ಪ್ರೀತಿಸಿದ ಹುಡುಗನ ಜೊತೆ ದಾಂಪಾಂತ್ಯ ಜೀವನಕ್ಕೆ ಸದ್ದಿಲ್ಲದೇ ಕಾಲಿಟ್ಟ ಟಾಪ್ ನಟನ ಮಗಳು, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ನ ಎವರ್ ಗ್ರೀನ್ ಸ್ಟಾರ್, ನಟ ಅನಿಲ್ ಕಪೂರ್. ಇವರನ್ನು ನೋಡಿದರೆ ವಯಸ್ಸಾದಂತೆಯೇ ಕಾಣುವುದಿಲ್ಲ. ವರ್ಷ ನಲವತ್ತು ದಾಟಿದರೂ ಅಷ್ಟು ಸ್ಮಾರ್ಟ್ಆಗಿರುವ ಅನಿಲ್ ಕಪೂರ್ ಅವರ ಬ್ಯುಟಿ ಸೀಕ್ರೆಟ್ ಬಗ್ಗೆ ಜನ ಕೇಳುತ್ತಲೇ ಇರುತ್ತಾರೆ. ಅನಿಲ್ ಕಪೂರ್ ಇಂದಿಗೂ ಕೂಡ ಬಹು ಬೇಡಿಕೆಯ ನಟ. ಕನ್ನಡದಲ್ಲಿ ಪಲ್ಲವಿ ಅನುಪಲ್ಲವಿ ಎಂಬ ಒಂದು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು ಅನಿಲ್ ಕಪೂರ್.

ಅನಿಲ್ ಕಪೂರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಅದರಲ್ಲಿ ಒಬ್ಬಳು ಬಾಲಿವುಡ್ ನ ಬೆಡಗಿ ಸೋನಂ ಕಪೂರ್. ಇವರು ಕೂಡ ಅಪ್ಪನಂತೆ ಬಾಲಿವುಡ್ ನಲ್ಲಿ ಫೇಮಸ್ ನಟಿ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಸೋನಂ ಕೂಡ ಬಾಲಿವುಡ್ ನ ಬೇಡಿಕೆಯ ನಟಿ. ಇನ್ನು ಅನಿಲ್ ಕಪೂರ್ ಅವರ ಇನ್ನೊಬ್ಬ ಮಗಳು ರಿಯಾ ಕಪೂರ್. ಇವರು ತೆರೆಯ ಹಿಂದೆ ಕೆಲಸ ಮಾಡುವವರು. ಹೌದು ಸ್ನೇಹಿತರೆ ರಿಯಾ ಕಪೂರ್ ಅಕ್ಕ ಸೋನಂ ಕಪೂರ್ ಅವರು ನಾಯಕಿಯಾಗಿ ಒಳಗೊಂಡ ಕೆಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ತಮ್ಮ ಚಿತ್ರ ನಿರ್ಮಾಣದಲ್ಲಿ ಗುರುತಿಸಿಕೊಂಡಿರುವ ರಿಯಾ ಕೆಲವು ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಐಶಾ, ಖುಬ್ ಸೂರತ್, ವಿರೆದಿ ವೆಡ್ಡಿಂಗ್ ಮೊದಲಾದವು ರಿಯಾ ಅವರ ನಿರ್ಮಾಣದ ಚಿತ್ರಗಳು.

ರಿಯಾ ಕಪೂರ್ ಇದೀಗ ತಮ್ಮ ಮದುವೆಯ ಮೂಲಕ ಸುದ್ದಿಯಲ್ಲಿದ್ದಾರೆ. ತಮ್ಮ ಬಹುವರ್ಷದ ಸ್ನೇಹಿತ ಕರಣ್ ಅವರನ್ನು ಮದುವೆಯಾಗಲಿದ್ದಾರೆ ರಿಯಾ. ಕರಣ್ ಅವರು ಜಾಹೀರಾತು ನಿರ್ದೇಶಕ. ಅನಿಲ್ ಕಪೂರ್ ಅಭಿನಯದ 24 ಎಂಬ ಟಿವಿ ಸಿರೀಸ್ ನ್ನು ನಿರ್ದೇಶನ ಮಾಡಿದ್ದು ಕರಣ್. ರಿಯಾ ಹಾಗೂ ಕರಣ್ ಸಿನಿಮಾ ಚಿತ್ರೀಕರಣದ ವೇಳೆ ಭೇಟಿಯಾಗಿ ಬಹು ವರ್ಷಗಳ ಕಾಲ ಸ್ನೇಹಿತರಾಗಿ, ಪ್ರೇಮಿಗಳಾಗಿ ಇದೀಗ ದಂಪತಿಗಳಾಗಲಿದ್ದಾರೆ. ಅನಿಲ್ ಕಪೂರ್ ಅವರ ಜುಹು ಬಂಗಲೆಯಲ್ಲಿ ನಡೆಯಲಿರುವ ರಿಯಾ ಅವರ ಮದುವೆ ಮೂರು ದಿನಗಳ ಕಾಲ ನಡೆಯಲಿದ್ದು ಕೇವಲ ಆಪ್ತರು, ಹತ್ತಿರದ ಸ್ನೇಹಿತರನ್ನು ಮಾತ್ರ ಒಳಗೊಂಡ ಸರಳ ವಿವಾಹವಂತೆ. ರಿಯಾ ಕಪೂರ್ ಹಾಗೂ ಕರಣ್ ಅವರ ದಾಂಪತ್ಯಕ್ಕೆ ಸಿನಿರಂಗ ಶುಭ ಕೋರಿದೆ.

Comments are closed.