ಮುಂಜಾನೆ ಎದ್ದ ತಕ್ಷಣ ಬೇರೆ ಏನು ಬೇಡ, ಜಸ್ಟ್ ಹೀಗೆ ಮಾಡಿ ಸಾಕು, ದೇವಾನು ದೇವತೆಗಳು ಅಷ್ಟು ಎನ್ನುವರು. ಏನು ಮಾಡ್ಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಮ ಕಷ್ಟ, ತೊಂದರೆ ಸಂಕಷ್ಟಗಳಿಗೆ ನಾವು ದೇವರ ಮೊರೆಹೋಗುತ್ತೇವೆ. ಭಕ್ತಿಯಿಂದ ಬೇಡಿಕೊಳ್ಳುತ್ತೇವೆ, ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ, ಪೂಜಾದಿಗಳನ್ನು ಸಲ್ಲಿಸುತ್ತೇವೆ. ಆದರೆ ಇಷ್ಟು ಮಾಡಿದರೆ ದೇವರು ನಮಗೆ ಒಲಿಯುತ್ತಾನೆಯೇ? ಕೇಳಿದ್ದೇಲ್ಲವನ್ನೂ ಕರುಣಿಸುತ್ತಾನೆಯೇ? ಖಂಡಿತ ಇಲ್ಲ, ಇವುಗಳ ಜೊತೆಗೆ ನಾವು ಅನುಸರಿಸಬೇಕಾದ ಕೆಲವು ವಿಷಯಗಳಿವೆ. ಅವು ದೇವರಿಗೆ ನಾವು ಪ್ರೀತಿಪಾತ್ರರಾಗಲು ಅನುವುಮಾಡಿಕೊಡುತ್ತದೆ. ಬನ್ನಿ ಯಾವ ವಿಷಯಗಳು ನೋಡೋಣ.

ಶಾಸ್ತ್ರಗಳು ಹೇಳುವ ಪ್ರಕಾರ ಯಾವುದಾದರೂ ವಿಷಯದ ಆರಂಭ ಉತ್ತಮವಾಗಿದ್ದಾಗ ಅದರ ಅಂತ್ಯ ಕೂಡ ಶುಭವಾಗುತ್ತದೆ. ದಿನವೂ ಬೆಳಗ್ಗೆ ನಾವು ಈ ಮಾತನ್ನು ನೆನಪಿಸಿಕೊಂಡರೆ ನಮ್ಮ ಬೆಳಗನ್ನೂ ಕೂಡ ಉತ್ತಮವಾಗಿಯೇ ಶುರು ಮಾಡುತ್ತೇವೆ, ಆಗ ದಿನದ ಅಂತ್ಯ ಕೂಡ ಶುಭಕರವಾಗಿರುತ್ತದೆ. ಬೆಳಗ್ಗೆ ಎದ್ದ ನಂತರ ದೇವರ ಸ್ಮರಣೆ ಮಾಡಬೇಕು. ದೇವರ ನಾಮಸ್ಮರಣೆಯ ಮೂಲಕ ದಿನವನ್ನು ಪ್ರಾರಂಭಿಸಿದರೆ ಅದು ನಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಧನಾತ್ಮಕವಾಘಿರುವವರು ಸದಾ ಯಶಸ್ಸನ್ನು ಸಾಧಿಸುತ್ತಾರೆ. ಇನ್ನು ಬೆಳಗ್ಗೆ ಎದ್ದ ಕೂಡಲೇ ಮಾಡಬೇಕಾದ ಎರಡನೇ ಕೆಲಸವೆಂದರೆ ತಂದೆ-ತಾಯಿಗಳ ಪಾದಸ್ಪರ್ಶ. ತಂದೆ ತಾಯಿಯ ಆಶೀರ್ವಾದ ಸಿಕ್ಕರೆ ಅದು ದೇವರ ಆಶೀರ್ವಾದವಿದ್ದಂತೆ ಎಂದು ಹೇಳಲಾಗುತ್ತದೆ. ತಂದೆ ತಾಯಿ ಮನಃಪೂರ್ವಕವಾಗಿ ಹಾರೈಸಿದರೆ ಆ ದಿನ ನಿಮ್ಮಲ್ಲಿ ಉತ್ಸಾಹಕ್ಕೆ ಕೊರತೆಯಾಗುವುದಿಲ್ಲ

sz

ಬೆಳಿಗ್ಗೆ ಎದ್ದು ಮುಖ್ಯವಾಗಿ ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಈ ಜೀವನ ಸಿಕ್ಕಿರುವುದೇ ಪ್ರಕೃತಿಯಿಂದ. ಹಾಗಾಗಿ ಪ್ರಕೃತಿ ಹಾಗೂ ಪೂರ್ವಜರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಇದರಿಂದ ಯಶಸ್ಸು ಗೌರವ ಲಭಿಸುತ್ತದೆ. ಜೊತೆಗೆ ಲಕ್ಷ್ಮಿಯ ಕೃಪೆ ಯಾವಾಗಲೂ ಜೊತೆಗಿರುತ್ತದೆ. ಚಾಣಕ್ಯ ನೀತಿಯಲ್ಲಿ ಹೇಳುವಂತೆ ಯಾವ ವ್ಯಕ್ತಿಯು ಪ್ರತಿದಿನ ಉದಾತ್ತ ಕಾರ್ಯವನ್ನು ಮಾಡುತ್ತಾನೋ ಆತ ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ. ಇತರರ ಸೇವೆ ಮಾಡಿದರೆ, ನಮ್ಮ ರೋಗಗಳು ಮತ್ತು ಅಸ್ವಸ್ಥತೆಗಳು ದೂರವಾಗುತ್ತವೆ. ಈ ಮೇಲಿನ ಕಾರ್ಯಗಳನ್ನು ದಿನವೂ ಮಾಡಿದರೆ ಅದರಲ್ಲೂ ದಿನದ ಆರಂಭದಲ್ಲಿಯೇ ಮಾಡಿದರೆ, ಆ ವ್ಯಕ್ತಿ ದೇವರ ಕೃಪೆಗೆ ಪಾತ್ರನಾಗುತ್ತಾನೆ. ಜೊತೆಗೆ ಆತನಲ್ಲಿ ಸಕಾರಾತ್ಮಕ ಶಕ್ತಿ ಆತನ ಜೀವನದಲ್ಲಿ ಯಶಸ್ಸನ್ನು ತಂದು ಕೊಡುತ್ತದೆ.