ಮೊದಲ ಪಂದ್ಯದಿಂದಲೂ ಅಗತ್ಯವಿರುವ ಬದಲಾವಣೆ ಮಾಡಲು ಮುಂದಾಗುತ್ತ ಆರ್ಸಿಬಿ? ಪಂಜಾಬ್ ಪಂದ್ಯಕ್ಕೂ ಮುನ್ನ ಹೊಸ ಆಟಗಾರ ಎಂಟ್ರಿ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗಾಗಲೇ ಆಡಿರುವ 12 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು 14 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನೂ ಉಳಿದಿರುವ ಅಂತಹ ಎರಡು ಪಂದ್ಯಗಳಲ್ಲಿ ಒಂದನ್ನಾದರೂ ಕೂಡ ಗೆಲ್ಲಲೇ ಬೇಕಾಗಿರುವಂತಹ ಪರಿಸ್ಥಿತಿ ಈಗ ಎದುರಾಗಿದೆ. ಇನ್ನು ಮುಂದಿನ ಪಂದ್ಯವನ್ನು ಮೇ 13ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡದೆದುರು ಆಡಲಿದೆ.

ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಯಂಕ್ ಅಗರ್ವಲ್ ನಾಯಕತ್ವದ ಪಂಜಾಬ್ ತಂಡದ ಎದುರು ಸೋತಿತ್ತು. ಹೀಗಾಗಿ ಮೇ 13ರಂದು ನಡೆಯುವಂತಹ ಪಂದ್ಯದಲ್ಲಿ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲುವ ಮೂಲಕ ತನ್ನ ರಿವೆಂಜ್ ಅನ್ನು ಕೂಡ ಸಂಪೂರ್ಣಗೊಳಿಸುವ ಇರಾದೆಯಲ್ಲಿದೆ. ಹೌದು ಗೆಳೆಯರೇ ಆದರೆ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಈ ಪಂದ್ಯಕ್ಕೂ ಮುನ್ನ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ. ಅದೇನೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬೌಲರ್ ಆಗಿ ಮೊಹಮ್ಮದ್ ಸಿರಾಜ್ ರವರು ಯಾವುದೇ ಪರಿಣಾಮ ಬೀರುತ್ತಿಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಮೊದಲ ಪಂದ್ಯದಿಂದಲೂ ಅಗತ್ಯವಿರುವ ಬದಲಾವಣೆ ಮಾಡಲು ಮುಂದಾಗುತ್ತ ಆರ್ಸಿಬಿ? ಪಂಜಾಬ್ ಪಂದ್ಯಕ್ಕೂ ಮುನ್ನ ಹೊಸ ಆಟಗಾರ ಎಂಟ್ರಿ?? 2

ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೀಮ್ ಮ್ಯಾನೇಜ್ಮೆಂಟ್ ಮುಂದಿನ ಪಂದ್ಯಕ್ಕೆ ಅವರ ಬದಲಿಗೆ ಸಿದ್ದಾರ್ಥ್ ಕೌಲ್ ರವರಿಗೆ ಅವಕಾಶ ನೀಡಬಹುದು ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಹೌದು ಗೆಳೆಯರೆ ಸಿದ್ದಾರ್ಥ್ ಕೌಲ್ ಹಲವರ ಬಳಿ ಸಾಕಷ್ಟು ಬೌಲಿಂಗ್ ವೇರಿಯೇಷನ್ ಗಳು ಇದ್ದು ಸಿರಾಜ್ ರವರು ಈಗಿರುವ ಪರಿಸ್ಥಿತಿಯಲ್ಲಿ ಅವರಿಗೆ ಉತ್ತಮ ರಿಪ್ಲೇಸ್ಮೆಂಟ್ ಆಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ತಂಡದ ಒಳಿತಿಗಾಗಿ ಈ ಬದಲಾವಣೆಯನ್ನು ಮುಂದಿನ ಪಂದ್ಯದಲ್ಲಿ ಮಾಡಲೇ ಬೇಕಾಗಿರುವುದು ಹೀಗಾಗಿ ಅತ್ಯಗತ್ಯವಾಗಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.