News from ಕನ್ನಡಿಗರು

ಕನ್ನಡದ ಖ್ಯಾತ ನಟಿ ಅನು ಪ್ರಭಾಕರ್ ರವರ ಹುಟ್ಟುಹಬ್ಬದ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ?? ನಮ್ಮೆಲ್ಲಿ ಮಾತ್ರ.

136

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ 2000 ಇಸವಿ ಆಸುಪಾಸಿನಲ್ಲಿ ಹಲವಾರು ನಾಯಕನಟಿಯರು ಬಂದು ಮಿಂಚಿ ಹೋಗಿದ್ದಾರೆ. ಅಂಥವರಲ್ಲಿ ನಟಿ ಅನುಪ್ರಭಾಕರ್ ಕೂಡ ಒಬ್ಬರು. ನಟಿ ಅನು ಪ್ರಭಾಕರ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಂಸ್ಕೃತಿಕ ಹಾಗೂ ಗ್ಲಾಮರಸ್ 2 ಪಾತ್ರಗಳನ್ನು ನಿರ್ವಹಿಸಬಲ್ಲಂತಹ ಕೆಲವೇ ಕೆಲವು ನಟಿಯರಲ್ಲಿ ಅಗ್ರಗಣ್ಯ ರಾಗಿ ಕಾಣಿಸಿಕೊಳ್ಳುತ್ತಾರೆ.

ಒಂದು ಕಾಲದಲ್ಲಿ ಅನು ಪ್ರಭಾಕರ್ ರವರ ಡೇಟ್ಸ್ ಗಾಗಿ ನಿರ್ಮಾಪಕರು ಸಾಲಿನಲ್ಲಿ ನಿಲ್ಲುತ್ತಿದ್ದರು. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕ ನಟಿಯಾಗಿ ಈಗಾಗಲೆ ಅವರು ಕಾಣಿಸಿಕೊಂಡಿದ್ದಾರೆ. ಇನ್ನು ಅನುಪ್ರಭಾಕರ್ ರವರು ಮೊದಲು ಖ್ಯಾತ ನಟಿ ಜಯಂತಿ ಅವರ ಮಗ ಕೃಷ್ಣಕುಮಾರ್ ಅವರನ್ನು ವಿವಾಹವಾಗಿದ್ದರು. ನಂತರ ಅವರಿಂದ ದೂರವಾಗಿ ನಟ ಹಾಗೂ ಮಾಡೆಲ್ ರಘು ಮುಖರ್ಜಿ ಅವರನ್ನು ಮದುವೆಯಾಗುತ್ತಾರೆ.

ಇನ್ನು ಇವರಿಬ್ಬರಿಗೆ ಒಬ್ಬ ಹೆಣ್ಣುಮಗಳು ಕೂಡ ಇದ್ದಾರೆ. ಇನ್ನು ಇತ್ತೀಚಿಗಷ್ಟೇ ನಟಿ ಅನು ಪ್ರಭಾಕರ್ ಅವರು ತಮ್ಮ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಹೌದು ಗೆಳೆಯರೇ ನಟಿ ಅನು ಪ್ರಭಾಕರ್ ಅವರು ತಮ್ಮ ಜನ್ಮದಿನಾಚರಣೆಯನ್ನು ತಮ್ಮ ಪತಿ ಆಗಿರುವ ನಟ ರಘು ಮುಖರ್ಜಿ ಹಾಗೂ ಮಗಳು ಮತ್ತು ತಾಯಿಯೊಂದಿಗೆ ಆಚರಿಸಿಕೊಂಡಿದ್ದಾರೆ. ಇನ್ನು ಇವರ ಜನ್ಮ ದಿನಾಚರಣೆಯ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದು ಎಲ್ಲರೂ ಇಷ್ಟಪಟ್ಟು ಜನ್ಮದಿನದ ಶುಭಾಶಯಗಳನ್ನು ಕೂಡ ತಿಳಿಸಿದ್ದಾರೆ. ನೀವು ಕೂಡ ಈ ಸಂಭ್ರಮದ ವಿಡಿಯೋ ಹಾಗೂ ಫೋಟೋಗಳನ್ನು ಈ ಕೆಳಗಡೆ ನೋಡಬಹುದಾಗಿದೆ. ವಿಡಿಯೋ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ

Leave A Reply

Your email address will not be published.