ಮದುವೆಯಾದ ಎರಡೇ ತಿಂಗಳಿಗೆ ಗುಡ್ ನ್ಯೂಸ್ ನೀಡಿದ ಚಂದನ್, ಏನು ಗೊತ್ತೇ??? ಅಭಿಮಾನಿಗಳು ಫುಲ್ ಕುಶ್.

Entertainment

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಸಾಕಷ್ಟು ಸ್ಮಾರ್ಟ್ ಆಗಿರೋ ನಟರಿದ್ದಾರೆ. ಅದರಲ್ಲಿ ಚಂದನ್ ಕೂಡ ಒಬ್ಬರು. ಇವರಿಗಂತು ಪ್ಯಾನ್ಸ್ ಸಂಖ್ಯೆ ಜಾಸ್ತಿನೇ ಎನ್ನಬಹುದು. ಮೊದಲು ಕನ್ನಡ ಕಿರಿತೆರೆಯಲ್ಲಿ ಅಭಿನಯಿಸಿದ್ದ ಚಂದನ್ ತೆಲುಗು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾ ಗಳಲ್ಲಿಯೂ ನಟಿಸಿದ್ದಾರೆ ಚಂದನ್. ಅರ್ಜುನ್ ಸರ್ಜಾ ಅವರ ಚಿತ್ರ ‘ಪ್ರೇಮ ಬರಹ’ದಲ್ಲಿ ಅವರ ಮಗಳು ಐಶ್ವರ್ಯಾ ಅರ್ಜುನ್ ಅವರ ಜೊತೆ ಬೆಳ್ಳಿ ತೆರೆಯಲ್ಲೂ ಮಿಂಚಿದ್ದರು. ಇನ್ನು ಕನ್ನಡ ಬಿಗ್ ಬಾಸ್ ನಲ್ಲಿಯೂ ರನ್ನರ್ ಅಪ್ ಆಗಿದ್ದನ್ನು ಜನ ಮರೆತಿಲ್ಲ.

ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಕಿರುತೆರೆಯ ಘಿಳು ಬಿಟ್ಟಿಲ್ಲ ಚಂದನ್ ಅವರಿಗೆ. ತಾವು ಹೋಟೆಲ್ ಉದ್ಯಮಕ್ಕೆ ಕಾಲಿಟ್ಟು ಅದನ್ನ ನಿಭಾಯಿಸುವುದಕ್ಕಾಗಿ ತೆಲಗು ಧಾರಾವಾಹಿಯಿಂದ ಹೊರಬಂದರು ಚಂದನ್. ಇನ್ನು ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದನ್ ಹಾಗೂ ಕವಿತಾ ಗೌಡ ಅವರ ಜೋಡಿಯನ್ನು ನೋಡುವುದೇ ಪ್ರೇಕ್ಷಕರಿಗೆ ಒಂದು ಖುಷಿಯಾಗಿತ್ತು. ಇವರಿಬ್ಬರು ನಿಜ ಜೀವನದಲ್ಲಿಯೂ ಒಂದಾಗಬೇಕು ಎಂದು ಬಯಸಿದವರೆ ಹೆಚ್ಚು. ಇದೀಗ ಪ್ರೇಕ್ಷಕರ ಈ ಕನಸು ಕೂಡ ನೆರವೇರಿದೆ. ಚಂದನ್ ಹಾಗೂ ಕವಿತಾ ಗೌಡ ಇಬ್ಬರೂ ಮದುವೆಯಾಗಿದ್ದಾರೆ.

ಈ ಇಬ್ಬರ ಜೋಡಿ ಸುವರ್ಣ ವಾಹಿನಿಯಲ್ಲಿ ಕುಕ್ಕು ವಿಥ್ ಕಿರಿಕ್ಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನು ಕೂಡ ಪ್ರೇಕ್ಷಕರು ಖುಷಿಯಿಂದ ಸ್ವಾಗತಿಸಿದ್ದರು. ಇಂತಿಪ್ಪ ನೆಚ್ಚಿನ ನಟ ಚಂದನ್ ಇದೀಗ ಪೊಲೀಸ್ ಅಧಿಕಾರಿಯಾಗಿ ಬಂದಿದ್ದಾರೆ, ಅರೇ ಅಶ್ವರ್ಯ ಆಯ್ತಾ!? ಹೌದು ಚಂದನ್, ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಮರಳಿ ಮನಸಾಗಿದೆ’ ಧಾರಾವಾಹಿಯಲ್ಲಿ ನಟಿಸಲಿದ್ದಾರೆ. ಈ ಧಾರಾವಾಹಿಯಲ್ಲಿ ಚಂದನ್ ಅವರ ಲುಕ್ ನೋಡಿ ಅವರಿಗೆ ಮದುವೆಯಾಗಿದ್ದನ್ನೂ ಮರೆತು ಮಹಿಳೆಯರೇ ಹೆಚ್ಚು ಅಭಿಮಾನಿಗಳಾಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *