ವಿಶ್ವದ ಅತ್ಯಂತ ಮೌಲ್ಯಯುತ ಆಟಗಾರರನ್ನು ಹೆಸರಿಸಿದ ಬ್ರಾಡ್ ಹಾಗ್: ಆಯ್ಕೆಯಾದ ಭಾರತೀಯ ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೆ ಭಾರತ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು ಎಂದು ಕೇಳಿದರೆ ಕೇಳಿಬರುವ ಸರಿಯಾದ ಉತ್ತರ ಹಾಕಿ ಇರಬಹುದು ಆದರೆ ಭಾರತ ದೇಶದ ಅತ್ಯಂತ ಜನಪ್ರಿಯ ಕ್ರೀಡೆ ಯಾವುದೇ ಅನುಮಾನವಿಲ್ಲದೆ ಕ್ರಿಕೆಟ್ ಆಗಿದೆ. ಕ್ರಿಕೆಟನ್ನು ಕೇವಲ ಕ್ರೀಡೆಯನ್ನು ವುದಕ್ಕಿಂತ ಹೆಚ್ಚಾಗಿ ತಮ್ಮ ಜೀವನದ ಒಂದು ಭಾಗವೇ ಎನ್ನುವಂತೆ ಆಚರಿಸುತ್ತಾರೆ. ಇಡೀ ವಿಶ್ವದಲ್ಲಿ ಕ್ರಿಕೆಟ್ ಅತ್ಯಂತ ಹೆಚ್ಚು ಪ್ರಸಿದ್ಧವಾಗಿರುವ ದೇಶ ಎಂದರೆ ಅದು ನಮ್ಮ ಭಾರತ ದೇಶ. ಹೀಗಾಗಿಯೇ ನಮ್ಮ ಭಾರತ ದೇಶದಲ್ಲಿ ಪ್ರತಿಯೊಂದು ವರ್ಷವೂ ಕೂಡ ಕ್ರಿಕೆಟ್ನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಯುವ ಪ್ರತಿಭೆಗಳು ಮುನ್ನೆಲೆಗೆ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯದ ಮೂಲಕ ಬಂದು ಮಿಂಚುತ್ತಾರೆ.

ಇನ್ನು ನಿಮಗೆಲ್ಲ ತಿಳಿದಿರುವಂತೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಗಿರುವ ಬ್ರಾಡ್ ಹಾಗ್ ಅವರ ಕುರಿತಂತೆ ತಿಳಿದಿರಬಹುದು. ಆಸ್ಟ್ರೇಲಿಯಾದ ಮಾಜಿ ಆಟಗಾರ ಆಗಿರುವ ಇವರು ಈಗಾಗಲೇ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದಂತಹ ಸಾಧನೆಯನ್ನು ಬರೆದಿದ್ದಾರೆ. ಇನ್ನು ಇವರು ತಮ್ಮ ನೆಚ್ಚಿನ ವಿಶ್ವದ ಅತ್ಯಂತ ಮೌಲ್ಯಯುತ ಟಿ-ಟ್ವೆಂಟಿ ಕ್ರಿಕೆಟಿಗ ಯಾರೆಂಬುದನ್ನು ಈಗ ವ್ಯಕ್ತಪಡಿಸಿದ್ದಾರೆ. ಹೀಗೆ ಇವರ ನೆಚ್ಚಿನ ಮೌಲ್ಯಯುತ ಟಿ20 ಕ್ರಿಕೆಟಿಗ ಸ್ಥಾನಕ್ಕೆ ಆಯ್ಕೆಯಾಗಿರುವುದು ಬೇರೆ ಯಾವುದು ದೇಶದ ಆಟಗಾರರಲ್ಲ ಬದಲಾಗಿ ನಮ್ಮ ದೇಶದ ಖ್ಯಾತ ಆಟಗಾರ. ಹೌದು ಗೆಳೆಯರೇ ಅವರು ಹೆಸರಿಸಿದ್ದು ಹಾರ್ದಿಕ್ ಪಾಂಡ್ಯ ರವರನ್ನು.

ವಿಶ್ವದ ಅತ್ಯಂತ ಮೌಲ್ಯಯುತ ಆಟಗಾರರನ್ನು ಹೆಸರಿಸಿದ ಬ್ರಾಡ್ ಹಾಗ್: ಆಯ್ಕೆಯಾದ ಭಾರತೀಯ ಯಾರು ಗೊತ್ತೇ? 2

ಸರಿಯಾಗಿ ಹೋದ ನಂತರ ಮತ್ತೆ ಐಪಿಎಲ್ಗೆ ಮರಳುವ ಹಾರ್ದಿಕ್ ಪಾಂಡ್ಯ ರವರು ಮೊದಲ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕಪ್ತಾನನಾಗಿ ಟ್ರೋಫಿಯನ್ನು ಗೆಲ್ಲುತ್ತಾರೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕೂಡ ಬ್ಯಾಟಿಂಗ್ ಪ್ರದರ್ಶನದಲ್ಲಿ ಅತ್ಯುತ್ತಮವಾದ ಜವಾಬ್ದಾರಿಯನ್ನು ನಿಭಾಯಿಸಿ ತನ್ನ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಮುಖಾಂತರವೂ ಕೂಡ ಯಾವ ಸಂದರ್ಭದಲ್ಲಿ ಯಾವ ಚತುರತೆಯನ್ನು ಪ್ರದರ್ಶಿಸಬೇಕು ಎನ್ನುವ ಬುದ್ಧಿವಂತಿಕೆ ಅವರಲ್ಲಿದೆ. ಮೊದಲ ಎಸೆತದಿಂದಲೇ ಬೌಲರ್ಗಳಿಗೆ ಬೌಂಡರಿ ಬಾರಿಸುವ ಸಾಮರ್ಥ್ಯ ಅವರಲ್ಲಿದೆ ಹೀಗಾಗಿ ಅವರು ಈ ಜಮಾನದ ಅತ್ಯಂತ ಮೌಲ್ಯಯುತ ಟಿ-ಟ್ವೆಂಟಿ ಆಟಗಾರ ಎಂಬುದಾಗಿ ಹಾಗ್ ಹೇಳಿದ್ದಾರೆ.