ಬೆಳ್ಳಿ ಪಾತ್ರೆಯಲ್ಲಿ ಪುಟ್ಟ ಮಕ್ಕಳಿಗೆ ಊಟವನ್ನು ಮಾಡಿಸಿದರೆ ಏನೆಲ್ಲ ಲಾಭಗಳಿವೆ ಗೊತ್ತಾ…?

ಸ್ನೇಹಿತರೆ ನಿಮಗೆಲ್ಲ ಗೊತ್ತಿರೋ ಹಾಗೆ ಎಳೆಮಕ್ಕಳ ಅಥವಾ ಚಿಕ್ಕ ಮಕ್ಕಳ ಆಹಾರ ವಿಷಯಗಳಲ್ಲಿ ಪೋಷಕರು ಹಾಗೂ ಕುಟುಂಬಸ್ಥರು ಬಹಳ ಜಾಗರೂಕತೆಯಿಂದ ಇರಬೇಕು. ಹಾಗೆ ಮಕ್ಕಳಿಗೆ ಊಟ ಮಾಡಿಸುವ ವಿಚಾರವಾಗಿಯೂ ಸಹ ತಾಯಿ ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ ಮಕ್ಕಳು ತುಂಬಾ ಸೂಕ್ಷ್ಮವಾಗಿರುವುದರಿಂದ ಎಲ್ಲ ರೀತಿಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು. ಅದರಲ್ಲೂ ಚಿಕ್ಕಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ಊಟವನ್ನು ತಿನ್ನಿಸಿದರೆ ತುಂಬಾ ಒಳ್ಳೆಯದು.

ಹೌದು ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ಊಟ ಮಾಡಿಸಿದರೆ ಆರೋಗ್ಯಕ್ಕೆ ತುಂಬಾನೆ ಪ್ರಯೋಜನಗಳಿವೆ. ಹಾಗಿದ್ದರೆ ಆ ಪ್ರಯೋಜನಗಳು ಯಾವವು ಅನ್ನೋದನ್ನ ತಿಳಿಯೋಣ ಬನ್ನಿ. ಸಾಮಾನ್ಯವಾಗಿ ಮಕ್ಕಳಿಗೆ ಊಟವನ್ನು ಪ್ಲಾಸ್ಟಿಕ್ ಮತ್ತು ಇತರೆ ಪಾತ್ರೆಗಳಿಂದ ಹೆಚ್ಚಾಗಿ ಮಾಡಿಸಲಾಗುತ್ತೆ. ಆದರೆ ಇದರಲ್ಲಿ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇದರಿಂದ ಹಾರ್ಮೋನ್ ಅಸಮತೋಲನ, ಹೊಟ್ಟೆ ಬೊಜ್ಜು, ಕ್ಯಾನ್ಸರ್ ಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ ಬೆಳ್ಳಿಯಲ್ಲಿ ಮಾತ್ರ ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸುವುದಿಲ್ಲ. ಇದರಲ್ಲಿ ಮಕ್ಕಳಿಗೆ ಊಟವನ್ನು ಮಾಡಿಸಿದರೆ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಬೆಳ್ಳಿ ಪಾತ್ರೆಯಲ್ಲಿ ಮಕ್ಕಳಿಗೆ ಊಟ ಮಾಡಿಸುವುದರಿಂದ ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ, ಹಾಗೂ ಬೆಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು, ಇದರಿಂದ ಯಾವುದೇ ರೀತಿಯ ಬ್ಯಾಕ್ಟೀರಿಯಾ ಅವರ ಬಳಿ ಸುಳಿಯದಂತೆ ಅದು ಕಾಯುತ್ತದೆ.

ಹೀಗೆ ಬೆಳ್ಳಿಯಲ್ಲಿ ಅಂಟಿ ಬ್ಯಾಕ್ಟರಿಯಲ್ ಗುಣಗಳು ಇರುವುದರಿಂದ, ಆಹಾರವನ್ನು ತೆಗೆದುಕೊಂಡರೆ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಗಳನ್ನು ಇದು ತಡೆಗಟ್ಟುತ್ತದೆ. ಅಷ್ಟೇ ಅಲ್ಲದೆ ದೇಹದ ರೋಗ ನಿರೋಧಕ ಶಕ್ತಿಯನ್ನು ಸಹ ಹೆಚ್ಚು ಮಾಡುತ್ತದೆ. ಇನ್ನು ಬಹುಮುಖ್ಯವಾಗಿ ಬೆಳ್ಳಿ ಪಾತ್ರೆಯಲ್ಲಿ ಮಕ್ಕಳಿಗೆ ಉಷ್ಣತೆ ಸಮತೋಲನದಲ್ಲಿರುತ್ತದೆ. ಇದೇ ಕಾರಣಕ್ಕಾಗಿ ಮಗುವಿನ ಮೊದಲ ಶಾಸ್ತ್ರ ವಾದ ಅನ್ನಪ್ರಸಾದ ಕಾರ್ಯಕ್ರಮದಲ್ಲಿ ಬೆಳ್ಳಿ ಪಾತ್ರೆಯಲ್ಲಿ ಮಗುವಿಗೆ ಅನ್ನವನ್ನು ಬಡಿಸಲಾಗುತ್ತದೆ.