ನೀವು ನೋಡಿರದ ಅನ್ವಿತಾ ಸಾಗರ್ ರವರ ಚಿಕ್ಕ ವಯಸ್ಸಿನ ಫೋಟೋಗಳು ! ಇಲ್ಲಿವೆ ಕ್ಯೂಟ್ ಫೋಟೋಗಳು.

ನಮಸ್ಕಾರ ಸ್ನೇಹಿತರೇ ಗಟ್ಟಿಮೇಳ ಧಾರವಾಹಿ ಎಂದ ತಕ್ಷಣ ಬಹುತೇಕರು ಧಾರವಾಹಿ ನನಗೆ ಇಷ್ಟ ಎಂಬ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನೀವು ನೋಡಿರಬಹುದು. ಯಾಕೆಂದರೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಗಟ್ಟಿಮೇಳ ಧಾರವಾಹಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಹೀಗೆ ಇಷ್ಟೆಲ್ಲಾ ಜನಪ್ರಿಯತೆ ಕಂಡು ಕೊಳ್ಳಲು ಗಟ್ಟಿಮೇಳ ಧಾರವಾಹಿಗೆ ತನ್ನದೇ ಆದ ಕಾರಣಗಳಿವೆ.

ಆದರೆ ಎಲ್ಲಾ ಕಾರಣಗಳ ನಡುವೆ ಹಲವಾರು ಜನ ನಾವು ಕೇವಲ ನಾಯಕ ನಟ ವೇದಾಂತ್ ರವರ ಸಹೋದರಿಯಾಗಿ ನಟಿಸಿರುವ ಆದ್ಯ ಪಾತ್ರದಾರಿ ಅನ್ವಿತಾ ಸಾಗರ್ ಅವರ ನಟನೆ ನೋಡಲು ಧಾರವಾಹಿ ನೋಡುತ್ತೇವೆ ಎಂಬ ಕಾರಣಗಳು ಕೂಡ ಕೇಳಿ ಬರುತ್ತವೆ. ತಮಗೆ ನೀಡಿರುವ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಅದ್ಭುತವಾದ ಎಕ್ಸ್ಪ್ರೆಶನ್ ಗಳ ಮೂಲಕ ಎಲ್ಲರ ಮನ ಗೆದ್ದಿರುವ ಅನ್ವಿತಾ ಸಾಗರ್ ಅವರು ಕಿರುತೆರೆಯಲ್ಲಿ ಇದೀಗ ಚಿರಪರಿಚಿತ ನಟಿ.

ಗಟ್ಟಿಮೇಳ ಧಾರವಾಹಿಯ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ, ಮೂಲತಹ ತುಳುನಾಡಿನ ಸಿನಿಮಾ ರಂಗದ ಮೂಲಕ ಗುರುತಿಸಿಕೊಂಡಿದ್ದ ಅನ್ವಿತಾ ಸಾಗರ್ ರವರು ಗಟ್ಟಿಮೇಳ ಧಾರವಾಹಿಯ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ. ಇವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಆಗಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇನ್ನು ಇವರ ಚಿಕ್ಕ ವಯಸ್ಸಿನ ಕೆಲವೊಂದು ಎಕ್ಸ್ಕ್ಲೂಸಿವ್ ಫೋಟೋಗಳನ್ನು ಕೆಳಗಡೆ ಹಾಕಲಾಗಿದ್ದು ಒಮ್ಮೆ ನೋಡಿ ಹಾಗೂ ಇವರ ನಟನೆಯ ಕುರಿತು ಹಾಗೂ ಕೆಳಗಡೆ ಇರುವ ಫೋಟೋಗಳು ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಅನ್ವಿತಾ ರವರ ಚಿಕ್ಕ ವಯಸ್ಸಿನ ಫೋಟೋ ಹಾಗೂ ಅನ್ವಿತಾ ರವರು ಚಿಕ್ಕವರಿದ್ದಾಗ ತಂದೆಯವರ ಜೊತೆ ತೆಗೆಸಿಕೊಂಡಿರುವ ಫೋಟೋ.

Comments are closed.