ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳೇ ಅಘೋಷಿತವಾಗಿ ವಿನ್ನರ್ ಯಾರೆಂದು ಆಯ್ಕೆ ಮಾಡಿದ್ದಾರೆ, ಯಾರಂತೆ ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ನ ಸ್ಪರ್ಧಿಗಳು ಹೇಗೆ ಇರಲಿ, ಅವರ ತಪ್ಪುಗಳನ್ನು ಹೇಳುತ್ತಾ, ಅವರಿಗೆ ಬಯ್ಯುತ್ತಲೇ ಇದ್ದರು ಬಿಗ್ ಬಾಸ್ ವೀಕ್ಷಣೆಯಂತೂ ಯಾರೂ ನಿಲ್ಲಿಸಿಲ್ಲ. ಯಾಕೆಂದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಇನ್ನು ಸುದೀಪ್ ಅವರ ನಿರೂಪಣಾ ಶೈಲಿ ಬಿಗ್ ಬಾಸ್ ನ್ನು ಜನರು ಇನ್ನಷ್ಟು ಮೆಚ್ಚುವುದಕ್ಕೆ ಮುಖ್ಯ ಕಾರಣ. ಸ್ಪರ್ಧಿಗಳೊಂದಿಗೆ ಕಿಚ್ಚ ಸುದೀಪ್ ನಡೆಸುವ ಪಂಚಾಯ್ತಿಯೇ ಅಷ್ಟು ರೋಚಕವಾಗಿರುತ್ತದೆ.

ಬಿಗ್ ಬಾಸ್ ನ 2ನೆ ಇನ್ನಿಂಗ್ಸ್ ನಲ್ಲಿ ಈಗಿರುವವರು 9 ಮಂದಿ. ಬಿಗ್ ಬಾಸ ಫೈನಲ್ ಗೆ ಇನ್ನು ಮೂರೇ ವಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಯಾರು ಬಿಗ್ ಬಾಸ್ ಟೈಟಲ್ ವಿನ್ ಆಗಬೇಕು ಎಂಬ ಚರ್ಚೆಗಳು ಮುಗಿಲು ಮುಟ್ಟಿದೆ. ಅಭಿಮಾನಿಗಳು ಅವರವರ ಸ್ಪರ್ಧಿಗಳಿಗೆ ವೋಟ್ ಹಾಕುವುದರ ಮೂಲಕ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಆದರೆ ಬಿಗ್ ಬಾಸ್ ವಿನ್ನರ್ ಇವರೇ ಆಗಬೇಕು ಎಂಬ ಚರ್ಚೆಯಲ್ಲಿ ಮೊದಲ ಸ್ಥಾನದಲ್ಲಿರುವವರು ಅರವಿಂದ್ ಕೆ.ಪಿ. ಬಿಗ್ ಬಾಸ್ ಆರಂಭದಿಂದಲೂ ಅರವಿಂದ್ ಅವರ ಆಟವನ್ನು ಮೆಚ್ಚಿದ ಜನ ಇವರೇ ವಿನ್ನರ್ ಆಗಬೇಕೆಂದು ಹಂಬಲಿಸುತ್ತಿದ್ದದು. ಇನ್ನು ಅರವಿಂದ್ ಕೂಡ ಮನೆಯ ಸದಸ್ಯರೊಂದಿಗೆ ಉತ್ತಮ ವರ್ತನೆಯಿಂದ ತಮ್ಮ ಗೌರವವನ್ನು ಉಳಿಸಿಕೊಂಡು ಬಂದಿದ್ದಾರೆ.

ಒಬ್ಬ ಬೈಕರ್ ಆಗಿರುವ ಅರವಿಂದ್ ಎಲ್ಲರೊಂದಿಗೆ ಹೇಗೆ ಬೆರೆಯುತ್ತಾರೆ ಹಾಗೂ ಹೇಗೆ ಟಾಸ್ಕ್ ಗಳನ್ನು ಆಡುತ್ತಾರೆ ಎಂದು ವೀಕ್ಷಕರಲ್ಲಿ ಕುತೂಹಲವಿತ್ತು. ಅರವಿಂದ್ ಎಲ್ಲಾ ಟಾಸ್ಕ್ ಗಳಲ್ಲೂ ಉತ್ತಮವಾದ ಪ್ರದರ್ಶನ ನೀಡುವ ಮೂಲಕ ಜನರ ಜನರ ನಂಬಿಕೆ ಉಳಿಸಿಕೊಂಡು ಬಂದಿದ್ದಾರೆ. ಅರವಿಂದ್ ಅವರ ಈ ನಡವಳಿಕೆ ಹಾಗೂ ಅವರ ಪ್ಯಾನ್ ಬಳಗವನ್ನು ನೋಡಿ ಬಿಗ್ ಬಾಸ್ ಮನೆಯ ಸದಸ್ಯರು ಕೂಡ ಅರವಿಂದ್ ವಿರುದ್ಧ ಮಾತನಾಡುವುದಿಲ್ಲ. ಈ ವಾರ ಅವರನ್ನು ಯಾವೊಬ್ಬ ಸದಸ್ಯನೂ ನಾಮಿನೇಟ್ ಕೂಡ ಮಾಡಿರಲಿಲ್ಲ. ವೀಕ್ಷಕರು ಮಾತ್ರವಲ್ಲದೆ ಮನೆಯ ಸದಸ್ಯರು ಕೂಡ ಅರವಿಂದ್ ಅವರೇ ವಿನ್ನರ್ ಎಂದು ಭಾಗಶಃ ಒಪ್ಪಿಕೊಂಡಂತಿದೆ. ಇನ್ನು ಬಿಗ್ ಬಾಸ್ ಫೈನಲ್ ನಲ್ಲಿ ಕಿಚ್ಚ ಸುದೀಪ್ ಕೈ ಹಿಡಿದು ಮೇಲೆತ್ತಿವೆ ಸ್ಪರ್ಧಿ ಯಾರು ಎಂಬುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *