News from ಕನ್ನಡಿಗರು

ದಿನಕ್ಕೆ ಒಂದು ಲಕ್ಷ ಬೇಕು ಎಂದು ಬೇಡಿಕೆ ಇಟ್ಟಿದ್ದ ಆರ್ಯವರ್ಧನ್ ರವರಿಗೆ ಈಗ ದಿನಕ್ಕೆ ಬಿಗ್ ಬಾಸ್ ಎಷ್ಟು ಕೊಡುತ್ತಿದ್ದಾರೆ ಗೊತ್ತೇ?? ಇಷ್ಟು ಕಡಿಮೇನಾ??

31

ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಪ್ರಾರಂಭ ಆಗಿದ್ದು 42 ದಿನಗಳ ಕಾಲ ನಡೆಯುವ ಈ ಬಿಗ್ ಬಾಸ್ ಮನೆಗೆ ಹಲವಾರು ಕ್ಷೇತ್ರಗಳ ಜನಪ್ರಿಯ ವ್ಯಕ್ತಿಗಳು ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ. ಇನ್ನು ಈ ಕಾರ್ಯಕ್ರಮದ ಮೊದಲನೇ ಸ್ಪರ್ಧಿಯಾಗಿ ಸಂಖ್ಯಾಶಾಸ್ತ್ರದ ಮೂಲಕ ಕಿರುತೆರೆಯ ವಾಹಿನಿಗಳಲ್ಲಿ ದೊಡ್ಡಮಟ್ಟದ ಬೇಡಿಕೆಯನ್ನು ಹೊಂದಿರುವ ಆರ್ಯವರ್ಧನ ಗುರೂಜಿ ಕಾಲಿಟ್ಟಿದ್ದಾರೆ.

ಆರ್ಯವರ್ಧನ ಗುರೂಜಿ ಅವರು ಐಪಿಎಲ್ ಪಂದ್ಯಾಟಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯವನ್ನು ಹೇಳುವ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಚಾರದಲ್ಲಿ ಇದ್ದರು. ಇನ್ನು ಇದಕ್ಕಿಂತ ಕೆಲವು ವರ್ಷಗಳ ಮುಂಚೆ ಕೂಡ ಆರ್ಯವರ್ಧನ್ ಗುರೂಜಿ ರವರು ನನ್ನನ್ನು ಬಿಗ್ ಬಾಸ್ ನವರು ಸ್ಪರ್ಧಿಯಾಗಿ ಬರಲು ಕರೆದಿದ್ದರು ನಾನು ದಿನವೊಂದಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆಯ ಬೇಡಿಕೆ ಇಟ್ಟಿದ್ದೆ ಅದನ್ನು ಅವರು ಕೊಡದಿದ್ದ ಕಾರಣಕ್ಕಾಗಿಯೇ ನಾನು ಹೋಗಿರಲಿಲ್ಲ ಎಂಬುದಾಗಿ ಹೇಳಿದ್ದರು. ಒಂದು ಸಮಯದಲ್ಲಿ ಒಂದು ಲಕ್ಷ ರೂಪಾಯಿ ದಿನಕ್ಕೆ ಸಂಭಾವನೆಯ ಬೇಡಿಕೆ ಇಟ್ಟಿದ್ದ ಆರ್ಯವರ್ಧನ್ ಗುರೂಜಿ ಈಗ ಎಷ್ಟು ಸಂಭಾವನೆಗೆ ಬಿಗ್ ಬಾಸ್ ಮನೆಯ ಒಳಗೆ ಹೋಗಿದ್ದಾರೆ ಗೊತ್ತಾ ಕೇಳಿದರೆ ನೀವು ಕೂಡ ಆಶ್ಚರ್ಯಪಡುತ್ತೀರಾ.

ಫ್ರೆಂಡ್ಸ್ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಗೆ ಈಗ ಹೋಗಿರುವುದು ದಿನಕ್ಕೆ 40,000 ಸಂಭಾವನೆಗಾಗಿ ಮಾತ್ರ. ಸಾಮಾನ್ಯ ಜನರಿಗೆ ಇದು ದೊಡ್ಡ ಮೊತ್ತ ಆಗಿರಬಹುದು ಆದರೆ ತಮ್ಮ ಪ್ರೊಫೆಷನ್ ಮೂಲಕ ಇದಕ್ಕಿಂತ ಜಾಸ್ತಿ ದುಡಿಯುವ ಇವರಿಗೆ ಇದು ಕಡಿಮೆ ಆಗಿರಬಹುದು. ದಿನವೊಂದಕ್ಕೆ ಆರ್ಯವರ್ಧನ್ ಗುರೂಜಿ ಅವರು ಬಿಗ್ ಬಾಸ್ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.