ಎಲೆಕೋಸು ಇಷ್ಟಪಡದವರೂ ಕೂಡ ಇಷ್ಟಪಟ್ಟು ತಿನ್ನುವಂಥ ಕ್ಯಾಬೇಜ್ ದೋಸೆ ಮಾಡುವುದು ಗೊತ್ತೇ?? ಸುಲಭವಾಗಿ ಮನೆಯಲ್ಲಿಯೇ ಟ್ರೈ ಮಾಡಿ.

ನಮಸ್ಕಾರ ಸ್ನೇಹಿತರೇ ಕ್ಯಾಬೇಜ್ ರುಚಿಯಲ್ಲಿ ಸಪ್ಪೆ. ಹಾಗಾಗಿ ಸಾಕಷ್ಟು ಜನ ಕ್ಯಾಬೇಜ್ ಅಥವಾ ಎಲೆಕೋಸನ್ನು ಇಷ್ಟಪಡುವುದಿಲ್ಲ. ಆದರೆ ಕ್ಯಾಬೇಜ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕ್ಯಾಬೇಜ್ ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ. ಆದರೂ ಹಾಗೆ ತಿನ್ನಲು ಸಾಧ್ಯವಾಗದ ಕ್ಯಾಬೇಜ್ ನ ದೋಸೆ ಮಾಡಿಕೊಂಡು ತಿಂದರೆ ನಾಲಿಗೆಗೂ ರುಚಿ ಆರೋಗ್ಯಕ್ಕೂ ಉತ್ತಮ.

ಎಲೆಕೋಸು ಇಷ್ಟಪಡದವರೂ ಕೂಡ ಇಷ್ಟಪಟ್ಟು ತಿನ್ನುವಂಥ ಕ್ಯಾಬೇಜ್ ದೋಸೆ ಮಾಡುವುದು ಗೊತ್ತೇ?? ಸುಲಭವಾಗಿ ಮನೆಯಲ್ಲಿಯೇ ಟ್ರೈ ಮಾಡಿ. 2

ಬೇಕಾಗುವ ಸಾಮಗ್ರಿಗಳು: 1 ಕಪ್ ಅಕ್ಕಿ, 2 ಚಮಚ ಉದ್ದಿನ ಬೇಳೆ, ಅರ್ಧ ಚಮಚ ಮೆಂತ್ಯೆ, 10 ಒಣ ಮೆಣಸಿನಕಾಯಿ, 1 ಕಪ್ ತೆಂಗಿನಕಾಯಿ, 2 ಚಮಚ ಕೊತ್ತಂಬರಿ ಬೀಜ, ಒಂದು ಚಮಚ ಜೀರಿಗೆ, ಕಾಲು ಕಪ್ ಬೆಲ್ಲ 3 ಚಮಚ ಹುಣಸೆಹಣ್ಣಿನ ರಸ, ಅರ್ಧ ಚಮಚ ಅರಿಶಿನ, ಒಂದು ಉಪ್ಪು, 3 ಕಪ್ ಎಲೆಕೋಸು (ಸಣ್ಣಗೆ ಕತ್ತರಿಸಿಕೊಳ್ಳಬೇಕು), ಒಂದು ಕಪ್ ನೀರು.

ತಯಾರಿಸುವ ವಿಧಾನ: ಮೊದಲಿಗೆ, ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ, ಉದ್ದಿನ ಬೇಳೆ, ಮೆಂತ್ಯೆಯನ್ನು ಹಾಕಿ ಚೆನ್ನಾಗಿ ತೊಳೆಯಿರಿ. ಇದಕ್ಕೆ ನೀರನ್ನು ಹಾಕಿ, ಒಣ ಮೆಣಸಿನಕಾಯಿ ಸೇರಿಸಿ, 5 ಗಂಟೆಗಳ ಕಾಲ ನೆನೆಸಿ. ಈಗ ನೆನೆಸಿದ ಪದಾರ್ಥಗಳನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿ, ಅದಕ್ಕೆ ತೆಂಗಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಬೆಲ್ಲ, ಹುಣಸೆಹಣ್ಣು, ಅರಿಶಿನ ಮತ್ತು ಉಪ್ಪು ಸೇರಿಸಿ, ಅಗತ್ಯವಿರುವಷ್ಟು ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅಕ್ಕಿ ಮತ್ತು ಮಸಾಲೆಯನ್ನು ಪ್ರತ್ಯೇಕವಾಗಿ ರುಬ್ಬಿಕೊಳ್ಳುವುದು ಉತ್ತಮ. ಈಗ ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ಕತ್ತರಿಸಿದ ಎಲೆಕೋಸು ಹಾಗೂ ನೀರನ್ನು ಸೇರಿಸಿ ಮಿಶ್ರಣ ಮಾಡಿ. ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ. ಈಗ ಒಂದು ತವಾವನ್ನು ಬಿಸಿ ಮಾಡಿ. ಅದಕ್ಕೆ ಎಣ್ಣೆ ಹಾಕಿ, ಈಗ ದೋಸೆ ಹಿಟ್ಟನ್ನು ತವಾಕ್ಕೆ ಹಾಕಿ ದೋಸೆ ಮಾಡಲು ಹರಡಿ. ಮುಚ್ಚಳ ಮುಚ್ಚಿ ಬೇಯಿಸಿ. ಎರಡೂ ಕಡೆಗೂ ಚೆನ್ನಾಗಿ ಬೇಯಿಸಿದರೆ ಬಿಸಿಬಿಸಿ ಕ್ಯಾಬೇಜ್ ದೋಸೆ ಸವಿಯಲು ಸಿದ್ಧ. ನಿಮಗಿಷ್ಟವಾದ ಚಟ್ನಿ ಜೊತೆ ಇದನ್ನು ಸವಿಯಬಹುದು.