ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಚರಣ್ ರವರ ಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಮೊದಲು ಹಾಸ್ಯ ಕಲಾವಿದರಾಗಿ ನಂತರ ಈಗಿನ ದಿನಗಳಲ್ಲಿ ನಾಯಕನಟರಾಗಿ ಬದಲಾಗಿರುವ ಹಲವಾರು ಜನ ಇದ್ದಾರೆ ಆದರೆ ಅದರಲ್ಲಿ ಯಶಸ್ವಿಯಾಗಿರುವವರು ಮಾತ್ರ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಹೌದು ಸ್ನೇಹಿತರೆ ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಯಶಸ್ವಿ ಹಾಸ್ಯ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ನಾಯಕನಟ ಎಂದರೆ ಅದು ಶರಣ್.

ಒಂದು ಕಾಲದಲ್ಲಿ ಕೇವಲ ಹಾಸ್ಯ ಕಲಾವಿದನಾಗಿ ಹಾಗೂ ಸೈಡ್ ಆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಂತಹ ಶರಣ್ ಅವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಬಹು ಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ಕಲಾವಿದರಾಗಿ ಗುರುತಿಸಿಕೊಳ್ಳುತ್ತಾರೆ. ಇನ್ನು ಮಗನೇ ಆಸೆಗಾಗಿ ಹೀರೋ ಆಗಲು ಕೂಡ ತಯಾರಾಗಿ ನಂತರ ರಾಂಬೋ ಚಿತ್ರದ ಮೂಲಕ ನಾಯಕನಟನಾಗಿ ಪಾದರ್ಪಣೆ ಮಾಡುತ್ತಾರೆ. ಹಾಸ್ಯ ಕಲಾವಿದನಾಗಿ ಕನ್ನಡ ಪ್ರೇಕ್ಷಕರ ಮನೆ ಗೆದ್ದಂತಹ ಶರಣ್ ರವರು ರಾಂಬೋ ಚಿತ್ರದ ಮೂಲಕ ನಾಯಕ ನಟನಾಗಿ ಕೂಡ ಅಷ್ಟೇ ಮಟ್ಟದ ಜನಮನ್ನಣೆಯನ್ನು ಗಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಶರಣ್ ಅವರು ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡುತ್ತಿದ್ದಾರೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ಶರಣ್ ರವರು ಖ್ಯಾತ ನಟಿ ಶ್ರುತಿ ಅವರ ಸಹೋದರ. ಅಕ್ಕನಂತೆ ತಮ್ಮ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಯಶಸ್ವಿ ಆದವರು. ಇನ್ನು ಶರಣ್ ರವರು ಬಹಳ ಕಷ್ಟಪಟ್ಟು ಈಗ ಇರುವ ಸ್ಥಾನಕ್ಕೆ ಬಂದು ನಿಂತವರು. ತಾವು ಕಷ್ಟ ಪಟ್ಟಂತಹ ಹಣದಿಂದ ಬೆಂಗಳೂರಿನ ನಾಗರಬಾವಿಯಲ್ಲಿ ತಮ್ಮ ಅಭಿರುಚಿಗೆ ತಕ್ಕಂತೆ ದೊಡ್ಡ ಮನೆಯೊಂದನ್ನು ಕಟ್ಟಿಸಿದ್ದಾರೆ. ಕಷ್ಟಪಟ್ಟ ದುಡ್ಡಿನಲ್ಲಿ ಇಷ್ಟಪಟ್ಟು ಮನೆ ಕಟ್ಟಿಸಿರುವ ಶರಣ್ ರವರಿಗೆ ಈ ಮನೆಯ ಮೇಲೆ ಸಾಕಷ್ಟು ಮಮಕಾರ. ಹೀಗಾಗಿಯೇ ಪ್ರತಿಯೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಈ ಮನೆಯನ್ನು ಕಟ್ಟಿಸಿದ್ದಾರೆ. ಇನ್ನು ಶರಣ್ ರವರ ಮನೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Comments are closed.