಸೇಲ್ ಕಂಡು ಕನ್ನಡ ಚಿತ್ರರಂಗದಲ್ಲಿ ಒಂದು ಲೆಕ್ಕದಲ್ಲಿ ನವಯುಗದಲ್ಲಿ ದಾಖಲಿಸಿತ್ತು. ಹೀಗಾಗಿ ಕೆಜಿಎಫ್ ಚಾಪ್ಟರ್ 2 ಯಾವುದೇ ದಾಖಲೆಯನ್ನು ನಿರ್ಮಿಸಿದರು ಕೂಡ ಈ ದಾಖಲೆ ಖಂಡಿತವಾಗಿ ಈ ಯುಗದ ಮಟ್ಟಿಗೆ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲೇ ದಾಖಲಾಗಿರಲಿದೆ ಎಂಬುದಾಗಿ ಹೇಳಬಹುದಾಗಿದೆ.