ಹೊಸ ವರ್ಷ ಬರುತ್ತಿದೆ, ನೀವು ಮುಂದಿನ ವರ್ಷವಾದರೂ ಯಶ್ವಸಿಯಾಗಬೇಕು ಎಂದರೆ ಚಾಣಕ್ಯ ಹೇಳಿದ ಆ ಐದು ನೀತಿ ಪಾಲಿಸಿ ಸಾಕು. ಯಶಸ್ಸು ನಿಮ್ಮದಾಗುತ್ತದೆ.

ನಮಸ್ಕಾರ ಸ್ನೇಹಿತರೇ ಭೂಮಿ ಮೇಲೆ ಜನಿಸುವ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂಬ ಆಸೆ ಮತ್ತು ಕನಸು ಸದಾ ಇರುತ್ತದೆ. ಆದರೇ ಕೆಲವೊಮ್ಮೆ ನೀರಿಕ್ಷಿತ ಪ್ರಮಾಣದ ಯಶಸ್ಸು ಲಭಿಸುವುದಿಲ್ಲ. ಅದಕ್ಕಾಗಿಯೇ ಚಾಣಕ್ಯ ಐದು ನೀತಿಗಳನ್ನ ಹೇಳಿದ್ದಾರೆ. ಈ ಐದು ನೀತಿಗಳನ್ನ ಅನುಸರಿಸಿದರೇ ಜೀವನದಲ್ಲಿ ಖಂಡಿತವಾಗಿ ಯಶಸ್ವಿಯಾಗಬಹುದು ಎಂದು ಹೇಳಿದ್ದಾರೆ. ಬನ್ನಿ ಆ ನೀತಿಗಳನ್ನ 2022 ರಲ್ಲಿ ಅನುಸರಿಸುವ ಮೂಲಕ ಯಶಸ್ವಿಯಾಗೋಣ. ಆ ನೀತಿಗಳು ಈ ಕೆಳಗಿನಂತಿವೆ.

1.ಮಾಡಿದ ತಪ್ಪನ್ನೇ ಮತ್ತೊಮ್ಮೆ ಮಾಡದಿರಿ – ಮನುಷ್ಯ ತಾನು ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕು. ತಪ್ಪಿನಿಂದ ತಿದ್ದಿಕೊಂಡು ಜೀವನದಲ್ಲಿ ಮುಂದೆಂದೂ ಆ ತಪ್ಪನ್ನು ಪುನರಾವರ್ತಿಸಬಾರದು. ಹಾಗಾಗಿ ಚಾಣಕ್ಯ ಮಾಡಿದ ತಪ್ಪನ್ನ ಮತ್ತೊಮ್ಮೆ ಮಾಡಬೇಡಿ ಎಂದು ಹೇಳುತ್ತಾನೆ.

2.ಕೋಪ ಮತ್ತು ಅಹಂಕಾರವನ್ನು ಬಿಟ್ಟು ಬಿಡಿ – ಮನುಷ್ಯನ ಅವನತಿಗೆ ಕೋಪ ಮತ್ತು ಅಹಂಕಾರವೇ ಕಾರಣ. ಹಾಗಾಗಿ ಆ ಎರಡು ಗುಣಗಳನ್ನ ಇಂದಿನಿಂದಲೇ ಬಿಟ್ಟು ಮುಂದೆ ಸಾಗಿ.

3.ಮಾಧುರ್ಯ ಮತ್ತು ವಿನಮ್ರತೆಯ ಭಾವ ಬೆಳೆಸಿಕೊಳ್ಳಿ – ಮನುಷ್ಯ ಸಂಘಜೀವಿ. ಸಮಾಜದಲ್ಲಿ ನಮ್ಮ ಮಾತು ಹಾಗೂ ನಡತೆ ಮೂಲಕ ಜನರ ವಿಶ್ವಾಸ ಗಳಿಸಬೇಕು. ಹಾಗಾಗಿ ಮಾತು ಮಾಧುರ್ಯವಾಗಿ ಮತ್ತು ನಡತೆಯಲ್ಲಿ ವಿನಮ್ಯರಾಗಿರಿ ಎಂದು ಚಾಣಕ್ಯ ಸಲಹೆ ನೀಡುತ್ತಾರೆ.

4.ಸಮಯದ ಮಹತ್ವ ಅರಿಯಿರಿ – ಸಮಯ ಬಹಳ ಮುಖ್ಯವಾದದ್ದು. ಒಂದು ಭಾರಿ ಸಮಯ ಹೋದರೇ ಮತ್ತೆಂದೂ ವಾಪಸ್ ಬರುವುದಿಲ್ಲ. ಹಾಗಾಗಿ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಸಮಯವನ್ನ ವ್ಯರ್ಥ ಮಾಡಬೇಡಿ ಎಂದು ಚಾಣಕ್ಯ ಸಲಹೆ ನೀಡುತ್ತಾರೆ.

5.ಶಿಸ್ತು – ಚಾಣಕ್ಯ ಹೆಚ್ಚು ಪ್ರತಿಪಾದಿಸುವ ನೀತಿಯೆಂದರೇ ಅದು ಶಿಸ್ತು.ಜೀವನದಲ್ಲಿ ಶಿಸ್ತನ್ನ ಪಾಲಿಸಿದರೇ ನಾವು ಹೆಚ್ಚು ಯಶಸ್ಸುಗಳಿಸುತ್ತೇವೆ. ಹೀಗಾಗಿ ಚಾಣಕ್ಯ ಶಿಸ್ತಿನ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ. ಚಾಣಕ್ಯ ಹೇಳಿದ ಈ ನೀತಿಗಳನ್ನ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು 2022ರಲ್ಲಿ ಯಶಸ್ಸನ್ನ ನಿಮ್ಮದಾಗಿಸಿಕೊಳ್ಳಿ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.