ಇಂಗ್ಲೆಂಡ್ ಸರಣಿಗೂ ಮುನ್ನ ಮಾತನಾಡಿದ ಮೊಹಮ್ಮದ್ ಸಿರಾಜ್, ಎಚ್ಚರಿಕೆ ನೀಡಿ ಹೇಳಿದ್ದೇನು ಗೊತ್ತೇ??

ಆರ್.ಸಿ.ಬಿ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾಗಿ, ಹಲವು ವರ್ಷಗಳಿಂದ ಆರ್.ಸಿ.ಬಿ ತಂಡದಲ್ಲಿ ಇರುವುದು ಮೊಹಮ್ಮದ್ ಸಿರಾಜ್. ಇವರ ಆಟದ ಪ್ರದರ್ಶನ ಅಷ್ಟೇನು ಚೆನ್ನಾಗಿ ಇಲ್ಲದೆ ಹೋದರು, ಈ ವರ್ಷದ ಐಪಿಎಲ್ ಆಕ್ಷನ್ ನಲ್ಲಿ ಕೋಟಿ ಕೋಟಿ ಹಣ ನೀಡಿ, ಆರ್.ಸಿ.ಬಿ ಫ್ರಾಂಚೈಸಿ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು. ಆದರೆ 2022ರಲ್ಲಿ ಮೊಹಮ್ಮದ್ ಸಿರಾಜ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಇದೀಗ ಮೊದಲ ಬಾರಿಗೆ ತಮ್ಮ ವೈಫಲ್ಯದ ಕುರಿತು ಮಾತನಾಡಿದ್ದಾರೆ..

ಮೊಹಮ್ಮದ್ ಸಿರಾಜ್ ಅವರು, ಈ ವರ್ಷ 2022ರ ಐಪಿಎಲ್ ನಲ್ಲಿ ಕೇವಲ 9 ವಿಕೆಟ್ ಗಳನ್ನು ಪಡೆದರು. ಇವರ ಏಕಾನಮಿ 6.78 ಇತ್ತು ಎನ್ನುವ ಕಾರಣದಿಂದ ಆರ್.ಸಿ.ಬಿ ತಂಡ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು, ಆದರೆ ಈ ಸೀಸನ್ ನಲ್ಲಿ ಬಹಳ ದುಬಾರಿಯಾಗಿ ಕಾಣಿಸಿಕೊಂಡ ಮೊಹಮ್ಮದ್ ಸಿರಾಜ್, 30 ಸಿಕ್ಸ್ ಗಳನ್ನು ಎದುರಾಳಿ ತಂಡಕ್ಕೆ ನೀಡಿದ್ದಾರೆ. ಆರ್.ಸಿ.ಬಿ ಅಭಿಮಾನಿಗಳಿಗೂ ಸಹ ಬೇಸರವಾಗಿತ್ತು, ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದರು. ಇತ್ತೀಚೆಗೆ ಒಂದು ವೆಬ್ ಸೀರೀಸ್ ಲಾಂಚ್ ಸಮಯದಲ್ಲಿ ಈ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ಸಿರಾಜ್. ಸಿರಾಜ್ ಅವರು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..

ಇಂಗ್ಲೆಂಡ್ ಸರಣಿಗೂ ಮುನ್ನ ಮಾತನಾಡಿದ ಮೊಹಮ್ಮದ್ ಸಿರಾಜ್, ಎಚ್ಚರಿಕೆ ನೀಡಿ ಹೇಳಿದ್ದೇನು ಗೊತ್ತೇ?? 2

“ಈ ವರ್ಷ 2022ರ ಐಪಿಎಲ್ ಟೂರ್ನಿಯನ್ನು ಬಹಳ ಹಿನ್ನಡೆ ಅನುಭವಿಸಿದ್ದೇನೆ. ಕಳೆದ ವರ್ಷ 2021ರಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಅಗ್ರಸ್ಥಾನದಲ್ಲಿದ್ದೆ, ಆದರೆ ಈ ವರ್ಷ ನನ್ನ ಪ್ರದರ್ಶನ ನಿರೀಕ್ಷೆಯ ಮಟ್ಟಕ್ಕ ಮೂಡಿಬಂದಿಲ್ಲ. ಇದು ನನ್ನ ವೃತ್ತಿ ಜೀವನದ ಕೆಟ್ಟ ವರ್ಷವಾಗಿದೆ, 2020 ಮತ್ತು 2021 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರೀತಿಯಲ್ಲೇ ನಾನು ಕಂಬ್ಯಾಕ್ ಮಾಡಲು ಪ್ರಯತ್ನ ಪಡುತ್ತೇನೆ. ಇನ್ನುಮುಂದೆ ಇನ್ನಷ್ಟು ಕಠಿಣ ಪರಿಶ್ರಮ ಹಾಕಿ, ಇನ್ನು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಇನ್ನು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ನಾನು ನಂಬಿಕೆ ಇಡುತ್ತೇನೆ.” ಎಂದು ಹೇಳಿದ್ದಾರೆ ಮೊಹಮ್ಮದ್ ಸಿರಾಜ್. ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಭಾರತದ ತಂಡಕ್ಕೆ ಆಯ್ಕೆಯಾಗಿದ್ದಾರೆ ಸಿರಾಜ್. 2021ರಲ್ಲಿ ಆರಂಭವಾಗಿದ್ದ ಟೆಸ್ಟ್ ಕ್ರಿಕೆಟ್ ನ ಇಂಗ್ಲೆಂಡ್ ಪ್ರವಾಸ, ಕೋವಿಡ್ ಇಂದ ಅರ್ಧಕ್ಕೆ ನಿಂತಿದ್ದು, ಜುಲೈ ನಲ್ಲಿ ಅದು ಪ್ರಾರಂಭವಾಗಲಿದೆ.