ವಿಶೇಷ ರೀತಿಯ ದೋಸೆ ಮಾಡಿ, ಆರೋಗ್ಯಕ್ಕೆ ಬಹಳ ಒಳ್ಳೆಯದು, ಸಮಯ ಕೂಡ ಕಡಿಮೆ. ಚಿಕ್ಕವರಿಂದ ವಯಸ್ಸಾಗಿರುವವರಿಗೆ ಸೂಕ್ತ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಕ್ಕಿ, ಉದ್ದು, ರವೆ ಇವುಗಳ ದೋಸೆ ಆಡಿಕೊಂಡು ತಿಂದು ತಿಂದು ಬೇಸರವಾಗಿರಬೇಕು ಅಲ್ವಾ? ಹಾಗೆಯೆ ದಿನವೂ ಉದ್ದಿನ ದೋಸೆ ತಿನ್ನುವುದು ಕೂಡ ಒಳ್ಳೆಯದಲ್ಲ, ಹಾಗಾಗಿ ಆರೋಗ್ಯಕರವಾದ ಓಟ್ಸ್ ದೋಸೆ ಮಾಡಿಕೊಂಡು ತಿಂದು ನೋಡಿ. ಇದು ಮಕ್ಕಳಿಗೂ ಕೂಡ ತುಂಬಾನೇ ಒಳ್ಳೆಯದು.

ಓಟ್ಸ್ ದೋಸೆ ಮಾಡಲು ಬೇಕಾಗಿರುವ ಸಾಮಗ್ರಿಗಳು: ಮಾಡುವ ವಿಧಾನ: ಮೊದಲಿಗೆ ಒಂದು ಕಪ್ ಓಟ್ಸ್ ನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದಕ್ಕೆ ಮೂರು ಚಮಚ ರವೆಯನ್ನು ಹಾಕಿ. ರವೆಯನ್ನು ಹಾಕುವುದರಿಂದ ದೋಸೆ ಗರಿಗರಿಯಾಗಿ ಆಗುತ್ತೆ. ಇದಕ್ಕೆ ನೀರನ್ನು ಹಾಕಿ ಅರ್ಧ ಗಂಟೆ ನೆನೆಸಿಡಿ. ನಂತರ ನೆನೆಸಿಟ್ಟ ಓಟ್ಸ್ ಹಾಗೂ ರವೆಯನ್ನು ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಅಡುಗೆ ಸೋಡಾ, (ಅಡುಗೆ ಸೋಡಾ ಹಾಕದೆಯೂ ಮಾಡಬಹುದು). ಈಗ ಚೆನ್ನಾಗಿ ಒಮ್ಮೆ ಮಿಕ್ಸ್ ಮಾಡಿ ೧೫ ನಿಮಿಷ ನೆನೆಯಲು ಬಿಡಿ.

ಹದಿನೈದು ನಿಮಿಷದ ನಂತರ ಒಂದು ದೋಸೆ ಕಾವಲಿಯನ್ನು ಬಿಸಿ ಮಾಡಿಕೊಂಡು ಅದಕ್ಕೆ ದೋಸೆ ಹಿಟ್ಟನ್ನು ಹುಯ್ಯಿರಿ, ಗರಿಗರಿಯಾಗಿ ಬೇಕಿದ್ದರೆ ತೆಳ್ಳಗೆ ಹಾಗೂ ಉತ್ತಪ್ಪದಂತೆ ದಪ್ಪವಾಗಿಯೂ ಮಾಡಿಕೊಳ್ಳಬಹುದು. ಇನ್ನು ಇದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ೧ ನಿಮಿಷದ ನಂತರ ಮುಚ್ಚಳ ತೆಗೆದು ದೋಸೆ ಮಗುಚಿ ಒಂದು ಪ್ಲೇಟ್ ಗೆ ಹಾಕಿದರೆ ರುಚಿಯಾದ ಆರೋಗ್ಯಕರವಾದ ಓಟ್ಸ್ ದೋಸೆ ಸಿದ್ದವಾಗುತ್ತದೆ. ಡಯಟ್ ಮಾಡುವವರು ಓಟ್ಸ್ ದೋಸೆ ತಿನ್ನುವುದು ಸೂಕ್ತ. ಇದರಲ್ಲಿ ಪ್ರೋಟಿಸ್ ಫೈಬರ್ ಹೇರಳವಾಗಿರುತ್ತದೆ. ಓಟ್ಸ್ ನ್ನು ಹಾಗೆಯೇ ತಿನ್ನಲು ರುಚಿ ಅನ್ನಿಸದೇ ಇರುವವರು ದೋಸೆ ಮಾಡಿ ತಿನ್ನುವುದು ಉತ್ತಮ.