ಅಮೆರಿಕ ಅಧ್ಯಕ್ಷ ಬಿಡೆನ್ ಅವರ ಸಂಬಳ ಎಷ್ಟು ಗೊತ್ತೆ?? ಇದಕ್ಕೆ ಹೇಳುವುದು ದೊಡ್ಡಣ್ಣ ಎಂದು

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಎಲ್ಲರೂ ವಿಶ್ವದ ದೊಡ್ಡಣ್ಣ ಎಂದು ತಕ್ಷಣ ಅಮೇರಿಕಾ ದೇಶದ ಕಡೆ ಬೆರಳು ಮಾಡಿ ತೋರಿಸುತ್ತಾರೇ. ಖಂಡಿತ ಮುಂದೊಂದು ದಿನ ಗಳಲ್ಲಿ ಭಾರತ ದೇಶ ವಿಶ್ವದ ದೊಡ್ಡಣ್ಣ ಎನಿಸಿಕೊಳ್ಳಲಿದೆ ಆದರೆ ಸದ್ಯದ ಮಟ್ಟಿಗೆ ಅಮೇರಿಕ ದೇಶ ವಿಶ್ವದ ದೊಡ್ಡಣ್ಣ ಎಂಬ ಸ್ಥಾನ ಪಡೆದು ಕೊಂಡಿದೆ. ಹೀಗೆ ವಿಶ್ವದ ದೊಡ್ಡಣ್ಣ ಎಂಬ ದೇಶವನ್ನು ಮುನ್ನಡೆಸುವ ಅಧ್ಯಕ್ಷರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ ಹೇಳಿ

ಸ್ನೇಹಿತರೆ ಅಮೆರಿಕ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಕೂಡ ಅಮೇರಿಕಾ ದೇಶದ ಕಡೆಯಿಂದ ಅವರಿಗೆ ವಯಕ್ತಿಕ ವಿಮಾನ ಹಾಗೂ ದೇಶದ ಒಳಗಡೆ ಸಂಚಾರ ಮಾಡಲು ಹೆಲಿಕ್ಯಾಪ್ಟರ್ ನೀಡಲಾಗುತ್ತದೆ, ಇನ್ನು ಇವರ ಭದ್ರತೆಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಕೂಡ ಖರ್ಚು ಮಾಡಲಾಗುತ್ತದೆ, ಒಮ್ಮೆ ಅಧ್ಯಕ್ಷರಾದ ಬಳಿಕ ಇವರು ಮತ್ತು ಇವರ ಕುಟುಂಬ ಶ್ವೇತಭವನದಲ್ಲಿ ವಾಸಿಸಬಹುದಾಗಿದೆ.

ಅಲ್ಲಿ ಸಾಕಷ್ಟು ಭದ್ರತೆ ಇರಲಿದ್ದು, ಯಾರು ಕೂಡ ಹತ್ತಿರ ಕೂಡ ಸುಳಿಯಲು ಸಾಧ್ಯವಿಲ್ಲ. ಇನ್ನು ವಿಶ್ವದ ಇನ್ಯಾವುದೇ ಪ್ರಧಾನಿಗೂ ಅಥವಾ ಅಧ್ಯಕ್ಷರಿಗೂ ಸಿಗದ ಸೌಲಭ್ಯಗಳು ಇವರಿಗೆ ಸಿಗಲಿದ್ದು, ಎಲ್ಲಾ ಸೌಲಭ್ಯಗಳನ್ನು ಹೊರತು ಪಡಿಸಿ ವಾರ್ಷಿಕವಾಗಿ ಬರೋಬ್ಬರಿ ನಾಲ್ಕು ಲಕ್ಷ ಡಾಲರ್ ಇವರಿಗೆ ಸಂಬಳ ವನ್ನಾಗಿ ನೀಡಲಾಗುತ್ತದೆ. ಇದನ್ನು ಭಾರತೀಯ ರೂಪಾಯಿಗಳಲ್ಲಿ ನಾವು ಗಮನಿಸುವುದಾದರೆ ಬರೋಬ್ಬರಿ 2.9 ಕೋಟಿ ರೂಪಾಯಿಗಳಷ್ಟು ಸಂಬಳವನ್ನು ಅಮೇರಿಕಾ ಅಧ್ಯಕ್ಷರು ಪಡೆಯುತ್ತಾರೆ.

Comments are closed.