ಜಿಯೋ ಸಿಮ್ ನಲ್ಲಿ ಬೆಸ್ಟ್ ಪ್ಲಾನ್ ಯಾವುದು ಗೊತ್ತೇ?? ಜನರು ಓಡೋಡಿ ರಿಚಾರ್ಜ್ ಮಾಡಿಸುವ ಪ್ಲಾನ್ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಹಾಗೂ ಬಹುಬೇಡಿಕೆಯ ಟೆಲಿಕಾಂ ಸಂಸ್ಥೆಯೆಂದರೆ ಅದು ಕೇವಲ ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆಯೆಂದು ಹೇಳಬಹುದಾಗಿದೆ. ತನ್ನ ಗ್ರಾಹಕರನ್ನು ಸೆಳೆದುಕೊಳ್ಳಲು ಪ್ರತಿ ಬಾರಿ ಜನರಿಗೆ ಇಷ್ಟವಾಗುವಂತಹ ಕಡಿಮೆ ಬೆಲೆಯಲ್ಲಿ ಹೆಚ್ಚು ಲಾಭವನ್ನು ನೀಡುವಂತಹ ಯೋಜನೆಗಳನ್ನು ಪರಿಚಯಿಸುವ ಕಾರಣದಿಂದಲೇ ಜಿಯೋ ಸಂಸ್ಥೆ ನಂಬರ್1 ಸಂಸ್ಥೆಯಾಗಿ ಕಾಣಿಸಿಕೊಂಡಿದೆ.

ಸದ್ಯಕ್ಕೆ ಜಿಯೋ ಸಂಸ್ಥೆ ಪರಿಚಯಿಸಿರುವ 999 ರೂಪಾಯಿಗಳ ಪೋಸ್ಟ್ ಪೇಯ್ಡ್ ರಿಚಾರ್ಜ್ ಪ್ಲಾನ್ ಎಲ್ಲರ ನೆಚ್ಚಿನ ರಿಚಾರ್ಜ್ ಪ್ಲಾನ್ ಆಗಿ ಮಾರ್ಪಟ್ಟಿದೆ. ಯಾಕೆಂದರೆ ಇದು ಫ್ಯಾಮಿಲಿ ರಿಚಾರ್ಜ್ ಪ್ಲಾನ್ ಆಗಿದೆ. ಹಾಗಿದ್ದರೆ ಇದರ ಲಾಭಗಳೇನು ಮೊದಲು ತಿಳಿಯೋಣ ಬನ್ನಿ. ನಾಲ್ಕು ಜನರನ್ನು ಹೊಂದಿರುವ ಒಂದು ಕುಟುಂಬ 999 ರೂಪಾಯಿಗಳ ಈ ರಿಚಾರ್ಜ್ ಪ್ಲಾನ್ ನಲ್ಲಿ ಸುಲಭವಾಗಿ ತಮ್ಮ ಟೆಲಿಕಾಂ ಸೇವೆಯನ್ನು ಪಡೆಯಬಹುದಾಗಿದೆ. ಹಾಗಿದ್ದರೆ ಈ ಯೋಜನೆಯಲ್ಲಿ ಸಿಗುವ ಪ್ರಯೋಜನಗಳೇನು ಹಾಗೂ ಲಾಭಗಳೇನು ಎಂಬುದರ ಕುರಿತಂತೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಜಿಯೋ ಸಿಮ್ ನಲ್ಲಿ ಬೆಸ್ಟ್ ಪ್ಲಾನ್ ಯಾವುದು ಗೊತ್ತೇ?? ಜನರು ಓಡೋಡಿ ರಿಚಾರ್ಜ್ ಮಾಡಿಸುವ ಪ್ಲಾನ್ ಯಾವುದು ಗೊತ್ತೇ?? 2

ಪ್ರತಿ ತಿಂಗಳು ನಾಲ್ಕು ಸದಸ್ಯರ ಸಿಮ್ ಗಳಿಗೆ ಪ್ರತಿದಿನ 100 ಎಸ್ಎಂಎಸ್ ಹಾಗೂ 100gb ಇಂಟರ್ನೆಟ್ ಡೇಟಾವನ್ನು ಬಳಸಬಹುದಾಗಿದ್ದು ಪ್ರತಿ ತಿಂಗಳ ಬಿಲ್ಲಿಂಗ್ ವೇಳೆ ನಾಲ್ಕು ಸದಸ್ಯರು 200gb ಡೇಟಾವನ್ನು ಉಚಿತವಾಗಿ ಬಳಸಬಹುದಾಗಿದೆ. ಹೆಚ್ಚುವರಿ ಡಾಟಾ ಬಳಕೆಯನ್ನು ಮಾಡಿದರೆ 1gb ಡಾಟಾ ಗೆ 10 ರೂಪಾಯಿಗಳಂತೆ ಪಾವತಿ ಮಾಡಬೇಕಾಗುತ್ತದೆ. 200gb ಡಾಟಾ ಗಿಂತ ಕಡಿಮೆ ಉಪಯೋಗಿಸಿದರೆ ಅದರ ಉಳಿದ ಡಾಟಾವನ್ನು ಮುಂದಿನ ತಿಂಗಳಿಗೆ ವರ್ಗಾಯಿಸುತ್ತಾರೆ. ಹೀಗಾಗಿ ಒಟ್ಟಾರೆಯಾಗಿ 500gb ಇಂಟರ್ನೆಟ್ ಡೇಟ್ ಅವರಿಗೆ ರೋಲ್ ಓವರ್ ಸಿಗುತ್ತದೆ.

ಇನ್ನು ಇದಕ್ಕೆ ಉಚಿತವಾಗಿ ಸಿಗುವ ಒಟಿಟಿ ಅಪ್ಲಿಕೇಶನ್ಗಳ ಸೇವೆ ಕೂಡ ಎಲ್ಲರ ಕಣ್ಣರಳಿಸುವಂತಿದೆ. ಅಮೆಜಾನ್ ಪ್ರೈಮ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ನೆಟ್ಫ್ಲಿಕ್ಸ್ ಜಿಯೋ ಟಿವಿ ಸೇರಿದಂತೆ ಹಲವಾರು ಜಿಯೋ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆ ಎನ್ನುವುದು ಒಂದು ವರ್ಷಗಳ ಕಾಲ ಸಿಗಲಿದೆ. ನಾಲ್ಕು ಜನರ ಕುಟುಂಬಕ್ಕೆ ಇದೊಂದು ಉತ್ತಮ ಯೋಜನೆಯಾಗಿದೆ ಎಂದರೆ ತಪ್ಪಾಗಲಾರದು.