ಒಂದೆಲ್ಲಾ ಎರಡಲ್ಲಾ ನೂರಾರು ಲಾಭಗಳನ್ನು ಹರಿಶಿಣದಿಂದ ಹೀಗೆ ಮಾಡಿದರೇ ಪಡೆಯಬಹುದು ! ಹೇಗೆ ಬಳಸಬೇಕು ಗೊತ್ತೇ??

ಅರಶಿಣ, ಕಾಡು ಅರಶಿಣ, ಕಪ್ಪು ಅರಶಿಣ, ಕಸ್ತೂರಿ ಅರಶಿಣ ಎಂಬ ಅನೇಕ ಪ್ರಬೇಧಗಳಿದ್ದು, ತೋಟ, ಗದ್ದೆ, ಹೊಲಗಳಲ್ಲಿ ವಾಣಿಜ್ಯ ಬೆಳೆಯಾಗಿ ಭಾರತದಾಂತ್ಯ ಬೆಳೆಯುತ್ತಾರೆ. ಕಪ್ಪು ಅರಶಿಣ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿಗೆ ದೊರೆಯುತ್ತೆ. ಭಾರತೀಯ ಸಂಸ್ಕೃತಿ, ಹಿಂದೂ ಸಂಪ್ರದಾಯದಲ್ಲಿ ಅರಶಿಣಕ್ಕೆ ನೀಡುವ ಪ್ರಧಾನ್ಯತೆ ಬೇರೊಂದಕ್ಕಿಲ್ಲ. ಹಿಂದೂ ಧರ್ಮದಲ್ಲಿ ಯಾವುದೇ ಶುಭಕಾರ್ಯ ಪ್ರಾರಂಭಿಸಬೇಕಾದರೂ, ಅರಶಿಣ ಗಣಪತಿಯನ್ನು ಮಾಡಿ, ಅದಕ್ಕೆ ಗರಿಕೆಯನ್ನು ಅರ್ಪಿಸಿ, ಪೂಜಿಸಿ, ಪ್ರಾರಂಭಿಸುತ್ತಾರೆ.

ಶುದ್ಧಜಲದಲ್ಲಿ ಅರಶಿಣ ಕಲಸಿ ದೇವರ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತೆ. ಪೂಜಾ ದ್ರವ್ಯಗಳಲ್ಲಿ ಅರಶಿಣಕ್ಕೆ ಅಗ್ರಸ್ಥಾನ ನೀಡಲಾಗಿದ್ದು, ತುಂಬಾ ಪೂಜನೀಯ ಸ್ಥಾನ ನೀಡಲಾಗಿದೆ. ಮದುವೆಗಳಲ್ಲಿ ವಧು ವರರಿಗೆ ಅರಶಿಣ ಹಚ್ಚುವ ಶಾಸ್ತ್ರವಿಲ್ಲದೆ, ಮದುವೆ ಶಾಸ್ತ್ರ ಮುಗಿಯುವುದಿಲ್ಲ, ಮದುವೆ, ವ್ರತ, ಶುಭಕಾರ್ಯಗಳಲ್ಲಿ ಮುತ್ತೈದೆ ಸ್ತ್ರೀಯರಿಗೆ ಅರಶಿಣ ಕುಂಕುಮ, ತಾಂಬೂಲ ಕೊಟ್ಟು ಗೌರವಿಸುವುದನ್ನು ದೇಶದಾಂತ್ಯ ಕಾಣಬಹುದು. ಅಷ್ಟೇ ಅಲ್ಲದೆ ಹಿಂದೂಗಳ ಪ್ರತಿಯೊಂದು ಮನೆಯಲ್ಲೂ, ದಿನವು ಬೆಳಿಗ್ಗೆ ಮನೆಯ ಹೊಸ್ತಿಲಿಗೆ ಅರಶಿಣ ಲೇಪಿಸಿ, ಕುಂಕುಮವಿಟ್ಟು ಪೂಜಿಸುತ್ತಾರೆ. ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಅರಶಿಣಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ.

ಮಾನವರ ಪ್ರಾಣವನ್ನು ಕಾಪಾಡುವ “ವಜ್ರಾಯುಧ” ಅರಶಿಣ. ಇದರಲ್ಲಿ ಅಪಾರ ಔಷಧೀಯ ಬಂಢಾರವೇ ತುಂಬಿದೆ. ಭಾರತೀಯ ಆಯುರ್ವೇದದಲ್ಲಿ ಸುಮಾರು 3000 ವರ್ಷಗಳ ಹಿಂದಿನಿಂದಲೂ ಋಷಿಮುನಿಗಳು ಬಳಸುತ್ತಿದ್ದರು ಎಂದು ಹಳೆಯ ತಾಳೆಗರಿ ಗ್ರಂಥಗಳಲ್ಲಿ ಉಲ್ಲೇಖವಿದೆ. ಆಯುರ್ವೇದ ಅಲ್ಲದೆ ಪಾರಂಪರಿಕ ವೈದ್ಯ, ಸಿದ್ಧ, ಯುನಾನಿ ಔಷಧೀಯ ಪದ್ಧತಿಯಲ್ಲಿ ಪುರಾತನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ನಮ್ಮ ದೇಶದಲ್ಲಿ ಅರಶಿಣ ಇಲ್ಲದ, ಬಳಸದ ಗೃಹವೇ ಇಲ್ಲ ಅಂದರೆ ಅತಿಶಯವಲ್ಲ. ಚಿನ್ನಕ್ಕಾದರೂ ಬೆಲೆ ಕಟ್ಟಬಹುದು, ಆದರೆ..! ಅರಶಿಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಆರೋಗ್ಯದ ದೃಷ್ಟಿಯಲ್ಲಿ ಅರಶಿಣಕ್ಕೆ, ಚಿನ್ನಕ್ಕಿಂತ ಬೆಲೆ ಜಾಸ್ತಿ. ದೇಹದಲ್ಲಿನ ಸಣ್ಣ ಗಾಯದಿಂದ ಹಿಡಿದು ಮಹಾಮಾರಿವ್ಯಾಧಿ ಕ್ಯಾನ್ಸರ್ ನಂತಹ ಕಾಯಲೆಗೂ ರೋಗ ನಿರೋಧಕ ಔಷಧೀಯವಾಗಿ ಕೆಲಸಮಾಡುತ್ತೆ. ಅರಶಿಣ ಮಾನವರಿಗೆ ಪ್ರಕೃತಿ ನೀಡಿರುವ ಅದ್ಭುತಗಳಲ್ಲಿ ಮಹಾ ಅದ್ಭುತವಾದ ಮೂಲಿಕೆ ಸಸ್ಯ ಸಂಪತ್ತು. ದೇಹದಲ್ಲಿ ವ್ರಣ, ಗಾಯವಾಗಿ ರಕ್ತಸ್ರಾವಾಗುತ್ತಿದ್ದರೆ, ಅರಶಿಣ ಲೇಪಿಸುವುದರಿಂದ ತಕ್ಷಣ ರ’ಕ್ತಸ್ರಾವ ನಿಂತು ಗಾಯ ಶೀಘ್ರ ಗುಣವಾಗುತ್ತೆ.

ಯುವ ಪೀಳಿಗೆಯನ್ನು ಯಡಬಿಡದೆ ಕಾಡುವ ಮೊಡವೆ ಸಮಸ್ಯೆಗೆ, ಸೀಬೆ ತಾಜಾ ಎಲೆ ಹಾಗು ತಾಜಾ ಅರಶಿಣವನ್ನು ನುಣ್ಣಗೆ ಅರೆದು, ಮೊಸರಲ್ಲಿ ಕಲಸಿ ಮುಖಕ್ಕೆ ಲೇಪಿಸಿ, ಒಂದು ಗಂಟೆಯ ನಂತರ, ಕಡಲೆಹಿಟ್ಟು ಬಳಸಿ ಉಗರು ಬೆಚ್ಚಗಿನ ನೀರಿನಿಂದ ತೊಳೆಯುತ್ತಿದ್ದರೆ ಮೊಡವೆ, ಕಪ್ಪು ಮಚ್ಚೆಗಳು ನಿವಾರಣೆಯಾಗಿ, ಮುಖದ ಚರ್ಮ ಮೃದುವಾಗಿ, ಕಾಂತಿಯಿಂದ ಹೊಳೆಯುತ್ತೆ. ಒಂದು ಲೋಟ ಬಿಸಿಬಿಸಿ ಹಸುವಿನ ಹಾಲಿಗೆ, ಚಿಟಿಕೆ ಅರಶಿಣ ಹಾಕಿ ಕಲಸಿ ಕುಡಿಯುವುದರಿಂದ ಕಫ, ಉಸಿರಾಟದ ತೊಂದರೆ ನಿವಾರಣೆಯಾಗುತ್ತೆ. ಒಂದು ಲೋಟ ಬಿಸಿ ಹಾಲಿಗೆ ಚಿಟಿಕೆ ಅರಶಿಣ, ಚಿಟಿಕೆ ಕಾಳುಮೆಣಸು ಚೂರ್ಣ ಕಲಸಿ ಕುಡಿದರೆ, ಕೆಮ್ಮು, ತುಮ್ಮು, ಶೀತನೆಗಡಿ ವಾಸಿಯಾಗುತ್ತೆ.

ದಿನನಿತ್ಯದ ಆಹಾರದಲ್ಲಿ ಅರಸಿಣವನ್ನು ಹೆಚ್ಚು ಬಳಸುವುದರಿಂದ ದೇಹದಲ್ಲಿ ರಕ್ತಶುದ್ಧಿಯಾಗುತ್ತೆ. ಕುದಿಯುತ್ತಿರುವ ನೀರಿಗೆ ಅರಶಿಣ ಹಾಕಿ, ಆವಿ ಹಿಡಿಯುವುದರಿಂದ ಕೆಮ್ಮು, ದಮ್ಮು, ನೆಗಡಿ ಶೀಘ್ರ ಶಮನವಾಗುತ್ತೆ. ಅರಶಿಣ, ಉಪ್ಪು, ಸುಣ್ಣ ನೀರಿನಲ್ಲಿ ಕಲಸಿ, ಒಂದು ಹತ್ತಿ ಬಟ್ಟೆಗೆ ಲೇಪಿಸಿ, ನೋವು ಇರುವ ಕಡೆ ಕಟ್ಟು ಕಟ್ಟುವುದರಿಂದ, ನೋವು ಶೀಘ್ರ ನಿವಾರಣೆಯಾಗುತ್ತೆ.

ಅರಶಿಣ ಹಾಗು ಬೆಟ್ಟದನೆಲ್ಲಿಕಾಯಿ ಚೂರ್ಣ ನೀರಿನಲ್ಲಿ ಕಲಸಿ, ಬೆಳಿಗ್ಗೆ ಸಂಜೆ ಊಟಕ್ಕೆ 1/2 ಗಂಟೆ ಮೊದಲು ಕುಡಿಯುತ್ತಾ ಬಂದರೆ ಮಧುಮೇಹ ಶೀಘ್ರ ಹತೋಟಿಗೆ ಬರುತ್ತೆ. ಅಥವಾ ರಾತ್ರಿ ಒಂದು ಲೋಟ ನೀರಿಗೆ ಅರಶಿಣ ತುಂಡನ್ನು ಹಾಕಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಅರಶಿಣ ತುಂಡನ್ನು ತೆಗೆದು, ನೀರನ್ನು ಕುಡಿಯುವುದರಿಂದ ಹತೋಟಿಯಲ್ಲಿ ಇರುತ್ತೆ. ಅಷ್ಟೇ ಅಲ್ಲದೆ ಅಧಿಕ ಕೊಬ್ಬು ಕರಗಿಸಿ, ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತೆ. ತಾಜಾ ಅರಶಿನವನ್ನು ನುಣ್ಣಗೆ ಅರೆದು, ತಲೆ, ಹಣೆಗೆ ಲೇಪುಸುತ್ತಿದ್ದರೆ, ತಲೆನೋವು, ತಲೆಸುತ್ತು ಬೇಗನೆ ಶಮನವಾಗುತ್ತೆ.

ಕಿವಿ ಹುಣ್ಣಾಗಿ ಕಿವು, ರಕ್ತಸ್ರಾವವಾಗುತ್ತಿದ್ದರೆ, ಕೊಬ್ಬರಿ ಎಣ್ಣೆ ಉಗರು ಬೆಚ್ಚಗೆ ಮಾಡಿ, ಅರಸಿಣ, ಸ್ಪಟಿಕ ಕಲಸಿ, ಒಂದೆರಡು ಹನಿ ಹಾಕುವುದರಿಂದ ಗುಣವಾಗುತ್ತೆ. ಬೆಂಕಿ ಕೆಂಡದಮೇಲೆ ಅರಶಿಣ ಹಾಕಿ, ಬರುವ ಧೂಮವನ್ನು ಮೂಗು, ಬಾಯಲ್ಲಿ ಸ್ವಲ್ಪ ಸಮಯ ಎಳೆದುಕೊಳ್ಳುವುದರಿಂದ, ನೆಗಡಿ, ಶೀತ, ತಲೆನೋವು ಗುಣವಾಗುತ್ತೆ.ಅರಶಿಣ, ಬೆಳ್ಳುಳ್ಳಿ ಎಳ್ಳೆಣ್ಣೆಗೆ ಹಾಕಿ ಕುದಿಸಿ, ಅಂಗೈ ಅಂಗಾಲಿಗೆ ರಾತ್ರಿ ಸಮಯ ಲೇಪಿಸಿ, ಮಸಾಜ್ ಮಾಡಿ, ಮಲಗಿ, ಬೆಳಿಗ್ಗೆ ಸ್ನಾನ ಮಾಡುತ್ತಾ ಬಂದರೆ ಶೀತ ಸಮಸ್ಯೆಗಳು ದೂರವಾಗುತ್ತೆ.

ಸ್ತ್ರೀಯರು ತಾಜಾ ಅರಶಿಣವನ್ನು ಗಂಧ ತೇಯ್ದು , 2 ಚಮಚದಷ್ಟು ಸೇವಿಸುತ್ತಿದ್ದರೆ ಋತಸ್ರಾವ ಹಾಗು ಗರ್ಭಾಶಯ ಸಮಸ್ಯೆಗಳು ನಿವಾರಣೆಯಾಗುತ್ತೆ.ಅರಶಿಣವನ್ನು ಗಂಧ ತೇಯ್ದು, ಮಜ್ಜಿಗೆಯಲ್ಲಿ ಕಲಸಿ ಕುಡಿಯುವುದರಿಂದ ಕೀಲುನೋವು, ವಾತನೊವು, ಚರ್ಮವ್ಯಾಧಿಗಳು, ಅತಿಸಾರ ಬೇಧಿ ಶಮನವಾಗುತ್ತೆ. ಅರಶಿಣ, ಕಾಳುಮೆಣಸು, ಸೈoಧವ ಲವಣ, ಕಿತ್ತಳೆಹಣ್ಣಿನ ರಸದಲ್ಲಿ ಸೇವಿಸುವುದರಿಂದ ಅತಿ ನಿದ್ರೆ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ಶುಭ್ರವಾದ ಹತ್ತಿ ಬಟ್ಟೆಯನ್ನು, ಶುದ್ಧ ಅರಶಿಣ ನೀರಲ್ಲಿ ಅದ್ದಿ ಕಣ್ಣಿನಮೇಲೆ ಹಾಕಿಕೊಳ್ಳುವುದರಿಂದ ಕಣ್ಣಿನ ಉರಿ, ಕಣ್ಣು ಕೆಂಪಾಗುವುದು, ನವೆ, ಊತ, ಕಣ್ಣಲ್ಲಿ ನೀರು ಸುರಿಯುವುದು ನಿವಾರಣೆಯಾಗಿ, ಕಣ್ಣಿನದೃಷ್ಠಿ ಶುಭ್ರವಾಗುತ್ತೆ.

ಒಂದು ಚಮಚ ಅರಶಿಣ ಎರಡು ಚಮಚ ಜೇನುತುಪ್ಪದಲ್ಲಿ ಕಲಸಿ ನೆಕ್ಕುವುದರಿಂದ, ಗಂಟಲು ನೋವು, ಗಂಟಲ ಕೆರತ, ಜ್ವರ, ಶೀತನೆಗಡಿ, ಕೆಮ್ಮು ನಿವಾರಣೆಯಾಗುತ್ತೆ. ಅರಶಿಣ, ಉಪ್ಪು ಪುಡಿ ಕಲಸಿ ಹಲ್ಲುಜ್ಜುವುದರಿಂದ, ಹಲ್ಲುನೋವು, ಹುಳುಕಲ್ಲು, ಬಾಯಿ ದುರ್ವಾಸನೆ, ದವಡೆನೋವು ಶಮನವಾಗುತ್ತೆ. ಹಸುವಿನ ಬೆಣ್ಣೆ ಅಥವಾ ಹರಳೆಣ್ಣೆಯಲ್ಲಿ ಅರಶಿಣ ಕಲಸಿ ಹಿಮ್ಮುಡಿ ಬಿರುಕಿನ ಮೇಲೆ ಲೇಪಿಸುತ್ತಿದ್ದರೆ, ಬಿರುಕು ಮಾಯವಾಗಿ, ಚರ್ಮ ಮೃದುವಾಗುತ್ತೆ. ಕಾಲು ಅಥವಾ ಕೈ ಬೆರಳಿನ ಸಂದಿಯಲ್ಲಿ ಹಳಸಿಕೊಂಡಾಗ, ಉಗರು ಬೆಚ್ಚಗಿನ ಕೊಬ್ಬರಿ ಎಣ್ಣೆಯಲ್ಲಿ ಅರಶಿಣ ಕಲಸಿ ಲೇಪಿಸುತ್ತಿದ್ದರೆ ಶೀಘ್ರ ಗುಣವಾಗುತ್ತೆ.

ಅರಶಿಣ, ಬೇವಿನ ಚಿಗರು, ಉಪ್ಪುನುಣ್ಣಗೆ ಅರೆದು, ಹುಳುಕಡ್ಡಿ, ಗಜಕರ್ಣ, ಕಜ್ಜಿ, ನವೆ, ಗಾಯ, ವ್ರಣಗಳ ಮೇಲೆ ಲೇಪಿಸುತ್ತಿದ್ದರೆ ಬೇಗನೆ ಗುಣವಾಗುತ್ತೆ. ಹೆಣ್ಣು ಮಕ್ಕಳು, ಮುಖದ ಮೇಲಿನ ಅನಗತ್ಯ ಕೂದಲು ನಿವಾರಿಸಲು, ಕಸ್ತೂರಿ ಅರಶಿಣದ ಗಂಧ ತೇಯ್ದು ಲೇಪಿಸುತ್ತಿದ್ದರೆ ನಿವಾರಣೆಯಾಗುತ್ತೆ. ದಿನನಿತ್ಯ ಆಹಾರದಲ್ಲಿ ಹೆಚ್ಚೆಚ್ಚು ಅರಶಿಣ ಉಪಯೋಗಿಸುವುದರಿಂದ ಕ್ಯಾನ್ಸರ್ ಕಣಗಳು ನಾಶವಾಗುತ್ತವೆ.

ಉಗರು ಬೆಚ್ಚಗಿನ ನೀರಲ್ಲಿ ಅರಶಿಣ ಕಲಸಿ, ಮಕ್ಕಳಿಗೆ ಸ್ನಾನ ಮಾಡಿಸುತ್ತಿದ್ದರೆ, ಚರ್ಮವ್ಯಾಧಿಗಳಿಂದ ರಕ್ಷಣೆ ಸಿಕ್ಕಿ,ಮೃದು ಚರ್ಮವನ್ನು ರಕ್ಷಕವಚವಾಗಿ ಕಾಪಾಡುತ್ತೆ. ಕುಡಿಯುವ ನೀರಿಗೆ ಅರಶಿಣ ಹಾಕಿ ಕುದಿಸಿ ಕುಡಿದರೆ ನೀರಲ್ಲಿನ ಕಲ್ಮಶಗಳು ದೂರವಾಗಿ, ಆರೋಗ್ಯ ಸಮಸ್ಯೆಗಳಿಂದ ಕಾಪಾಡುತ್ತೆ. ಹೀಗೆ ಅರಶಿಣದ ಉಪಯೋಗಗಳು ನೂರಲ್ಲ ಸಾವಿರಾರು.

Comments are closed.