ಸಾಮಾನ್ಯ ದೋಸೆ ತಿಂದು ಬೋರ್ ಆಗಿದ್ಯಾ?? ಹಾಗಿದ್ದರೆ ಮೃದುವಾದ ತೆಂಗಿನಕಾಯಿ ದೋಸೆ ಹೀಗೆ ಟ್ರೈ ಮಾಡಿ. ಪಕ್ಕ ಎಲ್ಲರೂ ಇಷ್ಟ ಪಡ್ತಾರೆ.

ನಮಸ್ಕಾರ ಸ್ನೇಹಿತರೇ ದೋಸೆಯಲ್ಲಿ ನಾನಾ ಬಗೆಗಳಿವೆ ಅದರಲ್ಲಿ ಕೆಲವು ಅತ್ಯಂತ ರುಚಿಕರವಾಗಿಯೂ ಇರುತ್ತವೆ. ಅವುಗಳಲ್ಲಿ ತೆಂಗಿನಕಾಯಿ ದೋಸೆ ಕೂಡ ಒಂದು. ಅತ್ಯಂತ ಮೃದುವಾಗಿ ತೆಂಗಿನಕಾಯಿ ದೋಸೆ ಹೇಗೆ ಮಾಡೋದು ನೋಡೋಣ. ಬೇಕಾಗುವ ಸಾಮಗ್ರಿಗಳು: ಒಂದು ಕಪ್ ಅಕ್ಕಿ, ಒಂದು ಚಮಚ ಉದ್ದಿನಬೇಳೆ, ಒಂದು ಚಮಚ ಮೆಂತ್ಯ, ಅರ್ಧ ಕಪ್ ತೆಂಗಿನ ತುರಿ, ಅವಲಕ್ಕಿ ೩ ಚಮಚದಷ್ಟು, ಸಕ್ಕರೆ ಮತ್ತು ಉಪ್ಪು ಅರ್ಧ ಚಮಚ, ನೀರು.

ಮಾಡುವ ವಿಧಾನ: ಒಂದು ಪಾತ್ರೆಗೆ ಅಕ್ಕಿ, ಉದ್ದಿನಬೇಳೆ, ಮೆಂತ್ಯವನ್ನು ಹಾಕಿ, ಚೆನ್ನಾಗಿ ತೊಳೆದು ನಾಲ್ಕು ಗಂಟೆಗಳ ಕಾಲ ನೆನೆಸಿಡಿ. ನಂತರ ಇವುಗಳನ್ನು ರುಬ್ಬಬೇಕು. ರುಬ್ಬುವುದಕ್ಕೆ ಅರ್ಧ ಕಪ್ ನಷ್ಟು ಅವಲಕ್ಕಿಯನ್ನು ತೊಳೆದಿಟ್ಟುಕೊಂಡು ೫ ನಿಮಿಷ ಹಾಗೇ ಬಿಡಿ. ಈಗ ಮೊದಲಿಗೆ ನೆನೆಸಿಟ್ಟ ಅಕ್ಕಿ ಬೇಳೆಯನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ, ನಂತರ ಅವಲಕ್ಕಿ ಹಾಗೂ ತೆಂಗಿನ ತುರಿಯನ್ನು ಹಾಕಿ ರುಬ್ಬಿಕೊಂಡು ಅದನ್ನೂ ಅದೇ ಪಾತ್ರೆಗೆ ಹಾಕಿ.

ಈಗ ಮುಚ್ಚಳ ಮುಚ್ಚಿ ೮-೧೦ ಗಂಟೆ ಹುದುಗು ಬರುವುದಕ್ಕೆ ಬಿಡಿ. ಚಳಿಗಾಲವಾದ್ದರಿಂದ ತುಸು ಜಾಸ್ತಿ ಹೊತ್ತು ಬಿಟ್ಟರೆ ಚೆನ್ನಾಗಿ ಹುಳಿ ಬರುತ್ತದೆ. ಈಗ ಹುಳಿ ಬಂದಿರುವ ಹಿಟ್ಟಿಗೆ ಉಪ್ಪು ಮತ್ತು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಒಂದು ದೋಸೆ ತವಾಕ್ಕೆ ಸ್ವಲ್ಪ ಎಣ್ಣೆ ಸವರಿ ಬಿಸಿ ಮಾಡಿ, ಅದಕ್ಕೆ ಹಿಟ್ಟನ್ನು ಹಾಕಿ ದೋಸೆ ಹುಯ್ದರೆ ಅತ್ಯಂತ ಮೃದುವಾದ ತೆಂಗಿನಕಾಯಿ ದೋಸೆ ಸಿದ್ಧ. ಈ ರೆಸಿಪಿ ಮಾಡುವ ವಿಧಾನವನ್ನು ಈ ಕೆಅಗಿನ ವಿಡಿಯೋದಲ್ಲಿ ಕೊಡಲಾಗಿದೆ.