ಒಂದೇ ನಿಮಿಷದಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳ್ಳಿ ಸಾಮಾನುಗಳನ್ನು ಹೊಳೆಯುವಂತೆ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 1 ನಿಮಿಷಗಳಲ್ಲಿ ಕಡಿಮೆ ಖರ್ಚಿನಲ್ಲಿ ಬೆಳ್ಳಿ ಸಾಮಾನುಗಳನ್ನು ಸುಲಭವಾಗಿ ಕ್ಲೀನ್ ಮಾಡುವ ಟಿಪ್ಸ್ ಅನ್ನು ಇಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ಹಬ್ಬ, ಸಮಾರಂಭಗಳಲ್ಲಿ ಹೆಚ್ಚಾಗಿ ಬೆಳ್ಳಿ ಸಾಮಾನುಗಳನ್ನು ಉಪಯೋಗಿಸುತ್ತಾರೆ. ಕೆಲವರ ಮನೆಗಳಲ್ಲಿ ಪ್ರತಿದಿನವೂ ದೇವರ ಮನೆಯಲ್ಲಿ ಪೂಜೆಗೆ ಬೆಳ್ಳಿಗಳನ್ನು ಸಾಮಾನುಗಳನ್ನು ಉಪಯೋಗಿಸುತ್ತಾರೆ. ಬೆಳ್ಳಿ ಸಾಮಾನುಗಳನ್ನು ಹೆಚ್ಚು ಕಾಲ ಗಾಳಿಯಲ್ಲಿ ಇಟ್ಟರೆ ಅದು ಕಪ್ಪಾಗುತ್ತದೆ.

ಈ ರೀತಿ ಉಪಯೋಗಿಸಿದ ಸಾಮಾನುಗಳನ್ನು ಹೊಳೆಯುವಂತೆ ಮಾಡಲು ಕೆಲವರು ಪೇಸ್ಟನ್ನು ಅಥವಾ ಹೊರಗಡೆ ಮಾರುಕಟ್ಟೆಯಲ್ಲಿ ಸಿಗುವ ಹಾನಿಕಾರದ ರಾಸಾಯನಿಕಗಳನ್ನು ಉಪಯೋಗಿಸುತ್ತಾರೆ. ಇವುಗಳನ್ನು ಬಳಸಿದರು ಸಹ ಹೊಳೆಯುವಂತೆ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಮನೆಯಲ್ಲಿಯೇ ಇರುವ ಸಾಮಾನುಗಳನ್ನು ಬಳಸಿ ಕೇವಲ 1 ನಿಮಿಷಗಳಲ್ಲಿ ಬೆಳ್ಳಿ ಸಾಮಾನುಗಳು ಹೊಳೆಯುವಂತೆ ಮಾಡಬಹುದು.

ಬೆಳ್ಳಿ ಸಾಮಾನುಗಳನ್ನು ಕ್ಲೀನ್ ಮಾಡುವ ಸುಲಭ ವಿಧಾನ: ಮೊದಲಿಗೆ ಒಂದು ಕುಕ್ಕರ್ ಗೆ ಅರ್ಧದಷ್ಟು ನೀರನ್ನು ಹಾಕಿ ಗ್ಯಾಸ್ ಮೇಲೆ ಇಟ್ಟು ಕಾಯಲು ಬಿಡಿ. ಕಾದ ನಂತರ ಇದಕ್ಕೆ 2 ಚಮಚದಷ್ಟು ಅಡಿಗೆ ಸೋಡಾ ವನ್ನು ಹಾಕಿ ಕುದಿಯಲು ಪ್ರಾರಂಭವಾಗುವವರೆಗೂ ಬಿಡಿ. ನಂತರ ಇದಕ್ಕೆ ಅಲ್ಯೂಮಿಲಿಯಂ ಫಾಯಿಲ್ ನನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಕುಕ್ಕರಿನ ಒಳಗೆ ಹಾಕಿ ನೊರೆ ಬರುವ ರೀತಿ ನೀರು ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ ಬೆಳ್ಳಿ ಸಾಮಾನನ್ನು ಒಂದೊಂದಾಗಿ ಹಾಕಿ ಚಮಚದ ಸಹಾಯದಿಂದಾಗಿ 1 ನಿಮಿಷಗಳ ಕಾಲ ನೀರನ್ನು ಚೆನ್ನಾಗಿ ತಿರುಗಿಸಿದರೆ ಬೆಳ್ಳಿ ಸಾಮಾನಿನ ಮೇಲೆ ಇರುವ ಕಪ್ಪು ಕಲೆ ಹೋಗಿ ಬೆಳ್ಳಿ ಸಾಮಾನು ಹೊಳೆಯುತ್ತಿರುತ್ತದೆ. ನಂತರ ಬೆಳ್ಳಿ ಸಾಮಾನುಗಳನ್ನು ಸೋಪು ನೀರಿನಿಂದ ಒಂದು ಬಾರಿ ತೊಳೆದುಕೊಳ್ಳಿ. ನಂತರ ಸಾಮಾನ್ಯ ನೀರಿನಿಂದ ಒಂದು ಬಾರಿ ತೊಳೆದುಕೊಳ್ಳಿ.

Comments are closed.