ಹತ್ತಾರು ವರ್ಷಗಳಿಂದ ಥೇಟ್ ಇಪ್ಪತ್ತರ ವಯಸ್ಸಿನ ಹುಡುಗಿಯಂತೆ ಕಾಣುತ್ತಿರುವ ಅನುಶ್ರೀ ರವರ ಒಂದು ದಿನದ ಸಂಪಾದನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆಗೆ ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಬಾಳು ಸೂಕ್ತವಾಗಿದೆ. ಹೌದು ಸ್ನೇಹಿತರ ಅವರು ಮಂಗಳೂರು ಮೂಲದವರು. ಚಿಕ್ಕಂದಿನಿಂದಲೇ ಕಷ್ಟದ ಜೀವನವನ್ನು ನೋಡಿಕೊಂಡು ಬಂದವರು. ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಅನುಶ್ರೀ ಅವರು ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸದ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ಮನೆಯವರಿಗೆ ತನ್ನ ಖರ್ಚಿನ ತಲೆಬಿಸಿ ಅನ್ನು ನೀಡಬಾರದೆಂಬ ಯೋಚನೆ ಅವರದಾಗಿತ್ತು. ಹೀಗಾಗಿ ತಮ್ಮ ಖರ್ಚುಗಳನ್ನು ಯಾರ ಮೇಲೂ ಕೂಡ ಅವಲಂಬಿತರಾಗದೆ ಸ್ವಾವಲಂಬಿಯಾಗಿ ದುಡಿದು ಬೆಳೆದು ಬಂದಿದ್ದರು.

ಇನ್ನು ಹೀಗೆ ಅನುಶ್ರೀ ಅವರ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಬೆಂಗಳೂರಿಗೆ ಬಂದು ತನ್ನ ಪಾಲಿಗೆ ಬಂದಂತಹ ಚಿಕ್ಕಪುಟ್ಟ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರು. ನಂತರ ಹೀಗೆ ಮೊದಲು ಚಿಕ್ಕ ವಾಹಿನಿಯ ನಿರೂಪಕಿಯಾಗಿ ಕಾಣಿಸಿಕೊಂಡರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಬಂದಂತಹ ಅವಕಾಶವನ್ನು ಒಪ್ಪಿಕೊಂಡ ಮೇಲೆ ಅನುಶ್ರೀ ಅವರ ಜೀವನವೇ ಬದಲಾಯಿತು. ಒಳ್ಳೆಯ ಸಂಭಾವನೆಯ ಕೆಲಸ ಹಾಗೂ ರಾಜ್ಯದ್ಯಂತ ಜನಪ್ರಿಯತೆಯನ್ನು ಅನುಶ್ರೀ ಅವರು ಪಡೆದುಕೊಂಡರು. ಈಗ ಕನ್ನಡದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಅಥವಾ ಚಿತ್ರಗಳ ಕುರಿತಂತೆ ಯಾವುದೇ ಕಾರ್ಯಕ್ರಮ ನಡೆಯಲಿ ಅನುಶ್ರೀ ಅವರು ಮುಖ್ಯ ನಿರೂಪಕಿಯಾಗಿ ಕಾಣಿಸಿಕೊಂಡು ಕಾರ್ಯಕ್ರಮ ನಡೆಸಿಕೊಳ್ಳುವುದು ವಾಡಿಕೆಯಾಗಿ ಹೋಗಿದೆ.

ಇಷ್ಟೆಲ್ಲ ಕಷ್ಟ ಪಟ್ಟಿರುವ ಮತ್ತೆ ಈಗ ಜೀವನದಲ್ಲಿ ನಟಿ ಹಾಗೂ ನಿರೂಪಕಿಯಾಗಿ ಸಾಧಿಸಿರುವ ಅವರ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ದಿನಕ್ಕೆ ಇನ್ನೂರು ರೂಪಾಯಿಗಳನ್ನು ತನ್ನ ಕೆಲಸವನ್ನು ಪ್ರಾರಂಭಿಸಿದ್ದ ಅನುಶ್ರೀ ಅವರು ಇಂದು 1 ಎಪಿಸೋಡ್ಗೆ 1 ಲಕ್ಷದ 20 ಸಾವಿರ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರೆ. ಇನ್ನು ಅನುಶ್ರೀ ಅವರು ಬಿಗ್ ಬಾಸ್ ಗೆ ಕೂಡ ಹೋಗಿ ಜನರ ಮನೆ ಗೆದ್ದುಬಂದಿದ್ದರು. ಇಂದಿಗೂ ಕೂಡ ತನ್ನ ಹಸನ್ಮುಖ ಮುಖದಿಂದ ಎಲ್ಲರ ಮನಸ್ಸನ್ನು ತನ್ನ ಲವಲವಿಕೆಯ ಮಾತುಗಳಿಂದ ಗೆಲ್ಲುತ್ತಿದ್ದಾರೆ ನಮ್ಮ ಅಚ್ಚುಮೆಚ್ಚಿನ ನಿರೂಪಕಿ ಅನುಶ್ರೀ ಅವರು.

Comments are closed.