ಫ್ರಿಡ್ಜ್ ಇಲ್ಲದೇ ಟೊಮೊಟೊವನ್ನು ತಿಂಗಳು ಗಟ್ಟಲೆ ಮನೆಯಲ್ಲಿ ಸ್ಟೋರ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಟೊಮೊಟೊವನ್ನು ತಿಂಗಳು ಗಟ್ಟಲೆ ಫ್ರಿಡ್ಜ್ ನಲ್ಲಿ ಅಥವಾ ಫ್ರಿಡ್ಜ್ ಇಲ್ಲದ ಹಾಗೆ ಸ್ಟೋರ್ ಮಾಡುವ ವಿಧಾನವನ್ನು ಇಂದು ನಿಮಗೆ ತಿಳಿಸಲಾಗಿದೆ. ಟೊಮ್ಯಾಟೊವನ್ನು ಫ್ರಿಡ್ಜ್ ನಲ್ಲಿ ಅಥವಾ ಫ್ರಿಡ್ಜ್ ಇಲ್ಲದ ಹಾಗೆ ಸ್ಟೋರ್ ಮಾಡುವ ವಿಧಾನ:
ಟೊಮ್ಯಾಟೊವನ್ನು ಸ್ಟೋರ್ ಮಾಡುವ ಮೊದಲು ಅವುಗಳನ್ನು ಕ್ಲೀನ್ ಮಾಡಿಕೊಳ್ಳಬೇಕು. ಏಕೆಂದರೆ ಟೊಮೇಟೊಗಳನ್ನು ಬೆಳೆಸುವಾಗ ಹಲವಾರು ರೀತಿಯ ಕ್ರಿಮಿನಾಶಕಗಳು ಹೊಡೆದಿರುತ್ತಾರೆ.

ಮೊದಲಿಗೆ ಒಂದು ಪಾತ್ರೆಗೆ ಟೊಮೇಟೊ ತೊಳೆಯುವಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ ಪುಡಿ ಹಾಗೂ ಒಂದು ಚಮಚದಷ್ಟು ಉಪ್ಪನ್ನು ಹಾಕಿ ಉಪ್ಪು ಕರಗುವವರೆಗೂ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಟೊಮ್ಯಾಟೋಗಳನ್ನು ಹಾಕಿ ಕೈಯಿಂದ ಒಂದು ಬಾರಿ ಟೊಮೊಟೊವನ್ನ ಉಜ್ಜಿಕೊಂಡು 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಟೊಮೆಟೊವನ್ನು ಕೈಯಿಂದ ಉಜ್ಜಿ ಅದೇ ನೀರಿನಲ್ಲಿ ತೊಳೆದುಕೊಳ್ಳಿ. ನಂತರ ಸಾಮಾನ್ಯ ನೀರಿನಿಂದ ಟೊಮೊಟೊವನ್ನು ಒಂದು ಬಾರಿ ತೊಳೆದುಕೊಳ್ಳಿ. ನಂತರ ಒಂದು ಕಾಟನ್ ಬಟ್ಟೆಯಿಂದ ಸ್ವಲ್ಪವೂ ನೀರು ಇಲ್ಲದ ಹಾಗೆ ಟಮೋಟೊ ಒರೆಸಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ಬಿಡಿ.

ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡುವ ವಿಧಾನ: ಮೊದಲಿಗೆ ಒಂದು ಡಬ್ಬವನ್ನು ತೆಗೆದುಕೊಂಡು ನೀರಿನ ಅಂಶ ಇಲ್ಲದಿರುವ ರೀತಿಯಲ್ಲಿ ಒರೆಸಿಕೊಳ್ಳಿ. ನಂತರ ಅದರ ತಳಕ್ಕೆ ಟಿಶ್ಯೂ ಪೇಪರ್ ಅನ್ನು ಹಾಕಿಕೊಳ್ಳಿ.ನಂತರ ಟೊಮೆಟೊವನ್ನು ಒಂದು ಲೇಯರ್ ಆಗಿ ಜೋಡಿಸಿಕೊಳ್ಳಿ. ನಂತರ ಅದರ ಮೇಲೆ ಮತ್ತೆ ಟಿಶ್ಯು ಪೇಪರ್ ನನ್ನು ಹಾಕಿ. ಮತ್ತೆ ಅದರ ಮೇಲೆ ಒಂದು ಲೇಯರ್ ಟೊಮೇಟೊಗಳನ್ನು ಜೋಡಿಸಿಕೊಳ್ಳಿ. ನಂತರ ಮತ್ತೆ ಟಿಶ್ಯು ಪೇಪರ್ ನನ್ನು ಇಟ್ಟು ಮುಚ್ಚಳವನ್ನು ಮುಚ್ಚಿ ಫ್ರಿಡ್ಜ್ ನಲ್ಲಿ ಇಟ್ಟರೆ ಒಂದುವರೆ ತಿಂಗಳುಗಳ ಕಾಲ ಟೊಮೋಟೊ ಫ್ರೆಶ್ ಆಗಿರುತ್ತದೆ.

ಫ್ರಿಡ್ಜ್ ಇಲ್ಲದೆ ಸ್ಟೋರ್ ಮಾಡುವ ವಿಧಾನ: ಮೊದಲಿಗೆ ಒಂದು ಡಬ್ಬವನ್ನು ತೆಗೆದುಕೊಂಡು ನೀರಿನ ಅಂಶ ಇಲ್ಲದಿರುವ ರೀತಿಯಲ್ಲಿ ಒರೆಸಿಕೊಳ್ಳಿ. ನಂತರ ಅದರ ತಳಕ್ಕೆ ಟಿಶ್ಯೂ ಪೇಪರ್ ಅನ್ನು ಹಾಕಿಕೊಳ್ಳಿ. ನಂತರ ಪ್ರತಿಯೊಂದು ಟೊಮೇಟೊವನ್ನು ಒಂದು ಪೇಪರ್ ನಲ್ಲಿ ಮುಚ್ಚಿ ಡಬ್ಬದ ಒಳಗೆ ಜೋಡಿಸಿಕೊಳ್ಳಿ. ಕೊನೆಯದಾಗಿ ಟಿಶ್ಯೂ ಪೇಪರ್ ನನ್ನು ಇಟ್ಟು ಮುಚ್ಚಳವನ್ನು ಮುಚ್ಚಿ ಇಟ್ಟರೆ 3 – 4 ವಾರದವರೆಗೆ ಟಮೋಟೋ ಫ್ರೆಶ್ ಆಗಿರುತ್ತದೆ.