ರಾಯರ ಮಠದಲ್ಲಿ ಮಾಡುವ ತಿಳಿಸಾರು ಮಾಡುವ ವಿಧಾನದ ಬಗ್ಗೆ ನಿಮಗೆ ಗೊತ್ತೇ?? ಟ್ರೈ ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಬಟ್ಟಲು ಬೇಯಿಸಿಕೊಂಡ ಬೇಳೆ ಹಾಗೂ ಬೇಳೆಕಟ್ಟು, 1 ಬಟ್ಟಲು ಹುಣಸೆಹಣ್ಣಿನ ರಸ, 7 – 8 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಬೆಲ್ಲ, ಸ್ವಲ್ಪ ಕರಿಬೇವು, 2 ಚಮಚ ಧನಿಯಾ, 7 – 8 ಮೆಂತ್ಯ ಕಾಳು, ಅರ್ಧ ಚಮಚ ಸಾಸಿವೆ, 1 ಚಮಚ ಜೀರಿಗೆ, ಸ್ವಲ್ಪ ತೆಂಗಿನಕಾಯಿ ತುರಿ, ರುಚಿಗೆ ತಕಷ್ಟು ಉಪ್ಪು, ಚಿಟಿಕೆ ಇಂಗು, ಸ್ವಲ್ಪ ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು.

ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಮತ್ತೊಂದು ಕಡೆ ಒಂದು ಬಾಣಲೆಗೆ ಬೇಳೆ ಹಾಗೂ ಬೆಲೆಕಟ್ಟನ್ನು ಹಾಕಿ ಕಾಯಲು ಬಿಡಿ. ನಂತರ ಇದಕ್ಕೆ ಮಿಕ್ಸಿಯಲ್ಲಿ ಮಾಡಿಕೊಂಡ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆ ಹಣ್ಣಿನ ರಸ, ಸ್ವಲ್ಪ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿಕೊಂಡು 2 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ತೆಂಗಿನಕಾಯಿ ತುರಿ, ಕರಿಬೇವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ. ನಂತರ ಮತ್ತೆ ಗ್ಯಾಸ್ ಮೇಲೆ ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸ್ವಲ್ಪ ಇಂಗು, ಸಾಸಿವೆ, ಜೀರಿಗೆ, ಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಕುದಿಯುತ್ತಿರುವ ಸಾಂಬಾರಿಗೆ ಹಾಕಿಕೊಳ್ಳಿ. ಕೊನೆಯದಾಗಿ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿದರೆ ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಸವಿಯಲು ಸಿದ್ದ.