ನಟಿ ಅನುಷ್ಕಾ ಶರ್ಮಾ ತಮ್ಮ ಆ ಬಟ್ಟೆಗಳನ್ನು ಹರಾಜಿಗಿಟ್ಟಿದ್ದು ಏಕೆ ಗೊತ್ತಾ??? ವಿರಾಟ್ ಮಡದಿ ಮಾಡಿದ್ದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಟಿ ಅನುಷ್ಕಾ ಶರ್ಮಾ ಬಾಲಿವುಡ್ ನ ಸ್ದಿಗ್ದ ಸುಂದರಿ. ಬ್ಯಾಂಡ್ ಬಾಜಾ ಭಾರತ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅನುಷ್ಕಾ ಶರ್ಮಾ ನಂತರ ಅನುಷ್ಕಾ ಶರ್ಮಾ ಕೊಹ್ಲಿಯಾಗಿರುವುದು ನಿಮಗೆ ತಿಳಿದಿರುವ ಸಂಗತಿಯಾಗಿದೆ. ಪಿಕೆ ಹಾಗೂ ಸುಲ್ತಾನ್ ಸಿನಿಮಾಗಳ ಬಳಿಕ ಅನುಷ್ಕಾ ತಾನು ಸಹ ಉತ್ತಮ ನಟಿ ಎಂದು ಸಾಬೀತುಪಡಿಸಿದರು. 2015 ರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರನ್ನ ಮದುವೆಯಾಗಿದ್ದರು.

ಈ ವರ್ಷದ ಆರಂಭದಲ್ಲಿ ಮಗಳು ವಮಿಕಾಗೆ ಜನ್ಮ ನೀಡಿರುವ ಅನುಷ್ಕಾ ಈಗಷ್ಟೇ ಬಾಣಂತನ ಮುಗಿಸಿ ತಮ್ಮ ತಾಯ್ತನದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸದ್ಯ ಅನುಷ್ಕಾ ಶರ್ಮಾ ತಾವು ಗರ್ಭಿಣಿಯಾಗಿದ್ದಾಗ ಧರಿಸಿದ್ದ ಬಟ್ಟೆಗಳನ್ನು ಹರಾಜಿಗಿಟ್ಟಿದ್ದಾರೆ. ಆ ಬಟ್ಟೆಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣದ ಮೂಲಕ ಜಲಸಂರಕ್ಷಣೆಗೆ ವಿನಿಯೋಗಿಸುವುದಾಗಿ ತಿಳಿಸಿದ್ದಾರೆ. ಪ್ರತಿ ದಿನ ಒಬ್ಬ ಮನುಷ್ಯ ತಾನು ಬಳಸುವ ನೀರಿನಲ್ಲಿ ಒಂದು ಚೆಂಬು ತೆಗೆದಿಡುತ್ತಾ ಬಂದರೂ , ವರ್ಷವೊಂದಕ್ಕೆ ಕಡಿಮೆ ಎಂದರೂ ಒಂದು ಗ್ಯಾಲನ್ ನೀರು ಉಳಿಸಬಹುದು. ಹೀಗೆ ಪ್ರತಿಯೊಬ್ಬರು ಮಾಡುವುದರಿಂದ ನೀರಿನ ಅಭಾವವನ್ನ ತಡೆಗಟ್ಟಬಹುದು ಎಂದು ತಿಳಿಸಿದರು.

ಈ ಮಧ್ಯೆ ಮಗಳು ವಮಿಕಾ ಫೋಟೋವನ್ನ ನಾವು ಯಾವುದೇ ಕಾರಣಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ಪ್ರಕಟಿಸುವುದಿಲ್ಲ ಎಂದು ಕೊಹ್ಲಿ ದಂಪತಿ ತಿಳಿಸಿದ್ದಾರೆ. ಆಕೆಗೆ ಸಾಮಾಜಿಕ ಜಾಲತಾಣ ಅಂದರೇ ಏನು ಎಂಬ ಅರಿವು ಗೊತ್ತಾಗಬೇಕು, ನಂತರವೇ ಆಕೆಯ ಮುಖವನ್ನ ಜಗತ್ತಿಗೆ ನಾವು ತೋರಿಸುತ್ತೆವೆ ಎಂದು ತಿಳಿಸಿದರು. ಅಲ್ಲಿಗೆ ಸದ್ಯಕ್ಕಂತು ವಮಿಕಾ ಮುಖ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಲಭ್ಯವಿಲ್ಲ. ಅನುಷ್ಕಾ ಶರ್ಮಾರವರ ಈ ನಡೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.