News from ಕನ್ನಡಿಗರು

ಬಿಗ್ ಬಾಸ್ ನಲ್ಲಿ ಸ್ಟೈಲಿಶ್ ಹಾಗೂ ಬೆಲೆ ಬಾಳುವ ಬಟ್ಟೆ ಧರಿಸುವ ಹಿಂದಿನ ಸೀಕ್ರೆಟ್ ಬಯಲಾಯ್ತು: ಏನು ಗೊತ್ತೇ ಆ ಗುಟ್ಟು??

10

ನಮಸ್ಕಾರ ಸ್ನೇಹಿತರ ಕನ್ನಡ ಕಿರುತೆರೆಯ ಪ್ರೇಕ್ಷಕರು ಎಂಟು ಸೀಸನ್ ಗಳಿಂದಲೂ ಕೂಡ ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಅನ್ನು ನೋಡಿಕೊಂಡು ಆ ಕಾರ್ಯಕ್ರಮವನ್ನು ಮನಸಾರೆ ಮೆಚ್ಚಿಕೊಂಡು ಬರುತ್ತಿದ್ದಾರೆ ಎಂದರೆ ತಪ್ಪಾಗಲಾರದು ಇದಕ್ಕಾಗಿ ಆ ಕಾರ್ಯಕ್ರಮ ಇಷ್ಟೊಂದು ದೊಡ್ಡ ವೀಕ್ಷಕ ಬಳಗವನ್ನು ಹಾಗೂ ಅಭಿಮಾನಿಗಳನ್ನು ಹೊಂದಿದೆ.

ಇನ್ನು ಎಂಟು ಸೀಜನ್ಗಳಿಂದಲೂ ಕೂಡ ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಹಾಗೂ ಭಾರತೀಯ ಚಿತ್ರರಂಗ ಕಂಡಂತಹ ಸರ್ವಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿರುವ ಕಿಚ್ಚ ಸುದೀಪ್ ರವರು ನಿರೂಪಕರಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದರಲ್ಲೂ ನೀವು ಬಿಗ್ ಬಾಸ್ ವೀಕ್ಷಿಕ ವರ್ಗವನ್ನು ಎರಡು ಗುಂಪುಗಳಲ್ಲಿ ವಿಂಗಡಿಸಬಹುದಾಗಿದೆ. ಒಂದು ಗುಂಪು ಬಿಗ್ ಬಾಸ್ ಅನ್ನು ವಾರ ಪೂರ್ತಿ ನೋಡಿದರೆ ಇನ್ನೊಂದು ಗುಂಪು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ರವರನ್ನು ನೋಡುವುದಕ್ಕಾಗಿಯೇ ಬಿಗ್ ಬಾಸ್ ಅನ್ನು ನೋಡುತ್ತದೆ. ಅದರಲ್ಲೂ ವಿಶೇಷವಾಗಿ ಕಿಚ್ಚ ಸುದೀಪ್ ರವರ ಸ್ಟೈಲಿಶ್ ಉಡುಪುಗಳು ನಿಜಕ್ಕೂ ಕೂಡ ಪ್ರೇಕ್ಷಕರ ಕಣ್ಮನವನ್ನು ಸೆಳೆಯುತ್ತದೆ. ಇನ್ನೇನು ಇದೇ ಆಗಸ್ಟ್ ಆರರಿಂದ ಪ್ರಾರಂಭವಾಗಲಿರುವ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ಮುನ್ನ ವಾಗಿ ಹಮ್ಮಿಕೊಂಡಿರುವ ಮಾಧ್ಯಮ ಸಭೆಯಲ್ಲಿ ಕಿಚ್ಚ ಸುದೀಪ್ ರವರು ತಮ್ಮ ಕಾಸ್ಟಿಂಗ್ ಕುರಿತಂತೆ ಇರುವಂತಹ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ.

ಕಿಚ್ಚ ಸುದೀಪ್ ರವರೆ ಸ್ವತಹ ಹೇಳುವಂತೆ ಸಿನಿಮಾಗಾಗಿ ಆಯಾಯ ಪಾತ್ರಕ್ಕೆ ತಕ್ಕಂತೆ ಆಯಾಯ ಕಾಸ್ಟ್ಯೂಮ ಅನ್ನು ಧರಿಸಬೇಕಾಗುತ್ತದೆ. ಇನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಬೇಕೆಂದರೆ ಕೈಗೆ ಸಿಕ್ಕಿದ್ದನ್ನು ನಾನು ಧರಿಸಿಕೊಂಡು ಹೋಗುತ್ತೇನೆ ಎಂಬುದಾಗಿ ಅವರು ಹೇಳುತ್ತಾರೆ ಆದರೆ ಬಿಗ್ ಬಾಸ್ ನಲ್ಲಿ ಮಾತ್ರ ಕಾಸ್ಟ್ಯೂಮ್ ಆಯ್ಕೆ ನನ್ನದೇ ಆಗಿರುತ್ತದೆ ಎಂಬುದಾಗಿ ಕನ್ನಡದ ಬಿಗ್ ಬಾಸ್ ಹೇಳಿದ್ದಾರೆ. ಮೊದಲೆರಡು ಸೀಸನ್ ಗಳ ನಂತರ ಜನರು ನನ್ನ ಬಿಗ್ ಬಾಸ್ ಕಾಸ್ಟ್ಯೂಮ್ ಅನ್ನು ಎಷ್ಟರಮಟ್ಟಿಗೆ ಫಾಲೋ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯಿತು ಇದೇ ಹಿನ್ನೆಲೆಯಲ್ಲಿ ಕಾಸ್ಟ್ಯೂಮ್ ಆಯ್ಕೆ ಸಾಕಷ್ಟು ಜಾಗೃತೆ ಕಾಳಜಿ ವಹಿಸಿ ನಾನು ಆಯ್ಕೆ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಪರಮೇಶ್ವರ್ ಗುಂಡ್ಕಲ್ ರವರು ಕೂಡ ಅವರ ಕಾಸ್ಟ್ಯೂಮ್ ಕುರಿತಂತೆ ನಮಗೂ ಕೂಡ ಅಷ್ಟೇ ಕಾಳಜಿ ಇದೆ ಎಂಬುದಾಗಿ ನಗುತ್ತಾ ಹೇಳಿದ್ದಾರೆ.

Leave A Reply

Your email address will not be published.