ಊರೆಲ್ಲ ಸುವಾಸನೆ ತರುವ ಮಂಗಳೂರು ಶೈಲಿಯ ಕೋಳಿ ಸಾರು ಅಬ್ಬಾ ಎಷ್ಟು ರುಚಿ ಇರುತ್ತೆ ಗೊತ್ತಾ?? ಈ ರೀತಿ ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ ನಾನ್ ವೆಜ್ ಪ್ರಿಯರಿಗೆ ಕೋಳಿಸಾರು ಎಂದರೆ ತುಂಬಾ ಇಷ್ಟ. ಕೋಳಿ ಸಾರ್ ನಲ್ಲಿ ಹಲವಾರು ವಿಧ ಹಾಗೂ ಬಗೆಗಳಿವೆ. ಆ ಬಗೆಯಲ್ಲಿ ಬಹುತೇಕ ಜನರಿಗೆ ಹೆಚ್ಚಿನದಾಗಿ ಇಷ್ಟವಾಗುವುದು ಮಂಗಳೂರು ಶೈಲಿಯ ಕೋಳಿ ಸಾರು. ಬನ್ನಿ ಇಂದು ಮಂಗಳೂರು ಶೈಲಿಯ ಕೋಳಿ ಸಾರು ಹೇಗೆ ಮಾಡುವುದು ಎಂಬುದನ್ನು ನಾವು ಹೇಳಿಕೊಡುತ್ತೇವೆ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬೇಯಿಸಿ ನಂತರ ಅದಕ್ಕೆ ಈರುಳ್ಳಿ ಬೆಳ್ಳುಳ್ಳಿ ಬೇವಿನೆಲೆ ಮೂರು ಚಮಚ ಧನಿಯಾ 8 ಮೆಣಸು 1 ಚಮಚ ಜೀರಿಗೆ ಕಾಲು ಚಮಚ ಮೆಂತೆ ಕಾಲು ಚಮಚ ಓಂಕಾಳು ಇವೆಲ್ಲವನ್ನು ಹಾಕಿ ಬೆಂಕಿಯನ್ನು ಕಡಿಮೆಯಾಗಿ ಉರಿಸಿಕೊಂಡು ಸ್ವಲ್ಪ ಕಾಲ ಬೇಯಿಸಬೇಕು.

ಇದಾದಮೇಲೆ ಸಪರೇಟ್ ಆಗಿ 8 ಬ್ಯಾಡಿಗಿ ಮೆಣಸಿಕಾಯಿ 4 ಗುಂಟೂರ್ ಮೆಣಸಿನಕಾಯಿ ಇದಕ್ಕೆ ಚಿಟಿಕೆಯಷ್ಟು ಅರಿಶಿಣ ಕೊಂಬನ್ನು ಹಾಕಿ ಚೆನ್ನಾಗಿ ಹುರಿದಿಟ್ಟುಕೊಂಡು ಇಡಬೇಕು. ಇದಾದ ನಂತರ ಇದಕ್ಕೆ ಸ್ವಲ್ಪ ಹುಳಿ ಹಾಕಿ ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿಟ್ಟುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ಸ್ವಲ್ಪ ಈರುಳ್ಳಿ-ಬೆಳ್ಳುಳ್ಳಿ ಕಾಯಿತುರಿ ಧನಿಯಾ ಬೀಜಗಳನ್ನು ಹಾಕಿ ಹುರಿದಿಟ್ಟುಕೊಂಡು ಇದನ್ನು ಮಿಕ್ಸರ್ ಗೆ ನೀರು ಹಾಕದೆ ಹುಡಿಯಾಗಿ ರುಬ್ಬಿಟ್ಟುಕೊಳ್ಳಬೇಕು. ಈಗ ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಈರುಳ್ಳಿ ಹಾಗೂ ಕರಿಬೇವಿನ ಎಲೆ ಹಾಕಿ ಅದಕ್ಕೆ ಚಿಕನ್ ಅನ್ನು ಹಾಕಿ ಹುರಿಯಬೇಕು.

ಮಂಗಳೂರು ಚಿಕನ್ ಮಾಡಬೇಕಾದರೆ ಒಂದು ಜ್ಞಾಪಕ ಇಡಬೇಕು. ಚಿಕನ್ ಅನ್ನು ಮಸಾಲೆ ಗಿಂತ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡರೆ ರುಚಿ ಜಾಸ್ತಿ. ಇದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ಮುಚ್ಚಳ ಇಟ್ಟು ಐದು ನಿಮಿಷಗಳ ಕಾಲ ಬೇಯಿಸಬೇಕು. ಇದಾದ ನಂತರ ಇದಕ್ಕೆ ಮಸಾಲೆಯನ್ನು ಹಾಕಿ ಅದಕ್ಕೆ ತುರಿದು ಹುರಿದಿರುವ ತೆಂಗಿನಕಾಯಿ ಪುಡಿಯನ್ನು ಹಾಕಿ ಇದೆಲ್ಲಾ ಆದನಂತರ ಕೊತ್ತುಂಬರಿಸೊಪ್ಪನ್ನು ಹಾಕಿ ಬೇಯಿಸಿದರೆ ನಿಮ್ಮ ನೆಚ್ಚಿನ ಮಂಗಳೂರು ಸ್ಟೈಲ್ ಕೋಳಿ ಸಾರು ತಿನ್ನಲು ಸಿದ್ಧ. ಮಂಗಳೂರು ಶೈಲಿಯ ಕೋಳಿ ಸಾರನ್ನು ಮುದ್ದೆ ಚಪಾತಿ ಅನ್ನ ಹಾಗೂ ಕೋಳಿ ರೊಟ್ಟಿಯಲ್ಲಿ ಕೂಡ ತಿನ್ನಬಹುದು. ನೀವು ಕೂಡ ಒಮ್ಮೆ ಇದೇ ತರ ಟ್ರೈ ಮಾಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಕಾಮೆಂಟ್ ಬಾಕ್ಸಲ್ಲಿ.

Comments are closed.