ಈ ಫೇಮಸ್ ನಟ ನಟಿಯರ ಅಂಗವೈಕಲ್ಯ ಬಗ್ಗೆ ಕೇಳಿದರೆ ನಿಜಕ್ಕೂ ಬೇಜಾರ್ ಆಗುತ್ತದೆ, ರಾಣಾ ಗೆ ಏನು ತೊಂದರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ದೇಹದಲ್ಲಿ ಯಾವುದಾದರೂ ಭಾಗ ಊನವಾಗಿದ್ದರೆ, ಅಂಗ ವೈಕಲ್ಯತೆ ಇದ್ದರೆ ಅದು ಕೆಲವರ ಸಾಧನೆಗೆ ಎಂದೂ ಅಡ್ಡಿಯಾಗಿಲ್ಲ. ದೇಹದ ನ್ಯೂನ್ಯತೆ ಮನಸ್ಸಿನ ನ್ಯೂನ್ಯತೆಗೆ ಕಾರಣವಾಗಬೇಕಿಲ್ಲ. ಈ ಮಾತನ್ನು ಸಾಬೀತು ಮಾಡಿದ್ದಾರೆ ಹಲವಾರು ನಟರು. ಸವಾಲನ್ನು ಸ್ವೀಕರಿಸಿ ಜೀವನದಲ್ಲಿ ಮೇಲೆ ಬಂದ ಅಂಥ ನಟ ನಟಿಯರು ಯಾರು ಬನ್ನಿ ನೋಡೋಣ..

ಬೇರೆ ಬೇರೆ ಭಾಷೆಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರದಲ್ಲಿ ಬಲ್ಲಾಳನಾಗಿ ಕಾಣಿಸಿಕೊಂಡ ನಟ ರಾಣಾ ದಗ್ಗುಬಾಟಿ‌. ಈ ನಟ ಇದೀಗ ನ್ಯಾಷನಲ್ ಸ್ಟಾರ್. ಆದರೆ ಇವರಲ್ಲಿ ಅಂಗವೈಕಲ್ಯತೆ ಇದೆ ಎಂದರೆ ನಂಬಲು ಸಾಧ್ಯವೇ ಇಲ್ಲ. ಆದರೆ ಇದು ಸತ್ಯ. ಅವರಿಗೆ ಬಲಭಾಗದ ಕಣ್ಣು ಸಂಪೂರ್ಣವಾಗಿ ಕಾಣಿಸುವುದಿಲ್ಲ. ಇದನ್ನು ಸಂದರ್ಶನವೊಂದರಲ್ಲಿ ರಿವಿಲ್ ಮಾಡಿದ್ದಾರೆ ರಾಣಾ ದುಗ್ಗು ಬಾಟಿ.

ನಟ ಧುವ ಶರ್ಮಾ ಕಿವಿ ಕೇಳದ ಮಾತೂ ಬಾರದ ನಟ. ಆದರೆ ಇದು ಸಾಕಷ್ಟು ಮಂದಿಗೆ ಗೊತ್ತೇ ಇರಲಿಲ್ಲ. ಅವರ ನಟನೆಯೇ ಹಾಗಿತ್ತು. ಈ ನಟ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರು ಅಂಗ ವೈಕಲ್ಯತೆ ಇದ್ದರೂ ಮಾಡಿದ ಸಾಧನೆ ಮರೆಯುವಂತಿಲ್ಲ. ತೆಲಗು ನಟ ನಿತಿನ್, ‘ಜಯಂ’ ಖ್ಯಾತಿಯ ಹೀರೊ ಇವರಿಗೆ ಮಾತು ತೊದಲುವ ಸಮಸ್ಯೆ ಇದ್ದು, ಬೇರೆಯವರು ಡಬ್ ಮಾಡುತ್ತಿದ್ದರು. ಆದರೆ ಇದು ಅವರ ನಟನೆಗೆ ಅಡ್ಡವಾಗಿಲ್ಲ ಎಂಬುದೇ ಖುಷಿಯ ವಿಚಾರ.

ಕನ್ನಡ ಕಿರುತೆರೆಯ ನಟಿ ರಶ್ಮಿ ಪ್ರಭಾಕರ್. ಲಕ್ಷ್ಮಿ ಬಾರಮ್ಮಾದ ಚಿನ್ನುವಾಗಿ ಅಭಿನಯಿಸಿದ ರಶ್ಮಿ ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಎಡಭಾಗದ ಕಣ್ಣಿಗೆ ಸುಣ್ಣ ಬಿದ್ದು ಶೇ 70 ರಷ್ಟು ಈ ಕಣ್ಣು ಕಾಣುವುದಿಲ್ಲವಂತೆ. ಆದರೆ ಅವರ ನಟನೆಯಲ್ಲಿ ಯಾವತ್ತೂ ಇದೊಂದು ಕೊರತೆಯಾಗಿ ಕಾಣಲೇ ಇಲ್ಲ. ಹೀಗೆ ಹಲವು ನಟ ನಟಿಯರು ತಮ್ಮಲ್ಲಿರುವ ನ್ಯೂನ್ಯತೆಯನ್ನು ನೆನೆದು ಸುಮ್ಮನೆ ಕೂರದೆ ಅದನ್ನೇ ಸವಾಲಾಗಿ ಸ್ವೀಕರಿಸಿ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Comments are closed.