ಬೇರೆ ಹೆಚ್ಚೇನೂ ಬೇಡವೇ ಬೇಡ, ಕೇವಲ ಲವಂಗದಿದ ಈ ಕ್ರಮ ಮಾಡಿ ಕೋಟ್ಯಧಿಪತಿಗಳಾಗಿ, ಪ್ರತಿ ಕೆಲಸದಲ್ಲೂ ಯಶಸ್ಸು ನಿಶ್ಚಿತ. ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಾಂಬಾರ ಪದಾರ್ಥಗಳಲ್ಲಿ ಒಂದಾದ ಲವಂಗ, ಎಷ್ಟು ಪ್ರಯೋಜನಕಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಕೇವಲ ಅಡುಗೆ ರುಚಿ ಹೆಚ್ಚಿಸಲು, ಪರಿಮಳ ಹೆಚ್ಚಿಸಲು ಮಾತ್ರವಲ್ಲ, ಲವಂಗ ಆರೊಗ್ಯಕ್ಕೂ ಅಷ್ಟೇ ಪರಿಣಾಮಕಾಗಿ ಮನೆಮದ್ದು ಎನಿಸಿದೆ. ಹೌದು ಲವಂಗ ಅಥವಾ ಲವಂಗದ ಎಣ್ಣೆ ಹಲ್ಲು ನೋವಿಗೆ ರಾಮಬಾಣ. ಲವಂಗದ ಡಿಟಾಕ್ಸ್ ಪಾನೀಯಗಳು ದೇಹದಲ್ಲಿನ ಕಶ್ಮಲಗಳನ್ನು ತೆಗೆದುಹಾಕಲುಸಹಾಯ ಮಾಡುತ್ತದೆ. ಇಷ್ಟೇ ಅಲ್ಲ ಸ್ನೇಹಿತರೆ, ಲವಂಗ ಎನ್ನುವುದು ನಮ್ಮ ಜೀವನದ ದುಃಖ ನಿವಾರಕ, ಆರ್ಥಿಕ ಪರಿಸ್ಥಿತಿ ಸುಧಾರಕ ವಸ್ತುವಾಗಿಯೂ ಕೂಡ ಕಾರ್ಯ ನಿರ್ವಹಿಸಬಲ್ಲದು. ಹೇಗೆ ಅಂತೀರಾ? ಮುಂದೆ ಓದಿ.

ನೀವು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿದ್ದರೆ, ಹಣ ಪಡೆಯಲು ಸಮಸ್ಯೆಯಾಗುತ್ತಿದ್ದರೆ, ಆಗ ಲವಂಗದಿಂದ ಹಣವನ್ನು ಪಡೆಯುವ ಮಾರ್ಗವೊಂದಿದೆ. 11 ಅಥವಾ 21 ಲವಂಗಗಳನ್ನು ಕರ್ಪೂರದ ಜೊತೆ ಸೇರಿಸಿ ಅಮಾವಾಸ್ಯೆ ಇಲ್ಲವೇ ಹುಣ್ಣಿಮೆಯ ರಾತ್ರಿ ಸುಡಬೇಕು. ಬಳಿಕ ತಾಯಿ ಲಕ್ಷ್ಮೀಯನ್ನು ಪೂಜಿಸಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಬರಬೇಕಿದ್ದ ಹಣ ನಿಮ್ಮ ಕೈಸೇರುತ್ತದೆ. ಇನ್ನು ನೀವು ಯಾವುದೋ ಸಂದರ್ಶನಕ್ಕೆ ಹೊರಟಿದ್ದೀರಿ ಎಂದುಕೊಳ್ಳಿ. ಆಗ ಮನೆಯಿಂದ ಹೊರ ಹೋಗುವಾಗ ಬಾಯಲ್ಲಿ ಲವಂಗ ಇಟ್ಟುಕೊಳ್ಳಿ. ಅಗಿದು ಉಳಿದುದನ್ನು ಹೋದ ಕಚೇರಿಯ ಸ್ಥಳದಲ್ಲಿ ಉಗಿಯಿರಿ. ನಿಮ್ಮ ಮನೆದೇವರಲ್ಲಿ ಕೆಲಸದಲ್ಲಿ ಯಶಸ್ಸು ಕೊಡಲು ದೇವರನ್ನು ಪ್ರಾರ್ಥಿಸಿ. ಇದರಿಂದ ಯಶಸ್ಸು ಖಂಡಿತ ನಿಮ್ಮದಾಗುತ್ತದೆ.

ಬೇರೆ ಹೆಚ್ಚೇನೂ ಬೇಡವೇ ಬೇಡ, ಕೇವಲ ಲವಂಗದಿದ ಈ ಕ್ರಮ ಮಾಡಿ ಕೋಟ್ಯಧಿಪತಿಗಳಾಗಿ, ಪ್ರತಿ ಕೆಲಸದಲ್ಲೂ ಯಶಸ್ಸು ನಿಶ್ಚಿತ. ಏನು ಮಾಡಬೇಕು ಗೊತ್ತೇ?? 2

ಸ್ನೇಹಿತರೆ, ಸಾಕಷ್ಟು ಸಾರಿ ಕಷ್ಟ ಪಟ್ಟು ದುಡಿದರೂ ಸರಿಯಾದ ಪ್ರತಿಫಲ ಸಿಕ್ಕಿರುವುದಿಲ್ಲ. ಹಾಗೆ ಫಲ ಸಿಗಬೇಕಾದರೆ ಹೀಗೆ ಮಾಡಿ. ಮಂಗಳವಾರದ ದಿನ ಆಂಜನೇಯ ವಿಗ್ರಹದ ಎದಿರು ಮಲ್ಲಿಗೆ ಎಣ್ಣೆಯ ದೀಪ ಹಚ್ಚಿ. ಆ ದೀಪಕ್ಕೆ ಎರಡು ಲವಂಗಗಳನ್ನು ಹಾಕಿಡಿ. ಹನುಮಾನ್ ಚಾಲೀಸಾ ಹೇಳಿ ಆರತಿ ಮಾಡಿ. ಆಂಜನೇಯನಲ್ಲಿ ಭಕ್ತಿಯಿಂದ ಬೇಡಿದರೆ ನಿಮ್ಮ ಕಾರ್ಯಗಳು ಕಂಡಿತ ಯಶಸ್ಸಾಗುತ್ತದೆ. ನಿರಂತರ 21 ಮಂಗಳವಾರದ ಕಾಲ ಹೀಗೆ ಮಾಡುವುದರಿಂದ ಉತ್ತಮ ಪ್ರತಿಫಲ ನಿಮಗೆ ಸಿಕ್ಕೇ ಸಿಗುತ್ತದೆ. ಇನ್ನು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಶನಿವಾರ ಎಣ್ಣೆ ದೀಪದೊಂದಿಗೆ ನಾಲ್ಕು ಲವಂಗವನ್ನು ಸುಟ್ಟು ಹಾಕಿ. ಇದನ್ನು ಮನೆಯ ಕತ್ತಲ ಮೂಲೆಯಲ್ಲಿರಿಸಬೇಕು. ಇದರಿಂದ ಮನೆಯ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.