ಕೊನೆಗೂ ಸಿಕ್ತು ಆರ್ಸಿಬಿ ತಂಡಕ್ಕೆ ಆನೆಬಲ, ಬ್ಯಾಟಿಂಗ್ ನಲ್ಲಿ ಆರ್ಸಿಬಿ ಈಗ ಮತ್ತಷ್ಟು ಸಶಕ್ತ . ಆರ್ಸಿಬಿ ಅಭಿಮಾನಿಗಳು ಫುಲ್ ಕುಶ್. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ನಾಳೆ ಪಂಜಾಬ್ ತಂಡದ ವಿರುದ್ಧ ಆಡಲಿದೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಲು ಪ್ರಮುಖ ಪಂದ್ಯವಾಗಿದೆ ಎಂದರೆ ತಪ್ಪಾಗಲಾರದು. ಇನ್ನು ತಂಡದಲ್ಲಿ ಕೆಲವೊಂದು ಸಮಸ್ಯೆಗಳು ಕಾಡುತ್ತಿದೆ ಅದರಲ್ಲಿ ವಿರಾಟ್ ಕೊಹ್ಲಿ ರವರ ಫಾರ್ಮ್ ಕೂಡ ಹೌದು. ಅದರಲ್ಲಿ ಈ ಬಾರಿಯ ಸೀಸನ್ ನಲ್ಲಿ ವಿರಾಟ್ ಕೊಹ್ಲಿ ಅವರು ಬರೋಬ್ಬರಿ ಮೂರು ಬಾರಿ ಡಕೌಟ್ ಆಗಿದ್ದಾರೆ. ಮೂರು ಬಾರಿ ಶೂನ್ಯಕ್ಕೆ ಔಟ್ ಆಗುವಂತಹ ಆಟಗಾರ ನಿಜಕ್ಕೂ ಕೂಡ ವಿರಾಟ್ ಕೊಹ್ಲಿ ಅಲ್ಲ ಎನ್ನುವುದನ್ನು ಯಾರೂ ಕೂಡ ಹೇಳಬಹುದಾಗಿದೆ.

ಆದರೆ ಈ ಬಾರಿಯ ಸೀಸನ್ ನಲ್ಲಿ ಅವರು ಕೊಂಚಮಟ್ಟಿಗೆ ಎಂದು ಹೇಳುವುದಕ್ಕಿಂತ ಸಂಪೂರ್ಣವಾಗಿ ವೈಫಲ್ಯವನ್ನು ಕಂಡಿದ್ದಾರೆ ಎಂದು ಹೇಳಬಹುದಾಗಿದೆ. ಎಲ್ಲರೂ ಕೂಡ ಅವರ ಕಂಬ್ಯಾಕ್ ಗೆ ಕಾಯುತ್ತಿದ್ದಾರೆ. ಇತ್ತೀಚಿಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಕೂಡ ಇದರ ಕುರಿತಂತೆ ಮಾತನಾಡಿದ್ದರು. ವಿಡಿಯೋ ಮುಖಾಂತರವೇ ಆರ್ಸಿಬಿ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ಕೂಡ ನೀಡಿದ್ದಾರೆ. ಹಾಗಿದ್ದರೆ ಹಾಗೂ ನ್ಯೂಸ್ ಯಾವುದು ಎನ್ನುವುದನ್ನು ವಿವರವಾಗಿ ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಆರ್ಸಿಬಿ ತಂಡದ ಅತ್ಯಂತ ನೆಚ್ಚಿನ ಆಟಗಾರರಲ್ಲಿ ಎಬಿಡಿ ವಿಲಿಯರ್ಸ್ ರವರು ಕೂಡ ಒಬ್ಬರಾಗಿದ್ದಾರೆ. ಹಲವಾರು ಸೀಸನ್ ಗಳಿಂದ ಡಿವಿಲಿಯರ್ಸ್ ರವರು ಆರ್ಸಿಬಿ ತಂಡದ ಆಪದ್ಬಾಂಧವನಾಗಿ ಕಾಣಿಸಿಕೊಂಡಿದ್ದರು ಆದರೆ ವೈಯಕ್ತಿಕ ಕಾರಣಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇದೆ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರು ಹೇಳಿರುವ ಪ್ರಕಾರ ಎಬಿ ಡಿವಿಲಿಯರ್ಸ್ ಅವರು ಮುಂದಿನ ವರ್ಷದಿಂದ ತಂಡದಲ್ಲಿ ಹೊಸ ಜವಾಬ್ದಾರಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಇದರ ಪ್ರಕಾರ ಎಬಿ ಡಿವಿಲಿಯರ್ಸ್ ಅವರು ಮುಂದಿನ ವರ್ಷದಿಂದ ಆರ್ಸಿಬಿ ಯಲ್ಲಿ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದಾಗುತ್ತಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.