ಪ್ರತಿದಿನ ಎರಡು ಬಾಳೆ ಹಣ್ಣನ್ನು ತಿಂದರೆ ದೇಹಕ್ಕೆ ಏನು ಸಿಗುತ್ತದೆ ಗೊತ್ತಾ?? ಲಾಭಗಳೇನು ಹಾಗೂ ನಷ್ಟಗಳೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಾಳೆಹಣ್ಣು ಸಕಲ ಋತುವಿನಲ್ಲಿಯೂ ಸಿಗುವಂಥ ಅತ್ಯುತ್ತಮವಾದ ಹಣ್ಣು. ಬಾಳೆಹಣ್ಣಿನಲ್ಲಿ ಸಾಕಷ್ಟು ಬಗೆಗಳಿವೆ. ರಸಬಾಳೆ, ಕರಬಾಳೆ, ಮೈಸೂರು ಹಣ್ಣು, ಪಚ್ಚಬಾಳೆ ಹೀಗೆ. ಒಂದೊಂದು ವಿಧದ ಹಣ್ಣು ಒಂದೊಂದು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ದಿನಕ್ಕೆ ಎರಡು ಮೂರು ಬಾಳೆ ಹಣ್ಣು ತಿನ್ನುವುದರಿಂದ ವ್ಯಾಯಾಮ ಮಾಡಿದಷ್ಟು ಪ್ರಯೋಜನ ಲಭಿಸುತ್ತದೆ. ಬಾಳೆಹಣ್ಣು ತಿಂದರೆ ಆರೋಗ್ಯಕ್ಕೆ ಯಾವೆಲ್ಲ ಉಪಯೋಗಗಳಿವೆ ನೋಡೋಣ ಬನ್ನಿ.

ಬಾಳೆಹಣ್ಣು ಸುಲಭವಾಗಿ ಎಲ್ಲಕಡೆ ಸಿಗಬಲ್ಲ ಹಣ್ಣು. ಹಸಿವಾದಾಗ ಕೂಡ ಒಂದು ಬಾಳೆಹಣ್ಣು ಸಿಕ್ಕರೆ ಸಾಕಪ್ಪಾ ಎಂದುಕೊಳ್ಳುತ್ತೇವೆ ಅಲ್ಲವೇ. ಹೌದು ಬಾಳೆಹಣ್ಣು ಅರೋಗ್ಯಕ್ಕೆ ಅತಿ ಮುಖ್ಯ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಕಬ್ಬಿಣಾಂಶ ಹಾಗೂ ವಿಟಮಿನ್ ಗಳು ಹೇರಳವಾಗಿವೆ. ಹಾಗಾಗಿ ಹೃದಯದ ಆರೋಗ್ಯಕ್ಕೆ ಬಾಳೆಹಣ್ಣು ತುಂಬಾನೇ ಒಳ್ಳೆಯದು. ದಿನಕ್ಕೆ 3 ಬಾಳೆಹಣ್ಣನ್ನು ತಿಂದರೆ 90 ನಿಮಿಷ ವ್ಯಾಯಾಮ ಮಾಡಿದಂತೆ. ಅಲ್ಲದೆ ವ್ಯಾಯಾಮ ಮಾಡುವುದಕ್ಕೆ ಶಕ್ತಿಯನ್ನು ಕೂಡ ಇದು ಒದಗಿಸುತ್ತದೆ. ಕಪ್ಪುಚುಕ್ಕಿ ಬಾಳೆಹಣ್ಣಿನಲ್ಲಿರುವ ಟ್ಯೂಮರ್ ನೆಕ್ರೋಸಿನ್ ಅಂಶ ಕ್ಯಾನ್ಸರ್ ತಡೆಗೆ ಸಹಾಯ ಮಾಡುತ್ತದೆ. ಜೊತೆಗೆ ಧೂಮಪಾನ ಮಧ್ಯಪಾನ ಬಿಡಲೂ ಕೂಡ ಇದು ಸಹಾಯಕವಾಗುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಷಿಯಂ ಸ್ನಾಯು ಸೆಳೆತವನ್ನು ತಡೆಗಟ್ಟುತ್ತದೆ.

ಇಷ್ಟೇ ಅಲ್ಲ ಸ್ನೇಹಿತರೆ ಬಾಳೆಹಣ್ಣು ತಿನ್ನುವುದರಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು. ಇನ್ನು ಕರಬಾಳೆ ಹಣ್ಣನ್ನು ತಿಂದರೆ ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ. ಮಕ್ಕಳಿಗೂ ಕೂಡ ಬಾಳೆಹಣ್ಣು ತುಂಬಾನೇ ಉತ್ತಮ. ಬಾಳೆಹಣ್ಣಿನ ಪೇಸ್ಟ್ ತಯಾರಿಸಿ ಮಕ್ಕಳಿಗೆ ತಿನ್ನಿಸಿದರೆ ಸುಲಭವಾಗಿ ಜೀರ್ಣವಾಗುತ್ತದೆ. ಇನ್ನು ಗಂಟಲಲ್ಲಿ ಏನಾದರೂ ತಿಂದ ಆಹಾರ ಸಿಕ್ಕಿಹಾಕಿಕೊಂಡರೂ ಬಾಳೆಹಣ್ಣಿನ ತುಂಡನ್ನು ನುಂಗಿದರೆ ಸರಿಯಾಗುತ್ತದೆ. ಬಾಳೆ ಹಣ್ಣು ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಆರೋಗ್ಯಕ್ಕೂ ಒಳ್ಳೆಯದು. ಹೌದು ಸ್ನೇಹಿತರೆ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆ ಮಾಡಿ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಸಕ್ಕರೆ ಕಾಯಿಲೆ ಇರುವವರು ಸಿಹಿ ಬಾಳೆಹಣ್ಣನ್ನು ಹೆಚ್ಚಾಗಿ ಸೇವಿಸಬೇಡಿ. ಬಾಳೆಹಣ್ಣು ತಿನ್ನುವುದರಿಂದ ಹೊಟ್ಟೆಯ ಹುಣ್ಣು ಕೂಡ ಉಪಶಮನವಾಗುತ್ತದೆ. ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಹೊಂದಿರುವ ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ದೇಹದ ಅನೇಕ ಖಾಯಿಲೆಗಳು ನಿವಾರಣೆಯಾಗುತ್ತವೆ.

Comments are closed.