ನಟ ಸಾರ್ವಭೌಮ ಚಿತ್ರದ ನಟಿ ಅನು ರವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು ಕೋಠಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ಮೊದಲ ಚಿತ್ರದಲ್ಲಿ ಯಶಸ್ಸುಗಳಿಸಿದ ಅನುಪಮ ಪರಮೇಶ್ವರ್ ರವರು ಬಹುಶಹ ನಿಮಗೆಲ್ಲರಿಗೂ ತಿಳಿದೇ ಇರುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ಬಾರಿ ಯಶಸ್ಸುಗಳಿಸಿದ ಪ್ರೇಮಂ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಭಾರಿ ಸದ್ದು ಮಾಡಿದ ನಂತರ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗಗಳಲ್ಲಿ ಯಶಸ್ಸು ಗಳಿಸುತ್ತಿರುವ ಅನು ರವರು ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದಾರೆ

ಕನ್ನಡ ಚಿತ್ರದಲ್ಲಿಯೂ ನಟನೆ ಮಾಡುವ ಮೂಲಕ ಇದೀಗ ದಕ್ಷಿಣ ಭಾರತದಲ್ಲಿ ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಅನುಪಮಾ ಪರಮೇಶ್ವರ್ ರವರು ಮೊದಲ ಚಿತ್ರದಲ್ಲಿಯೇ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. 2015 ರಲ್ಲಿ ತನ್ನ ಸಿನಿ ಜರ್ನಿ ಯನ್ನು ಆರಂಭಿಸಿದ ಅನುಪಮ ಪರಮೇಶ್ವರ್ ರವರು ಇಲ್ಲಿಯವರೆಗೂ 16 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

ಈಗಾಗಲೇ 14 ಸಿನಿಮಾಗಳು ಬಿಡುಗಡೆ ಯಾಗಿದ್ದು ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಾಗೂ ಚಿತ್ರೀಕರಣದಲ್ಲಿ ನಿರತವಾಗಿವೆ. ಹೀಗೆ ಕೇವಲ 14 ಸಿನಿಮಾಗಳಿಂದ ಹಾಗೂ ವಿವಿಧ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಹಾಗೂ ತಮ್ಮದೇ ಆದ ಫ್ಯಾಶನ್ ಬ್ರಾಂಡ್ ಗಳಿಂದ ಅನುಪಮಾ ಪರಮೇಶ್ವರ್ ರವರು ಇಲ್ಲಿಯವರೆಗೂ 25 ಕೋಟಿಗೂ ಹೆಚ್ಚು ಹಣ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ, ಒಟ್ಟಿನಲ್ಲಿ ಇವರ ಒಟ್ಟು ಆಸ್ತಿ ಮೌಲ್ಯ 25 ಕೋಟಿ ದಾಟಿದೆ ಎಂಬುದು ತಿಳಿದು ಬಂದಿದೆ.

Comments are closed.