ಮದುವೆಯಾಗಿದ್ದಾರೆ ಎಂದು ಗಾಳಿ ಸುದ್ದಿ ಕೇಳಿಬರುತ್ತಿರುವ ಪವಿತ್ರ ಲೋಕೇಶ್ ಹಾಗು ನರೇಶ್ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೆ?? ಎಷ್ಟು ಚಿಕ್ಕವರು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ನಟಿ ಹಾಗೂ ತೆಲುಗು ಚಿತ್ರರಂಗದ ನಟರೊಬ್ಬರ ಕುರಿತಂತೆ ಗಾಳಿಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡಿ ಸಂಚಲನವನ್ನು ಸೃಷ್ಟಿಸಿದೆ. ಹೌದು ಗೆಳೆಯರೇ ಅದೇನೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಪೋಷಕ ನಟಿಯಾಗಿರುವ ಪವಿತ್ರಾಲೋಕೇಶ್ ರವರು ತೆಲುಗು ಚಿತ್ರರಂಗದ ನಟ ಆಗಿರುವ ನರೇಶ ರವರೊಂದಿಗೆ ಮದುವೆ ಆಗಿದ್ದಾರೆ ಎನ್ನುವ ವಿಚಾರ. ಹೌದು ಗೆಳೆಯರೇ ಪವಿತ್ರ ಲೋಕೇಶ್ ಅವರ ಕುರಿತಂತೆ ನಿಮಗೆಲ್ಲರಿಗೂ ತಿಳಿದೇ ಇದೆ.

ಕನ್ನಡ ಕಿರುತೆರೆ ವಾಹಿನಿ ಸೇರಿದಂತೆ ಕನ್ನಡ ಸಿನಿಮಾ ರಂಗದಲ್ಲಿ ಕೂಡ ಪೋಷಕ ನಟಿ ಹಾಗೂ ನಾಯಕ ನಟಿಯಾಗಿ ಮಿಂಚಿ ಮೆರೆದವರು. ಇಂದಿಗೂ ಕೂಡ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸುತ್ತಿದ್ದಾರೆ. ಇನ್ನು ನಟ ನರೇಶ್ ಅವರನ್ನು ನೀವು ಗಮನಿಸಿರಬಹುದು. ಅವರ ಕುರಿತಂತೆ ನಿಮಗೆ ಇನ್ನಷ್ಟು ಸರಿಯಾದ ಡೀಟೇಲ್ಸ್ ಬೇಕು ಎಂದರೆ ಹೇಳುತ್ತೇನೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬುರವರ ತಂದೆ ಸೂಪರ್ ಸ್ಟಾರ್ ಕೃಷ್ಣ ರವರ ಎರಡನೇ ಹೆಂಡತಿ ವಿಜಯನಿರ್ಮಲ ರವರ ಮಗನೇ ನರೇಶ್ ಆಗಿದ್ದಾರೆ. ಇನ್ನು ಹಲವಾರು ಮೂಲಗಳಿಂದ ಇವರಿಬ್ಬರು ಮದುವೆಯಾಗುತ್ತಿರುವ ಅಥವಾ ಮದುವೆಯಾಗಿರುವ ವಿಚಾರ ಸುಳ್ಳು ಎಂಬುದಾಗಿ ಹೇಳುತ್ತಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿಗಳು ಇನ್ನು ಕೂಡ ಹರಿದಾಡುತ್ತಲೇ ಇವೆ. ಅದೇನೇ ಇರಲಿ ಇವರಿಬ್ಬರ ವಯಸ್ಸಿನ ಅಂತರದ ಕುರಿತಂತೆ ಈಗ ಹಲವಾರು ಸುದ್ದಿಗಳು ಏರ್ಪಡುತ್ತಿವೆ.

ಇನ್ನು ಇವರಿಬ್ಬರ ವಯಸ್ಸಿನ ಅಂತರದ ಕುರಿತಂತೆ ತಿಳಿದುಕೊಳ್ಳುವುದಾದರೆ ಪವಿತ್ರ ಲೋಕೇಶ್ ರವರು ನರೇಶ್ ಅವರಿಗಿಂತ 19 ವರ್ಷ ವಯಸ್ಸಿನ ಚಿಕ್ಕ ವರಾಗಿದ್ದಾರೆ. ಪವಿತ್ರ ಲೋಕೇಶ್ ರವರಿಗೆ 43 ವರ್ಷ ವಯಸ್ಸಾಗಿದ್ದರೆ ನರೇಶ್ ರವರಿಗೆ 62 ವರ್ಷ ವಯಸ್ಸಾಗಿದೆ. ಈ ವಿಚಾರದ ಕುರಿತಂತೆ ಇವರಿಬ್ಬರಲ್ಲಿ ಒಬ್ಬರು ಮಾಧ್ಯಮಗಳ ಮುಂದೆ ಬಂದು ಅಧಿಕೃತವಾಗಿ ಘೋಷಣೆ ಮಾಡಬೇಕು ಇಲ್ಲವಾದರೆ ಇಂತಹ ಸುದ್ದಿಗಳಿಗೆ ಇನ್ನಷ್ಟು ರೆಕ್ಕೆಪುಕ್ಕ ನೀಡಿದಂತಾಗುತ್ತದೆ.