ಗೃಹಿಣಿಯರಿಗೆ ಗುಡ್ ನ್ಯೂಸ್ – ಧೀಡಿರಂತ ಕೆಳಗಿಳಿಯುತ್ತಿವೆ ಅಡುಗೆ ಎಣ್ಣೆ ಬೆಲೆಗಳು?? – ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ಹೈರಾಣಾಗಿ ಹೋಗುತ್ತಿತ್ತು‌. ಪೆಟ್ರೋಲ್, ಡಿಸೇಲ್, ಜೊತೆ ಅಡುಗೆ ಎಣ್ಣೆಯ ಬೆಲೆಗಳು ಗಗನಕ್ಕೇರಿದ್ದವು. ಇದರಿಂದ ಗೃಹಿಣಿಯರು ತಿಂಗಳ ಬಜೆಟ್ ನ್ನು ಸರಿದೂಗಿಸಲು ಹರಸಾಹಸ ಪಡುತ್ತಿದ್ದರು. ಆದರೇ ಈಗ ಗೃಹಿಣಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಅಡುಗೆ ಎಣ್ಣೆಯ ಬೆಲೆಗಳು ಶೇಕಡಾ 20 ರಷ್ಟು ಇಳಿಕೆಯಾಗಿದೆ. ದೇಶದಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಹಾಗೂ ಪೂರೈಕೆ ನಡುವೆ ಅಜಗಜಾಂತರ ವ್ಯತ್ಯಾಸ ಇದ್ದ ಕಾರಣವೇ ಈ ಪಾಟಿ ಬೆಲೆಯೇರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈಗ ರಫ್ತು ಹಾಗೂ ಆಮದಿನಲ್ಲಿ ಅಡುಗೆ ಎಣ್ಣೆ ಸಂಭಂದಿಸಿದಂತೆ ಕೆಲವು ಅಗತ್ಯ ಕ್ರಮಗಳನ್ನು ಕೈಗೊಂಡ ಕಾರಣಕ್ಕೆ ಅಡುಗೆ ಎಣ್ಣೆಗಳ ಬೆಲೆ ಶೇಕಡಾ 20 ರಷ್ಟು ಇಳಿದಿದೆ.

ಸದ್ಯ ಪಾಮ್ ಆಯಿಲ್ ಎಣ್ಣೆ ಬೆಲೆ ಕೆಜಿಗೆ 115ರೂಪಾಯಿಗೆ ಇಳಿದಿದೆ. ಮತ್ತೊಂದು ಬೇಡಿಕೆಯ ಎಣ್ಣೆಯಾಗಿರುವ ಸೂರ್ಯಕಾಂತಿ ಎಣ್ಣೆಯ ಬೆಲೆ ಕೆಜಿಗೆ 157 ರೂಪಾಯಿಗೆ ಕುಸಿದಿದೆ. ಈ ಹಿಂದೆ 188 ರೂಪಾಯಿಗೆ ಒಂದು ಕೆಜಿ ಇದ್ದ ಸೂರ್ಯಕಾಂತಿ ಎಣ್ಣೆ ಈಗ 157 ರೂಪಾಯಿಗೆ ಒಂದು ಕೆಜಿ ಸಿಗುತ್ತದೆ. ಸೋಯಾ ಎಣ್ಣೆ ಈ ಹಿಂದೆ 162 ರೂಪಾಯಿಗೆ ಒಂದು ಕೆಜಿ ಇತ್ತು. ಈಗ ಇದೇ ಎಣ್ಣೆ 138 ರೂಪಾಯಿಗೆ ಸಿಗುತ್ತಿದೆ. ಇದರ ಜೊತೆಗೆ ಸಾಸಿವೆ ಎಣ್ಣೆಯ ಬೆಲೆ ಸಹ ಇಳಿದಿದೆ. ಈ ಹಿಂದೆ ಕೆಜಿಗೆ 175 ರೂಪಾಯಿಗೆ ಸಿಗುತ್ತಿದ್ದ ಸಾಸಿವೆ ಎಣ್ಣೆ ಬೆಲೆ ಈಗ 157 ರೂಪಾಯಿಗೆ ಇಳಿದಿದೆ.

ಕಡಲೆಕಾಯಿ ಎಣ್ಣೆ ಬೆಲೆ ಸಹ ಇಳಿಮುಖವಾಗಿದ್ದು ಈ ಹಿಂದೆ ಕೆಜಿಗೆ 190 ರೂಪಾಯಿಗೆ ಹೋಗಿದ್ದ ಈ ಎಣ್ಣೆ ರೇಟ್ ಈಗ ಇಳಿದಿದ್ದು ಈಗ 174 ರೂಪಾಯಿಗೆ ಬಂದು ನಿಂತಿದೆ. ಇನ್ನು ಅತಿ ವಿರಳವಾಗಿ ಉಪಯೋಗಿಸುವ ವನಸ್ಪತಿ ಎಣ್ಣೆ ಬೆಲೆ ಸಹ 154 ರೂಪಾಯಿಗೆ ಏರಿತ್ತು. ಈಗ ಅದೂ ಸಹ 141 ರೂಪಾಯಿಗೆ ಇಳಿದಿದೆ. ಒಟ್ಟಿನಲ್ಲಿ ಕೋರೋನಾ ಎರಡನೇ ಅಲೆ ಮುಗಿಯುತ್ತಿದ್ದಂತಯೇ, ಅಡುಗೆ ಎಣ್ಣೆ ಬೆಲೆಗಳು ಸಹ ಕೊಂಚ ಇಳಿಮುಖವಾಗಿದೆ. ಹೀಗೆ ಮತ್ತಷ್ಟು ಇಳಿಕೆಯಾಗಿ ಜನಜೀವನ ನೆಮ್ಮದಿಯಾಗಿರಲಿ ಎಂದು ನಾವು ಬಯಸುತ್ತೇವೆ. ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ

Comments are closed.